ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೆನ್ನೆ ಪಕ್ಷಕ್ಕೆ ಸಂಬಂಧಿಸಿದಂತೆ ಗಟ್ಟಿ ಸಂದೇಶವೊಂದನ್ನ ಹೊರಡಿಸಿದ್ದು, ಪಾರ್ಟಿಯೊಳಗಿದ್ದುಕೊಂಡು ಬಿಜೆಪಿ ಮತ್ತು ಆರ್.ಎಸ್.ಎಸ್.ಗೆ ಅಂಜುವವರಿಗೆ ಪಕ್ಷದಲ್ಲಿ ಜಾಗವಿಲ್ಲ.. ನಿಮ್ಮ ಅಗತ್ಯತೆ ನಮ್ಮ ಪಕ್ಷಕ್ಕಿಲ್ಲ ಎಂದು ಎಂದಿದ್ದಾರೆ.
ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ತಂತಡದೊಂದಿಗೆ ಆನ್ಲೈನ್ ಸಭೆಯಲ್ಲಿ ಮಾತನಾಡಿದ ಅವರು, ಹೆದರುವವರನ್ನು ಹೊರಗೆ ಬಿಟ್ಟು ಹೆದರದವರನ್ನು ಒಳಗೆ ಕರೆತರಬೇಕಿದೆ. ನಮ್ಮಲ್ಲಿ ಭಯಗ್ರಸ್ತರಿದ್ದಾರೆ. ಅಂತವರು ಪಕ್ಷ ಬಿಟ್ಟು ಆರ್.ಎಸ್.ಎಸ್ ಸೇರಿಕೊಳ್ಳಿ. ನಿಮ್ಮ ಅಗತ್ಯತೆ ನಮ್ಮ ಪಕ್ಷಕ್ಕಿಲ್ಲ ಎಂದು ರಾಹುಲ್ ಗಾಂಧಿ ಗಟ್ಟಿ ಸಂದೇಶವೊಂದನ್ನ ಹೊರಡಿಸಿದ್ದಾರೆ.
ರಾಹುಲ್ ಗಾಂಧಿಯವರ ಈ ಮಾತು ಸಮಾಜಿಕ ಜಾಲತಾಣ ಮತ್ತು ಅನೇಕ ಮಾಧ್ಯಮಗಳು ವರದು ಮಾಡಿದ್ದು ಈಗ ವೈರಲ್ ಆಗಿದೆ. ಕಾಂಗ್ರೆಸ್ ನಲ್ಲಿ ಈಗ ಹೊಣೆಗೇಡಿಗಳು, ಹೆದರುವವರು ಹೆಚ್ಚು ತುಂಬಿಕೊಂಡಿದ್ದಾರೆ. ಅವರು ಬಿಜೆಪಿ ಮತ್ತು ಆರ್.ಎಸ್.ಎಸ್ ಗಳಿಗೆ ಹೆದರುತ್ತಾರೆ, ಅವುಗಳ ಟ್ರೋಲ್ ಆರ್ಮಿಗೆ ಮಂಡಿಯೂರಿ ಶರಣಾಗತರಾಗಿದ್ದಾರೆ. ಸಾರ್ವಜನಿಕವಾಗಿ ತಮ್ಮ ಪಕ್ಷವನ್ನು, ನಾಯಕರನ್ನು ಸಮರ್ಥಿಸಿಕೊಳ್ಳಲಾಗದಷ್ಟು ಅಸಮರ್ಥಕವಾಗಿದ್ದಾರೆ. ಇದಕ್ಕೆ ಕಾರಣ ಬಹುತೇಕರು ಆರ್.ಎಸ್.ಎಸ್ ಐಡಿಯಾಲಜಿಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಒಪ್ಪುತ್ತಾರೆ. ಅಧಿಕಾರ ರಾಜಕಾರಣಕ್ಕಾಗಿ ಅವರು ಕಾಂಗ್ರೆಸ್ ನಲ್ಲಿದ್ದಾರೆ, ಮನಸು ಆರ್.ಎಸ್.ಎಸ್ ಜತೆಯೇ ಇದೆ. ರಾಹುಲ್ ಅವರು ಹೇಳಿದಂತೆ ಹೊಣೆಗೇಡಿಗಳಲ್ಲದ, ಎಂಥ ನಿರ್ದಯ ಟ್ರಾಲ್ ಗಳನ್ನಾದರೂ ಧೈರ್ಯವಾಗಿ ಎದುರಿಸಿ ನಿಲ್ಲುವ ಜನರು ಕಾಂಗ್ರೆಸ್ ನಿಂದ ಹೊರಗೆಯೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂಥವರನ್ನು ಒಳಗೊಳ್ಳುವ ಪ್ರಯತ್ನವನ್ನು ಆ ಪಕ್ಷ ಮಾಡಬೇಕು. ಹೆದರಿ ಸಾಯುವವರಿಗಿಂತ ಹೋರಾಡಿ ಸಾಯುವವರು ಎಷ್ಟೋ ಮೇಲು ಎಂಬುದು ರಾಅಹುಲ್ ಗಾಂಧಿ ಅವರ ಮಾತಿನ ತಿರುಳು.
ಸಿಂಧಿಯಾ ಉದಾಹರಣೆಯನ್ನು ಉಲ್ಲೇಖಿಸಿ ಅವರು ಪಕ್ಷವನ್ನು ಉಳಿಸಬೇಕಿತ್ತು. ಆದರೆ ಹೆದರಿಕೊಂಡು ಪಕ್ಷ ಬಿಟ್ಟು ಆರ್.ಎಸ್.ಎಸ್ ಸೇರಿಕೊಂಡಿದ್ದಾರೆ. ಕಾಂಗ್ರೆಸ್ ನ ಹಲವು ಹಿರಿಯ ನಾಯಕರು ಇತ್ತೀಚಿನ ದಿನಗಳಲ್ಲಿ ಬಿಜೆಪಿಗೆ ಸೇರಲು ಪಕ್ಷವನ್ನು ತೊರೆದಿದ್ದಾರೆ. ಅವರಲ್ಲಿ ಸಿಂಧಿಯಾ ಮತ್ತು ಜಿತಿನ್ ಪ್ರಸಾದ ಸೇರಿದ್ದಾರೆ. ಇನ್ನು ನಟಿ ಖುಷ್ಬೂ ಸುಂದರ್ ಅವರಲ್ಲದೆ ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡರಾದ ನಾರಾಯಣ್ ರಾಣೆ ಮತ್ತು ರಾಧಾಕೃಷ್ಣ ವಿಖ್ ಪಾಟೀಲ್ ಕೂಡ 2019ರಲ್ಲಿ ಪಕ್ಷವನ್ನು ತ್ಯಜಿಸಿದ್ದರು.
ಇನ್ನು ಕಾಂಗ್ರೇಸ್ ಪಾಳಯದಲ್ಲಿ ಬಿಜೆಪಿಗೆ ಹೆದರುವುವವರಿದ್ದರೆ ಮತ್ತು ಆರ್ೆಸ್ೆಸ್ ಮನಸ್ಥಿತಿ ಇರುವವರಿದ್ದರೆ ಅವರೆಲ್ಲರಿಗೂ ಹೊರಗೆ ಹೋಗಲು ಬಾಗಿಲು ತೋರಿಸಿರುವ ರಾಹುಲ್ ಗಾಂಧಿಯವರ ನಡೆಯನ್ನು ಸಮಾಜಿಕ ಜಾಲತಾಣದಲ್ಲಿ ಹಲವರು ಬೆಂಬಲಿಸಿದ್ಧಾರೆ. ಇನ್ನು ಪಕ್ಷವನ್ನು ಸೈದ್ದಾಂತಿಕವಾಗಿ ಕಟ್ಟಲು ದೈರ್ಯವಿರುವಂತವರನ್ನು ಕರೆತರಲು ಹೇಳಿದನ್ನು ತಮ್ಮ ಕಾರ್ಯಕರ್ತರು ಬೆಂಬಲಿಸಿದ್ದಾರೆ.
ಜೂಮ್ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ವಿಭಾಗದ ಸುಮಾರು 3,500 ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ್ಧಾರೆ.
ನೆನ್ನೆ ಜೂಮ್ ಮೀಟಿಂಗ್ ಬಳಿಕ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಗಡಿಯಲ್ಲಿ ಚೀನಾ ಕ್ಯಾತೆ, ಬೆಲೆ ಏರಿಕೆ, ಲಸಿಕೆ ಕೊರತೆ ಮುಂತಾದ ಸಮಸ್ಯೆಗಳನ್ನು ದೇಶಕ್ಕೆ ತಂದಿಟ್ಟವರು ಯಾರು ಎಂದು ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ. ಶತಮಾನಗಳ ಕಾಲ ನಿರ್ಮಿಸಲಾದ ದೇಶವನ್ನು ಸೆಕೆಂಡ್ ಗಳಲ್ಲಿ ಅಳಿಸಿದ್ದಾರೆ. ದೇಶದಲ್ಲಿ ನಿರುದ್ಯೋಗ, ಬೆಲೆಏರಿಕೆ, ಗಡಿ ರೇಖೆಯಲ್ಲಿ ಸಮಸ್ಯೆ,ರೈತರ ಪ್ರತಿಭಟನೆ ಮುಂತಾದ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ವಿದೇಶ ಹಾಗೂ ರಕ್ಷಣಾ ನೀತಿಯನ್ನು ಭಾರತ ಸರ್ಕಾರವು ದೇಶೀಯ ರಾಜಕೀಯ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದ್ದು, ನಮ್ಮ ದೇಶವನ್ನು ದುರ್ಬಲಗೊಳಿಸಿದೆ.ಭಾರತ ಎಂದಿಗೂ ಇಷ್ಟೊಂದು ಅಭದ್ರ ಸ್ಥಿತಿ ಎದುರಿಸಿರಲಿಲ್ಲ’ ಎಂದು ಹೇಳಿದ್ದಾರೆ.