
ವಿಜಯಪುರ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಅಪ್ರಾಪ್ತ ಬಾಲಕನ ಜೊತೆ ಎರಡು ಮಕ್ಕಳ ತಾಯಿ ಪಾರಾರಿಯಾಗಿದ್ದಾಳೆ. ಪಟ್ಟಣದ 16 ವರ್ಷದ ಮಲ್ಲಿಕಾರ್ಜುನ್ ಹಿರೇಮಠ ಹಾಗೂ 28 ವರ್ಷದ ಮಲ್ಲಮ್ಮ ಪರಾರಿಯಾಗಿದ್ದಾರೆ.
ಮಲ್ಲಿಕಾರ್ಜುನ ಹಾಗೂ ಮಲ್ಲಮ್ಮನ ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಬಾಲಕನನ್ನು ತನ್ನ ಕಾಮದಾಹಕ್ಕೆ ಸೇಳೆದಿರುವ ಮಲ್ಲಮ್ಮ ಬಾಲಕನನ್ನು ಕರೆದುಕೊಂಡು ಪರಾರಿಯಾಗಿದ್ದಾಳೆ. ಮಗನನ್ನು ಕರೆದುಕೊಂಡು ಮಹಿಳೆ ನಾಪತ್ತೆಯಾದ ಬಗ್ಗೆ ಬಾಲಕನ ತಾಯಿ ಠಾಣೆಗೆ ದೂರು ನೀಡಿದ್ದಾರೆ.

ಮಲ್ಲಿಕಾರ್ಜುನ ಹಾಗೂ ಮಲ್ಲಮ್ಮ ಪ್ರೇಮ ಪ್ರಕರಣದ ಬಗ್ಗೆ ಆಕೆಯ ಮನೆಯವರ ಜೊತೆಗೂ ಮಾತನಾಡಿ ಬುದ್ಧಿ ಹೇಳುವ ಕೆಲಸವನ್ನು ಬಾಲಕನ ಕುಟುಂಬ ಮಾಡಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಮಲ್ಲಿಕಾರ್ಜುನ ಕೂಡಾ ಆಕೆಯನ್ನ ಬಿಟ್ಟಿರಲು ತಯಾರಿರಲಿಲ್ಲ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಬಾಲಕ ಮಲ್ಲಿಕಾರ್ಜುನನಿಗೆ ಬೆಳ್ಳಿ ಸರವನ್ನು ಮಲ್ಲಮ್ಮ ಗಿಫ್ಟ್ ಮಾಡಿದ್ದಳಂತೆ.
ವಿಚಾರ ತಿಳಿದ ಬಾಲಕನ ತಾಯಿ ಹಾಗು ಸಹೋದರಿ ಸರವನ್ನು ವಾಪಸ್ ಕೊಟ್ಟಿದ್ದು, ಆ ಬಳಿಕ ಬಾಲಕ ಪಿನಾಯಿಲ್ ಕುಡಿದು ಆತ್ಮಹತ್ಯೆಗೂ ಯತ್ನಿಸಿದ್ನಂತೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಇಬ್ಬರಿಗೂ ಬುದ್ಧಿ ಮಾತು ಹೇಳಲಾಗಿತ್ತು. ಆದರೂ ಎರಡು ಮಕ್ಕಳ ತಾಯಿ ಒಂದು ಮಗುವನ್ನು ಬಿಟ್ಟು 4 ವರ್ಷದ ಮಗನ ಜೊತೆಗೆ ಓಡಿ ಹೋಗಿದ್ದಾಳೆ.