ನಾಳೆ ಹೊಸ ವರ್ಷಾಚರಣೆ ಸ್ವಾಗತಕ್ಕೆ ಜನತೆ ಸಜ್ಜಾಗಿದ್ದಾರೆ. ಪಾರ್ಟಿ ಪ್ರಿಯರು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಎಂಜಿ ರೋಡ್, ಬ್ರಿಗೇಡ್ ರೋಡ್ ಬಿಟ್ಟು ಉಳಿದೆಡೆಗೆ ಅನುಮತಿ ಪಡೆಯಬೇಕು. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ನ್ಯೂ ಇಯರ್ ಸೆಲೆಬ್ರೇಟ್ ಮಾಡುವಂತಿಲ್ಲ. ಪಬ್ಲಿಕ್ ಪ್ಲೇಸ್ನಲ್ಲಿ ಸಂಭ್ರಮಾಚರಣೆಗೆ ಅನುಮತಿ ಅಗತ್ಯ ಎಂದಿದ್ದಾರೆ. ಇನ್ನು ನ್ಯೂ ಇಯರ್ ಹೆಸರಲ್ಲಿ ಹುಚ್ಚಾಟ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದಿದ್ದು, ಗೃಹ ಸಚಿವ ಪರಮೇಶ್ವರ್ ಕೂಡ ಎಚ್ಚರಿಕೆಯಿಂದ ನ್ಯೂ ಇಯರ್ ಆಚರಣೆ ಮಾಡಿ ಎಂದಿದ್ದಾರೆ.

ರಾಜ್ಯ ರಾಜಧಾನಿಯಲ್ಲಿ ನ್ಯೂ ಇಯರ್‌ಗೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. 2024ಕ್ಕೆ ಬೈ ಬೈ ಹೇಳಿ 2025 ವರ್ಷವನ್ನ ಗ್ರ್ಯಾಂಡ್ ವೆಲ್ ಕಂ ಮಾಡಿಕೊಳ್ಳಲು ರಾಜಧಾನಿಯ ಜನರು ಹಾಗೂ ಪಬ್, ಬಾರ್ ಮಾಲೀಕರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಈ ವರ್ಷ ಗ್ರ್ಯಾಂಡ್ ಸೆಲೆಬ್ರೇಷನ್‌ಗೆ ಬಾರ್ , ಪಬ್ ಮಾಲೀಕರು ಸಿದ್ಧತೆ ಮಾಡಿಕೊಂಡಿದ್ದು, ಈ ಬಾರಿ ಲೇಡಿಸ್ ಸೇಫ್ಟಿ ಬಗ್ಗೆ ವಿಶೇಷ ಒತ್ತು ನೀಡಲಾಗಿದೆ. ವುಮೆನ್ ಸೇಫ್ಟಿಗಾಗಿ ಪಬ್‌ಗಳಲ್ಲಿ ಲೇಡಿ ಬೌನ್ಸರ್ಸ್ ನಿಯೋಜನೆ ಮಾಡಿಕೊಳ್ಳಲಾಗಿದೆ. ಮಹಿಳೆಯರು ಕುಣಿದು ಕುಪ್ಪಳಿಸಲು ಸಪರೇಟ್ ಡ್ಯಾನ್ಸ್ ಫ್ಲೋರ್ ಕೂಡ ಮಾಡಿಕೊಳ್ಳಲಾಗಿದ್ದು, ಕಪಲ್ಸ್, ಲವರ್ಸ್‌ಗೆ ಪ್ರತ್ಯೇಕ ಅವಕಾಶ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪಾಟಿ ನಡೆಯುವ ಸ್ಥಳದಲ್ಲಿ ಲೇಡಿ ಬೌನ್ಸರ್ಸ್, ಸಿಸಿಟಿವಿ ಅಳವಡಿಕೆ ಮಾಡಿಕೊಳ್ಳಲಾಗಿದ್ದು, ಇದರ ಜೊತೆಗೆ ಪಾರ್ಟಿ ನಂತರ ಮಹಿಳೆಯರನ್ನು ಮನೆಗೆ ತಲುಪಿಸುವ ಉದ್ದೇಶದಿಂದ ಸುರಕ್ಷಾ ಕ್ಯಾಬ್ ಸರ್ವಿಸ್ ಬಗ್ಗೆ ಕೂಡಾ ಚಿಂತನೆ ಮಾಡಲಾಗಿದೆ. ಇನ್ನು ಹೊಸ ವರ್ಷಾಚರಣೆ ಹಿನ್ನೆಲೆ, ವಿಶ್ವವಿಖ್ಯಾತ ಜೋಗ ಜಲಪಾತವನ್ನ ಹೊರಗಡೆಯಿಂದ ನೋಡಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಜೋಗಾ ವೀಕ್ಷಣಾ ಸ್ಥಳದಿಂದ 50 ಮೀಟರ್ ದೂರದಲ್ಲಿ ಸಾರ್ವಜನಿಕರಿಗೆ ವೀಕ್ಷಣೆ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಚಿಕ್ಕಮಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗಿದೆ. ನ್ಯೂ ಇಯರ್ ವೇಳೆ ಲಕ್ಷಾಂತರ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಲಿದ್ದು, ಹೀಗಾಗಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ.

ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಕಾರಣ ಸಾಲು ಸಾಲು ರಜೆ ಹಿನ್ನೆಲೆ ಮಂತ್ರಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಸಾವಿರಾರು ಭಕ್ತರ ಭೇಟಿಯಿಂದ ರಾಯರ ಮಠದಲ್ಲಿ ತುಂಬಿ ತುಳುಕುತ್ತಿದೆ. ಇನ್ನು ಮಂಡ್ಯ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ ಭಾರೀ ತಯಾರಿ ಮಾಡಿಕೊಳ್ಳಲಾಗಿದೆ. ಈ ಮಧ್ಯೆ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಾಳೆ ಮಧ್ಯರಾತ್ರಿಯಿಂದ ಜನವರಿ 1ರವರೆಗೆ ನಿಷೇದಾಜ್ಞೆ ಹೇರಲಾಗಿದೆ. KRS ಹಿನ್ನೀರು, ಬಲಮುರಿ, ಎಡಮುರಿ, ಮುತ್ತತ್ತಿ ಫಾರೆಸ್ಟ್ ಸೇರಿದಂತೆ ಹಲವೆಡೆ ನಿಷೇದಾಜ್ಞೆ ಹೇರಲಾಗಿದೆ.

ಹೊಸ ವರ್ಷಾಚರಣೆಗೆ ಶ್ರೀರಾಮಸೇನೆ ವಿರೋಧ ವ್ಯಕ್ತಪಡಿಸಿದ್ದು, ಶೋಕಾಚಾರಣೆ ಸಂದರ್ಭದಲ್ಲಿ ಹೊಸ ವರ್ಷಾಚರಣೆ ಬೇಡ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆಗ್ರಹಿಸಿದ್ದಾರೆ. ಮನಮೋಹನ್ ಸಿಂಗ್ ನಿಧನ ಹಿನ್ನೆಲೆ, ರಾಜ್ಯದಲ್ಲಿ ಶೋಕಾಚರಣೆ ಇದೆ. ಹೀಗಿರುವಾಗ ಸರ್ಕಾರ ಅನುಮತಿ ಕೊಟ್ಟಿರುವುದು ಸರಿಯಲ್ಲ. ಗಣೇಶೋತ್ಸವ ಇತ್ಯಾದಿ ಸಂದರ್ಭಳಗಳಲ್ಲಿ 10 ಗಂಟೆಗೆ ಡಿಜೆ ಬಂದ್ ಮಾಡಿಸ್ತಾರೆ. ಆದ್ರೆ ಹೊಸ ವರ್ಷಚಾರಣೆ ವೇಳೆ ಮಧ್ಯರಾತ್ರಿಯವರೆಗೂ ಅವಕಾಶ ಕೊಡ್ತಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದಿದ್ದಾರೆ.