ಬೆಂಗಳೂರು: ಜಿಲ್ಲಾಸ್ಪತ್ರೆಗಳಲ್ಲಿ ಗುಣಮಟ್ಟದ ಔಷಧಿ ಒದಗಿಸಲು ಸರ್ಕಾರ ನಿಯಮ ಜಾರಿ ಮಾಡಿದೆ. ಹೆಚ್ಚು ಬೇಡಿಕೆ ಇರುವ ಔಷಧಿಗಳನ್ನು ಆಸ್ಪತ್ರೆಗಳಿಗೆ ಪೂರೈಕೆ ಮಾಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ತಿಳಿಸಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ತಳವಾರ ಸಾಬಣ್ಣ ಪ್ರಶ್ನಿಸಿದ ಅವರು, ಜಿಲ್ಲಾ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇದೆ. ತೀವ್ರ ರೋಗಗಕ್ಕೆ ಒಳಗಾದ ರೋಗಿಗಳಿಗೆ ಔಷಧಿ ಸಿಗುತ್ತಿಲ್ಲ. ಬಡವರು ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಕಳಪೆ ಔಷಧಿ ಸರಬರಾಜು ಆಗುತ್ತಿದೆ. ಈ ಬಗ್ಗೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು, ಔಷಧಿ ಗುಣಮಟ್ಟದ ಬಗ್ಗೆ ಇಲಾಖೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಮ್ಮಲ್ಲಿ ಸರಬರಾಜು ಆಗುವ ಔಷಧಿ ಬಗ್ಗೆ ನಾವೇ ತಪಾಸಣೆ ಮಾಡುತ್ತಿದ್ದೇವೆ. ಇಡೀ ದೇಶದಲ್ಲಿ ಕಳಪೆ ಔಷಧಿಗಳ ಸಮಸ್ಯೆ ಇದೆ. ಕಳಪೆ ಔಷಧಿ ತಡೆಗೆ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. KSMSCL ಅವರು ಔಷಧಿ ಗುಣಮಟ್ಟದ ಬಗ್ಗೆ ವರದಿ ಕೊಟ್ಟಿರುತ್ತಾರೆ. ಆದರೂ ಖರೀದಿ ಮಾಡಿದ ಮೇಲೆ, ಸಪ್ಲೈ ಆದ ಮೇಲೆ ನಾವು ಕ್ವಾಲಿಟಿ ಚೆಕ್ ಮಾಡಿಸುತ್ತೇವೆ. ಮುಂದಿನ ದಿನಗಳಲ್ಲಿ ಕಂಪನಿಗಳಿಗೆ ಹೋಗಿ ನಾವೇ ಔಷಧಿ ಗುಣಮಟ್ಟದ ಪರಿಶೀಲನೆಗೆ ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ನಿಯಮಗಳ ಬದಲಾವಣೆಗೆ ಹಣಕಾಸು ಇಲಾಖೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಔಷಧಿ ಖರೀದಿಗೆ ಟೆಂಡರ್‌ದಾರರು ಮುಂದೆ ಬರುತ್ತಿಲ್ಲ. ಹೀಗಾಗಿ ಸ್ಥಳೀಯವಾಗಿಯೇ ಔಷಧಿ ಖರೀದಿಗೆ ಸೂಚನೆ ನೀಡಲಾಗಿದೆ. ಸಾಕಷ್ಟು ಹಣವನ್ನ ಔಷಧಿ ಖರೀದಿಗೆ ಆಸ್ಪತ್ರೆಗಳಿಗೆ ನೀಡಲಾಗಿದೆ. ಬೇಡಿಕೆ ಅನುಗುಣವಾಗಿ ಔಷಧಿ ಕೊಡಲು ಆಗುತ್ತಿಲ್ಲ. ಈ ವರ್ಷ 1,084 ಡ್ರಗ್ ಖರೀದಿಗೆ ನಿರ್ಧಾರ ಮಾಡಲಾಗಿದೆ. ಬೇಡಿಕೆ ಇರುವ ಡ್ರಗ್‌ಗಳನ್ನ ಖರೀದಿಗೆ ಮುಂದಾಗಿದ್ದೇವೆ. ಔಷಧಿ ಸರಿಯಾಗಿ ಸರಬರಾಜು ಆಗಬೇಕು. ಈ ನಿಟ್ಟಿನಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಟೆಂಡರ್ ಪ್ರಕ್ರಿಯೆ ಸರಳೀಕೃತ ಮಾಡುತ್ತಿದ್ದೇವೆ. ತಮಿಳುನಾಡಿನ ವ್ಯವಸ್ಥೆ ಸರಿಯಾಗಿದೆ. ಅದರಂತೆ ನಿಯಮ ಸರಳೀಕರಣ ಮಾಡಿದ್ದೇವೆ. ಔಷಧಿ ಕೊರತೆ ನೀಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಳಪೆ ಔಷಧಿ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಔಷಧಿ ಕಂಪನಿಗಳು ಬೇರೆ ರಾಜ್ಯದವರು. ಹೀಗಾಗಿ ಕ್ರಮಕೈಗೊಳ್ಳಲು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಬಾಣಂತಿಯ ಸಾವು ತಡೆಗೂ ಬಜೆಟ್‌ನಲ್ಲಿ ಹಣ ಒದಗಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಡ್ರಗ್ ರೀ ಕಾಲ್ ಪಾಲಿಸಿ ತರುತ್ತಿದ್ದೇವೆ ಎಂದರು.