
ಲಡಾಖ್ ನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕೆಂದು ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರದ ಕಣ್ಣು ತೆರೆಸುವ ಕ್ರಿಯೆಯಲ್ಲಿ ಪ್ರತಿಭಟನೆ ಕಾವು ತೀವ್ರ ಸ್ವರೂಪ ಪಡೆದ ಹಿನ್ನಲೆಯಲ್ಲಿ 4 ಮಂದಿ ಪ್ರಾಣ ಕಳೆದುಕೊಂಡರೆ ಮತ್ತೊಂದು ಕಡೆ ಸೋನಮ್ ವಾಂಗ್ಚುಕ್ ರವರನ್ನು NIA ಸಿಬ್ಬಂದಿಗಳು ದೇಶ ದ್ರೋಹದಡಿ ಬಂಧಸಲಾಗಿದೆ.

ಈ ಬಗ್ಗೆ ʼ Xʼ ನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರಕ್ಕೆ ಛಾಟಿ ಬಿಸಿದ್ದಾರೆ. ಲಡಾಖ್ ರಾಜ್ಯಕ್ಕೆ ಬಿಜೆಪಿ, ಆರ್ ಎಸ್ ಎಸ್ ದ್ರೋಹ ಬೆಗೆಯುತ್ತಿದೆ.

ಹತ್ಯೆ ಮಾಡುವುದನ್ನು ನಿಲ್ಲಿಸಿ ಗಲೆಭೆಯನ್ನು, ನಿಲ್ಲಿಸಿ ಬೇದರಿಸುವುದು ಮತ್ತು ಬಂಧಿಸುವುದನ್ನು ನಿಲ್ಲಿಸಿ, ಎಂದು ಸಾಮಾಜಿಕ ಜಾಲತಾಣದ ಮೂಲಕ ಕೇಂದ್ರ ಸರ್ಕಾರವು ಜನ ವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸಿದಲ್ಲದೆ. ಲಡಾಖ್ ಬೇಡಿಕೆಗೆ ಧ್ವನಿಗೂಢಿಸಿ ಅವರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ ಎಂದು ಮೋದಿ ಸರ್ಕಾರಕ್ಕೆ ತಿಳಿ ಹೇಳಿದ್ದಾರೆ.


