ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅನ್ನದಾನ ಸೇವೆಗೆ ಬರೋಬ್ಬರಿ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ತೆಲಂಗಾಣ ಸಚಿವ. ತೆಲಂಗಾಣ ಸರ್ಕಾರದ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಮಗಳ ಮದುವೆ ವಿಚಾರದಲ್ಲಿ ಪ್ರಾರ್ಥನೆ ಮಾಡಿದ್ದ ಸಚಿವ ಶ್ರೀನಿವಾಸ್ ರೆಡ್ಡಿಗೆ ಪ್ರಾರ್ಥನೆ ಫಲಿಸಿದೆ. ಹೀಗಾಗಿ ಹರಕೆ ತೀರಿಸಲು ಬಂದಿದ್ದ ಸಚಿವರು 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ತೆಲಂಗಾಣ ಸರ್ಕಾರದಲ್ಲಿ ಕಂದಾಯ, ವಸತಿ, ಮಾಹಿತಿ ಸಂಪರ್ಕ ಇಲಾಖೆ ಖಾತೆ ಸಚಿವರಾಗಿರುವ ಶ್ರೀನಿವಾಸ್ ರೆಡ್ಡಿ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ಸುಳ್ಳಿ ಮೂಲಕ ಒಂದು ಕೋಟಿ ಚೆಕ್ ಹಸ್ತಾಂತರ ಮಾಡಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗದೋಷಕ್ಕೆ ಪರಿಹಾರ ನೀಡುವ ಕ್ಷೇತ್ರ ಅನ್ನೋದು ಭಕ್ತರ ನಂಬಿಕೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗಪೂಜೆ ನೆರವೇರಿಸಿದರೆ ಕಷ್ಟ ಕಾರ್ಪಣ್ಯಗಳು ನಿವಾರಣೆ ಆಗುತ್ತವೆ ಅನ್ನೋ ಕಾರಣಕ್ಕೆ ಭಕ್ತರು ಅತಿ ಹೆಚ್ಚಾಗಿ ಭೇಟಿ ನೀಡುತ್ತಾರೆ. ಅಷ್ಟೇ ಅಲ್ಲದೆ ಕ್ರಿಕೆಟಿಗ ರವಿಶಾಸ್ತ್ರಿ ಸೇರಿದಂತೆ ಬಾಲಿವುಡ್ ನಟ, ನಟಿಯರೂ ಹಲವು ಬಾರಿ ಬಂದು ಹೋಗಿದ್ದಾರೆ.












