ಇತ್ತೀಚೆಗಷ್ಟೇ ಬಿಡುಗಡೆಯಾದ ಎಸ್ಎಸ್ ರಾಜಮೌಳಿ ಅವರ ಚಿತ್ರ, RRR, ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸಿದೆ! ಉತ್ತರ ಭಾರತದ ಭಾಗದಲ್ಲಿ ಇಂದು ಮಾರ್ಚ್ 30 ರಂದು 100 ಕೋಟಿ ರೂ.ಗಳ ಕರೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಕೇವಲ ಐದು ದಿನಗಳಲ್ಲಿ ಮೂರು ಅಂಕಿಗಳ ಗಡಿ ದಾಟಿದೆ ಎಂಬುದು ದೊಡ್ಡ ಸಾಧನೆಯಾಗಿದ್ದು, ವಿವೇಕ್ ಅಗ್ನಿಹೋತ್ರಿ ಅವರ ದಿ ಕಾಶ್ಮೀರ್ ಫೈಲ್ಸ್ ಮತ್ತು ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರಗಳನ್ನು ಹಿಂದಿಕ್ಕಿ 2022ರಲ್ಲಿ ವೇಗವಾಗಿ 100 ಕೋಟಿ ರೂ ಕ್ಲಬ್ಗೆ ಪ್ರವೇಶಿಸಿದೆ.
ಬಾಹುಬಲಿ: ದಿ ಬಿಗಿನಿಂಗ್, ಬಾಹುಬಲಿ: ದಿ ಕನ್ಕ್ಲೂಷನ್ 2.0 ಮತ್ತು ಪುಷ್ಪ: ದಿ ರೈಸ್ ನಂತರ, RRR ಹಿಂದಿ ಅವತರಣಿಕೆಯಲ್ಲಿ ಬಾಕ್ಸ್ ಆಫೀಸ್ ಅನ್ನು ದೂಳೆಬ್ಬಿಸಿದ ದಕ್ಷಿಣ ಭಾರತದ ಐದನೇ ಚಲನಚಿತ್ರವಾಗಿದೆ. ದಿ ಕಾಶ್ಮೀರ್ ಫೈಲ್ಸ್ ಮತ್ತು ಗಂಗೂಬಾಯಿ ಕಥಿಯಾವಾಡಿಯನ್ನು ಹಿಂದಿಕ್ಕಿ 2022ರಲ್ಲಿ ವೇಗವಾಗಿ 100 ಕೋಟಿ ರೂ ಕ್ಲಬ್ಗೆ ಪ್ರವೇಶಿಸಿದೆ. 100 ಕೋಟಿ ಕ್ಷಬ್ ಸೇರಲು ಈ ಎರಡು ಚಿತ್ರಗಳು ಕ್ರಮವಾಗಿ 8 ಮತ್ತು 13 ದಿನಗಳನ್ನು ತೆಗೆದುಕೊಂಡಿವೆ.
ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಇಂದು ಈ ಕುರಿತು ಟ್ವೀಟ್ ಮಾಡಿರುವ ಅವರು, “ಹಿಂದಿ ಅವತರಣಿಕೆಯ #RRR ಚಿತ್ರ 5 ದಿನಗಳಲ್ಲಿ ಆಲ್ ಇಂಡಿಯಾ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ಕಲೆಕ್ಷನ್ ದಾಟಿದೆ.” ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು, ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದರು.