ಫುಟ್‌ಬಾಲ್ ತಾರೆ ಕ್ರಿಸ್ತಿಯಾನೋ ರೊನಾಲ್ಡೊ ಅವರು ಅಲ್‌ನಸ್ರ್ ಕ್ಲಬ್ ಸೇರ್ಪಡೆ ಕಾರ್ಯಕ್ರಮವು ಹೊಸ ದಾಖಲೆ ನಿರ್ಮಿಸಿದೆ. ಇದನ್ನು 2022ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕಿಂತ ಹೆಚ್ಚಿನ ಜನರು ವೀಕ್ಷಣೆ ಮಾಡಿದ್ದಾರೆ.
ಸೌದಿ ಅರೇಬಿಯಾದ ಅಲ್ ನಸ್ರ್ ಫುಟ್‌ಬಾಲ್ ಕ್ಲಬ್ ಜತೆ ಒಪ್ಪಂದ ಮಾಡಿಕೊಂಡಿರುವ ರೊನಾಲ್ಡೋ ಜ.3 ರಂದು ಕ್ಲಬ್ ಗೆ ಸೇರ್ಪಡೆಯಾಗಿದ್ದರು.
ಈ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಸುಮಾರು 300 ಕೋಟಿ ಜನ ವೀಕ್ಷಣೆ ಮಾಡಿದ್ದಾರೆ. ಸುಮಾರು 40 ಚಾನೆಲ್‌ಗಳಲ್ಲಿ ಈ ಕಾರ್ಯಕ್ರಮದ ನೇರಪ್ರಸಾರ ನಡೆದಿದೆ ಎಂದು ವರದಿ ತಿಳಿಸಿದೆ.
ಇನ್ನು 2022ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ವಿಶ್ವದಾದ್ಯಾಂತ ಸುಮಾರು 250 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು.