ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರ ನಡೆಯುವ ಹೈವೋಲ್ಟೇಜ್ ಏಷ್ಯಾಕಪ್ ಟಿ-20 ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದ್ದು, ಇಡೀ ವಿಶ್ವವೇ ಈ ಪಂದ್ಯದ ಮೇಲೆ ಕಣ್ಣು ನೆಟ್ಟಿದೆ.
ಪಾಕಿಸ್ತಾನ ವಿರುದ್ಧದ ಈ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ 100ನೇ ಟಿ-೨೦ ಪಂದ್ಯವಾಗಿ ಸ್ಮರಣೀಯವಾಗಿದೆ. ಆದರೆ ನಾಯಕ ರೋಹಿತ್ ಶರ್ಮ ಗೆ ಟಿ-20 ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಸರದಾರ ಎನಿಸಿಕೊಳ್ಳಲು 10 ರನ್ ಮಾತ್ರ ಬೇಕಿದೆ.
ಟಿ-20 ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ನ್ಯೂಜಿಲೆಂಡ್ ನ ಮಾರ್ಟಿನ್ ಗುಪ್ಟಿಲ್ ಹೆಸರಿನಲ್ಲಿದೆ. ಗುಪ್ಟಿಲ್ 3497 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮ 3487 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ರೋಹಿತ್ ಶರ್ಮ 10 ರನ್ ಗಳಿಸಿದರೆ ಗುಪ್ಟಿಲ್ ದಾಖಲೆ ಮುರಿದು ಟಿ-20 ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.
ಪಂದ್ಯಕ್ಕೂ ಮುನ್ನ ಮಾತನಾಡಿದ ನಾಯಕ ರೋಹಿತ್ ಶರ್ಮ, ನಾವು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೆಲವೊಂದು ಪ್ರಯೋಗ ಮಾಡಲಿದ್ದೇವೆ. ಅದು ಸದ್ಯಕ್ಕೆ ಗುಟ್ಟಾಗಿಯೇ ಇರಲಿ. ಪಂದ್ಯ ಆರಂಭವಾದಾಗ ನಿಮಗೆ ಅರ್ಥವಾಗುತ್ತದೆ ಎಂದರು.
ಪ್ರತಿ ಪಂದ್ಯದಲ್ಲೂ ನಾವು ಪ್ರಯೋಗ ಮಾಡುತ್ತೀರುತ್ತೇವೆ. ಕೆಲವೊಮ್ಮೆ ಪ್ರಯೋಗ ಯಶಸ್ಸು ಆಗುತ್ತದೆ. ಕೆಲವೊಮ್ಮೆ ಕೈಕೊಡುತ್ತದೆ. ಹಾಗಂತ ನಾವು ನಾವು ಅದನ್ನು ನಿಲ್ಲಿಸುವುದಿಲ್ಲ. ನಾವು ಈ ಹಾದಿಯಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಅದನ್ನು ದಾಟುವುದೇ ನಮ್ಮ ಗುರಿ ಎಂದು ರೋಹಿತ್ ಶರ್ಮ ಹೇಳಿದ್ದರು.






