ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಎದ್ದಿರುವ ಪಠ್ಯಪುಸ್ತಕ ಪರಿಷ್ಕರಣೆಯ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ನೋಡೊದಷ್ಟು ಉಳುಕುಗಳು ಪರಿಷ್ಕರಣೆಯಾದ ಪುಸ್ತಕದಲ್ಲಿ ಕಾಣಸಿಗುತ್ತಿದೆ.
ಹೌದು, ರೋಹಿತ್ ಚಕ್ರತೀರ್ಥ ಸಮಿತಿಯ ಪರಿಷ್ಕರಣೆ ಮಾಡಲಾದ ಪಠ್ಯದಲ್ಲಿ 6 ನೇ ತರಗತಿಯ ಕನ್ನಡ ಭಾಷಾ ಪಠ್ಯಪುಸ್ತಕದಿಂದ ಕನ್ನಡ ರಾಜ್ಯೋತ್ಸವದ ಪಾಠವನ್ನು ಕೈ ಬಿಡಲಾಗಿದೆ ಎಂದು ಆರೋಪಗಳು ಕೇಳಿಬರುತ್ತಿದೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಸಮಿತಿಯು 6ನೇ ತರಗತಿಯ ಕನ್ನಡ ಪಠ್ಯಪುಸ್ತಕದಿಂದ ಭುವನೇಶ್ವರಿ ಮೆರವಣಿಗೆ ಪಾಠವನ್ನು ಕೈಬಿಟ್ಟಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳು ಹರಿದಾಡುತ್ತಿದ್ದು ಈಗ ಈ ವಿವಾದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಸಿರಿಗನ್ನಡ ಪ್ರಥಮ ಭಾಷಾ ಪಠ್ಯಪುಸ್ತಕಗಳ 6ನೇ ತರಗತಿಯ ಅಧ್ಯಾಯದಲ್ಲಿ ಹಿಂದಿನ ಸಮಿತಿಯು ನಿಗದಿಪಡಿಸಿದ ಪಠ್ಯಕ್ರಮದ ಪ್ರಕಾರ ಭುವನೇಶ್ವರಿ ಮೆರವಣೆಗೆ ಪಠ್ಯ ಇತ್ತು. ಕನ್ನಡ ರಾಜ್ಯೋತ್ಸವವನ್ನು ವಿವರಿಸಿದ ಪಾಠವನ್ನು ಈಗ ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ.