ಬೆಂಗಳೂರಿನಲ್ಲಿ (Bangalore) ಮತ್ತೊಂದು ರೋಡ್ ರೇಜ್ (Road Rage) ಪ್ರಕರಣ ಬೆಳಕಿಗೆ ಬಂದಿದ್ದು, ಏರ್ಪೋರ್ಟ್ ರಸ್ತೆಯಲ್ಲಿ (Airport road) ಕಿಡಿಗೇಡಿಯೊಬ್ಬ ಕಾರ್ ಅಡ್ಡ ಹಾಕಿ ಅಟ್ಟಹಾಸ ಮೆರೆದಿರುವುದನ್ನು ವಿಡಿಯೋ ಮಾಡಿ ಎಕ್ಸ್ನಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.

ಬೆಳಗ್ಗಿನ ಜಾವ 3 ಗಂಟೆ ವೇಳೆ ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಅನಿರೀಕ್ಷಿತ ಆಘಾತಕಾರಿ ಘಟನೆ ನಡೆದಿದೆ. ದುಷ್ಕರ್ಮಿಯೊಬ್ಬ ದ್ವಿಚಕ್ರ ವಾಹನಕ್ಕೆ ಯಾವುದೇ ನಂಬರ್ ಪ್ಲೇಟ್ ಹಾಗೂ ಹೆಲ್ಮೆಟ್ ಇಲ್ಲದೆ ಸಂಚರಿಸಿ ಕಿಡಿಗೇಡಿತನ ಮೆರೆದಿದ್ದಾನೆ.
ಈ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ರಸ್ತೆಯ ತುಂಬ ಬೇಕಾಬಿತ್ತಿ ಬೈಕ್ ಓಡಿಸುತ್ತಾ ಅರ್ಧದಷ್ಟು ಏಕಮುಖ ಸೇತುವೆಯನ್ನು ನಿರ್ಬಂಧಿಸುತ್ತಾನೆ. ಡಿಮ್ ಅಂಡ್ ಡಿಪ್ ಮಾಡಿ, ಹಾರ್ನ್ ಮಾಡಿ, 100 ಬಾರಿ ಸೈಡ್ ಕೊಡುವಂತೆ ಕೇಳಿದರೂ ನೀಡಿಲ್ಲ.
ಇಷ್ಟೇ ಅಲ್ಲದೆ ಕಾರ್ ನ ಸೈಡ್ ಮಿರರ್ಗಳನ್ನು ಒಡೆದು ವೇಗವಾಗಿ ಬೈಕ್ ಓಡಿಸುವ ಪ್ರಾರಂಭಿಸಿದ್ದ. ನಂತರ ನನ್ನನ್ನು ಒಂದೆರಡು ಕಿಲೋಮೀಟರ್ಗಳವರೆಗೆ ಹಿಂಬಾಲಿಸಿ ತಡೆದನು. ಈ ರೀತಿಯ ಎನ್ಕೌಂಟರ್ಗಳು ಬೆಂಗಳೂರಿನ ರಸ್ತೆಗಳಲ್ಲಿ ಸರ್ವೇಸಾಮಾನ್ಯವಾಗುತ್ತಿವೆ. ವಿಪರ್ಯಾಸವೆಂದರೆ ನಾನು ಕನ್ನಡ ಮಾತನಾಡುವಾಗ ‘ಕನ್ನಡ ಮಾತನಾಡು’ ಎಂದು ಕೇಳುತ್ತಲೇ ಇದ್ದರು. ಕ್ಲಾಸಿಕ್ ರಸ್ತೆ ನಡವಳಿಕೆಗಳು! ಎಂದು ಬೆಂಗಳೂರು ಪೊಲೀಸರಿಗೆ (Bangalore police) ಟ್ಯಾಗ್ ಮಾಡಿದ್ದಾರೆ.