ಬ್ರಿಟನ್ ನ ಅತ್ಯಂತ ಕಿರಿಯ ಪ್ರಧಾನಿಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ರಿಷಿ ಸುನಕ್ ಇಂದು ಪದಗ್ರಹಣ ಮಾಡಲಿದ್ದಾರೆ.
ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ಬ್ರಿಟನ್ ರಕ್ಷಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಲಿಜ್ ಟ್ರುಸ್ ರಾಜೀನಾಮೆ ನೀಡಿದ ನಂತರ ಕನ್ಸರ್ವೆಟಿವ್ ಪಾರ್ಟಿ ಮುಖ್ಯಸ್ಥರಾಗಿ ರಿಷಿ ಸುನಕ್ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದರು.

ಮಾಜಿ ಪ್ರಧಾನಿ ಬೊರಿಸ್ ಜಾನ್ಸನ್ ಮತ್ತೆ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದರೂ ನಂತರ ಹಿಂದೆ ಸರಿದಿದ್ದರು. ಅಲ್ಲದೇ ಪೆನ್ನಿ ಮೌರ್ಡೆಂಟ್ ಸಂಸದರ ಬೆಂಬಲ ಪಡೆಯಲು ವಿಫಲರಾದ ಹಿನ್ನೆಲೆಯಲ್ಲಿ ರಿಷಿ ಸುನಕ್ ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾಗಿದ್ಧಾರೆ.
ರಿಷಿ ಸುನಕ್ ಇಂದು ಬ್ರಿಟನ್ ರಾಜ ಚಾರ್ಲ್ಸ್ ಅವರನ್ನು ಭೇಟಿ ಮಾಡಲಿದ್ದಾರೆ. ಕ್ವಿನ್ಸ್ ಎಲಿಜಬೆತ್ ನಿಧನದ ನಂತರ ಅಧಿಕಾರಕ್ಕೇರುತ್ತಿರುವ ಮೊದಲ ಪ್ರಧಾನಿ ರಿಷಿ ಆಗಿದ್ದಾರೆ. ಸೆಪ್ಟೆಂಬರ್ ೮ರಂದು ಕ್ವೀನ್ ಎಲಿಜಬೆತ್ ನಿಧನರಾಗಿದ್ದೂ 2 ದಿನ ಮುನ್ನ ಲಿಜ್ ಕ್ರುಸ್ ಪ್ರಧಾನಿ ಹುದ್ದೆ ಅಲಂಕರಿಸಿದ್ದರು.






