ಚೀನಾ ಸೈನಿಕರೊಂದಿಗೆ ಗಲ್ವಾನ್ ಘರ್ಷಣೆ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿದ ಬಾಲಿವುಡ್ ನಟಿ ರಿಚಾ ಚಡ್ಡಾ ತೀವ್ರ ಟೀಕೆ ಎದುರಿಸಿದ ನಂತರ ಕ್ಷಮೆಯಾಚಿಸಿದ್ದಾರೆ ಮತ್ತು ಟ್ವೀಟ್‌ಅನ್ನು ಡಿಲೀಟ್ ಮಾಡಿದ್ದಾರೆ.
ನಾನು ಟ್ವೀಟ್ ಮಾಡಿದ ಆ 3 ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ಅದಕ್ಕೆ ಕ್ಷಮೆಯಾಚಿಸುತ್ತೇನೆ ಉದ್ದೇಶಪೂರ್ವಕವಾಗಿ ನಾನು ಹಾಗೆ ಮಾತನಾಡಿಲ್ಲ. ನನ್ನ ಮಾತಿನಿಂದ ಸೇನೆಯಲ್ಲಿರುವ ನನ್ನ ಸಹೋದರರಿಗೆ ನೋವುಂಟು ಮಾಡಿದ್ದರೆ ಕ್ಷಮೆತಾಚಿಸುತ್ತೇನೆ ಎಂದಿದ್ದಾರೆ.
@BediSaveena pic.twitter.com/EYHeS75AjS
— RichaChadha (@RichaChadha) November 24, 2022
ಪಾಕ್ ಆಕ್ರಮಿತ ಕಾಶ್ಮೀರ(POK)ವನ್ನ ಹಿಂಪಡೆಯಲು ಭಾರತೀಯ ಸೇನೆ ಸಿದ್ದವಾಗಿದೆ ಎಂದು ಲೆಫ್ಟಿನೆಂಟ್ ಉಪೇಂದ್ರ ದ್ವಿವೇದಿ ಹೇಳಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಮಾಡಿದ ರಿಚಾ Galwan Says Hi ಎಂದು ಟ್ವೀಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದರು.
