ಕಲಬುರಗಿ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಕಿಡ್ನಾಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಹೊರ ಬಂದಿರುವ ಶಾಸಕ ಎಚ್.ಡಿ. ರೇವಣ್ಣ ಟೆಂಪಲ್ ರನ್ ನಡೆಸಿದ್ದಾರೆ.

ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ (Ganagapur) ದತ್ತನ (Dattatreya Temple) ಮೊರೆ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವಸ್ಥಾನದಲ್ಲಿ ದತ್ತನ ನಿರ್ಗುಣ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ರೇವಣ್ಣ ದೇವಸ್ಥಾನದಲ್ಲಿಯೇ ದೇವರ ಸಾನಿಧ್ಯದಲ್ಲಿ ಇದ್ದರು.
ಈ ಹಿಂದೆ ಕೂಡ ಹಲವು ಬಾರಿ ರೇವಣ್ಣ ಅವರು ಗಾಣಗಾಪುರಕ್ಕೆ ಬಂದು ದತ್ತಾತ್ರೇಯನ ಆಶೀರ್ವಾದ ಪಡೆದಿದ್ದರು.