ಬೆಂಗಳೂರು: ಹೆಚ್ ಡಿ ರೇವಣ್ಣರಿಗೆ ಶತ್ರುಗಳ ಕಾಟ ಹೆಚ್ಚಾಗಿದ್ಯಂತೆ. ಮೊದಲೇ ಅಪಾರ ದೈವ ಭಕ್ತರಾಗಿರೋ ಹೆಚ್.ಡಿ ರೇವಣ್ಣ ನಿವಾಸಕ್ಕೆ ಕೇರಳದಿಂದ ವಿಭೂತಿ ಕೈ ದಾರ ಇರೋ ದೇವರ ಪ್ರಸಾದವನ್ನ ವ್ಯಕ್ತಿಯೊಬ್ಬರು ತಂದಿದ್ದಾರೆ. ಬಸವಗುಡಿಯ ರೇವಣ್ಣ ನಿವಾಸಕ್ಕೆ ಕೇರಳ ವ್ಯಕ್ತಿಯೊಬ್ಬ ಇಂದು ಪ್ರಸಾದ ತಂದಿದ್ರು. ಆದ್ರೆ ರೇವಣ್ಣ ಇಲ್ಲ ಅಂತ ಕೇರಳ ಮೂಲದ ವ್ಯಕ್ತಿಯ ಭೇಟಿಗೆ ಅವಕಾಶ ನೀಡದೇ ಸಿಬ್ಬಂದಿ ವಾಪಸ್ ಕಳಿಸಿದ್ದಾರೆ.
ಹೆಚ್.ಡಿ.ರೇವಣ್ಣ ನಿವಾಸಕ್ಕೆ ಬಂದಿದ್ದ ಕೇರಳದ ಪಾಲಕ್ಕಾಡ್ ನಿವಾಸಿ ವಿಜಯ್ ಕುಮಾರ್‌ರೇವಣ್ಣರಿಗೆ ಶತೃದೋಷ ಇದೆ. ಹೀಗಾಗಿ ತ್ರಿಶೂರ್ ನ ದುರ್ಗಾದೇವಿ ದೇಗುಲದಲ್ಲಿ ಪೂಜೆ ಸಲ್ಲಿಸಿ ವಿಭೂತಿ ತಂದಿದ್ದೇವೆ. ಕೇರಳದ ಜೆಡಿಎಸ್ ಲೀಡರ್ ಕೃಷ್ಣಕುಟ್ಟಿ ಎಂಬುವವರು ಕಳಿಸಿದ್ರು ಹೀಗಾಗಿ ಪ್ರಸಾದ ಕೊಡಲಿಕ್ಕೆ ಬಂದಿರೋದಾಗಿ ತಿಳಿಸಿದ್ದಾರೆ.