ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ. ಯಾವುದೇ ಪುರಾವೆ ಇಲ್ಲದಿದ್ರೂ ಕೇಸ್ ದಾಖಲಿಸಿ SIT ಅಧಿಕಾರಿಗಳು ಬಂಧನ ಮಾಡಿದ್ದಾರೆ ಅಂತ ಮಾಜಿ ಸಚಿವ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ. ಶನಿವಾರ ಸಂಜೆ ಅರೆಸ್ಟ್ ಆದ ಬಳಿಕ ಇವತ್ತು ಭಾನುವಾರ SIT ಪೊಲೀಸರು ರೇವಣ್ಣ ಅವರನ್ನ ಬೆಂಗಳೂರಿನ ಶಿವಾಜಿನಗರದ ಬೌರಿಂಗ್ ಅಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಕರೆತಂದ್ರು. ಈ ವೇಳೆ ರೇವಣ್ಣ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರು.ನನ್ನ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಯಾವುದೇ ಪುರಾವೆ ಸಿಕ್ಕಿಲ್ಲ.ಹೀಗಾಗಿ ಕಿಡ್ನ್ಯಾಪ್ ಕೇಸ್ ಹಾಕಿದ್ದಾರೆ.ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಏ.28ಕ್ಕೆ ನನ್ನ ಮೇಲೆ FIR ದಾಖಲಿಸಿದ್ರು. ಈವರೆಗೂ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಅದಕ್ಕಾಗಿ ಮೇ 2 ರಂದು ಇನ್ನೊಂದು ಕೇಸ್ ಹಾಕಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ ಅಂತ SIT ವಿರುದ್ಧ ರೇವಣ್ಣ ಕೆಂಡಕಾರಿದ್ರು. ಕೆಲವೇ ಹೊತ್ತಲ್ಲಿ ರೇವಣ್ಣ ರನ್ನ ಜಡ್ಜ್ ಮುಂದೆ ಹಾಜರಿಪಡಿಸೋ ಸಾಧ್ಯತೆ ಇದೆ.
Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿಯರಲ್ಲಿ ಖುಷಿ ಮುಖರ್ಜಿ (Khushi Mukherjee) ಕೂಡ ಒಬ್ಬರು. ಸದಾ ತುಂಡುಡುಗೆ ತೊಟ್ಟು ಸದ್ದು ಮಾಡುತ್ತಿರುವ ಬೆಡಗಿ ಎಂದೇ ಹೇಳಬಹುದು. ಇದೀಗ...
Read moreDetails