
ಹೆಚ್.ಎಸ್.ಆರ್ ಲೇ ಔಟ್ ಪೊಲೀಸರಿಗೆ ಕೊಲೆ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಐಜಿಪಿ ಓಂ ಪ್ರಕಾಶ್ ಮನೆಗೆ ಪೊಲೀಸರು ದೌಡಾಯಿಸಿದ್ದಾರೆ. ಕೊಲೆ ಆದ ಸ್ಥಳದಲ್ಲಿ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ, ಮಗಳು ಕೃತಿ ಸೇರಿದಂತೆ ಮನೆಯಲ್ಲಿ ಮೂವರು ಇದ್ದರು. ಶಾರ್ಫ್ ವೆಪನ್ನಿಂದ ಹಿರಿದು ಕೊಲೆ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಹೇಳಿದ್ದಾರೆ. ತೀವ್ರ ರಕ್ತಸ್ರಾವ ಆಗಿ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ. ಪ್ರಕರಣ ಸಂಬಂಧ ಇದುವರೆಗೂ ಯಾರನ್ನು ಬಂಧನ ಮಾಡಿಲ್ಲ. ಹೆಂಡತಿ ಹಾಗೂ ಮಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗ್ತಿದೆ. ಯಾವ ಕಾರಣಕ್ಕೆ ಕೊಲೆ ಆಗಿದೆ ಅನ್ನೋದು ಇನ್ನೂ ತನಿಖೆ ಆಗ್ತಾ ಇದೆ. ಈ ಹಂತದಲ್ಲಿ ಏನು ಹೇಳಲು ಆಗಲ್ಲ, ಮರಣೋತ್ತರ ಪರೀಕ್ಷೆ ಆಗಬೇಕು, ಅದರ ವರದಿ ಬರಲಿ ಎಂದಿದ್ದಾರೆ.
ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ನಡೆದ ಸ್ಥಳದಲ್ಲಿ ಎರಡು ಚಾಕು ಹಾಗು ಒಂದು ಬಾಟೆಲ್ ಪತ್ತೆಯಾಗಿದೆ. ಎರಡು ಚಾಕುವಿನಿಂದ ಓಂ ಪ್ರಕಾಶ್ ಕೊಲೆ ಮಾಡಲಾಗಿದೆ. ಮಗಳು ಹಾಗೂ ತಾಯಿ ಇಬ್ಬರೂ ಸೇರಿ ಕೊಲೆ ಮಾಡಿರೋ ಬಗ್ಗೆ ಪೊಲೀಸರಲ್ಲಿ ಅನುಮಾನ ಮೂಡಿದೆ. ಸದ್ಯ ಎರಡು ಚಾಕು ಹಾಗೂ ಒಂದು ಬಾಟೆಲ್ ಜಪ್ತಿ ಮಾಡಿರೋ ಪೊಲೀಸರು, ಗ್ರೌಂಡ್ ಫ್ಲೋರ್ ಮನೆಯನ್ನೂ ಸೀಜ್ ಮಾಡಲಾಗಿದೆ. ಚಾಕುಗಳ ಮೇಲೆ ಇರೋ ಫಿಂಗರ್ ಫ್ರಿಂಟ್ ಪರಿಶೀಲನೆಗಾಗಿ ಚಾಕುಗಳು ಹಾಗು ಬಾಟೆಲ್ ಅನ್ನು FSL ಗೆ ಕಳುಹಿಸಲಾಗಿದೆ.

ತಾಯಿ ಮಗಳು ಇಬ್ಬರು ಸೇರಿ ಕೊಲೆ ಮಾಡಿರೋ ಬಗ್ಗೆ ಇದ್ದ ಅನುಮಾನ ಬಹುತೇಕ ಖಚಿತ ಆಗುವಂತಿದೆ. ಇದೇ ಕಾರಣಕ್ಕೆ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಮಾಡಿದ ಬಳಿಕ ಬೆಡ್ ಶೀಟ್ ಸುತ್ತಿಟ್ಟಿದ್ದ ತಾಯಿ ಮಗಳನ್ನು ಪೊಲೀಸ್ರು ವಿಚಾರಣೆ ನಡೆಸಿದ್ದು, ಮೊದಲಿಗೆ ಕಣ್ಣಿಗೆ ಕಾರದ ಪುಡಿ ಎರಚಿದ ಬಳಿಕ ಚಾಕು ಇರಿದಿರುವುದನ್ನು ಓಂ ಪ್ರಕಾಶ್ ಅವರ ಹೆಂಡತಿ ಪಲ್ಲವಿ ಒಪ್ಪಿಕೊಂಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕೊಲೆ ಮಾಡಿದ್ದು ನಾನೇ ಎಂದು ನೇರವಾಗಿ ಹೇಳಿದ್ದಾರೆ.

ಪೊಲೀಸ್ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಹೊರ ಬಿದ್ದಿದ್ದು, ಕೊಲೆ ಆರೋಪಿ ಪಲ್ಲವಿ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಕಳೆದ ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇ ಪದೇ ಗನ್ ತಂದು ನನಗೆ ಮತ್ತು ನನ್ನ ಮಗಳಿಗೆ ಶೂಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ರು. ಬೆಳಗ್ಗೆಯಿಂದ ಬೇರೆ ಬೇರೆ ವಿಚಾರಕ್ಕೆ ಮನೆಯಲ್ಲಿ ಜಗಳ ಶುರುವಾಗಿತ್ತು. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋದಾಗ ನಮ್ಮನ್ನೇ ಕೊಲೆ ಮಾಡಲು ಓಂಪ್ರಕಾಶ್ ಯತ್ನ ನಡೆಸಿದ್ರು. ಈ ವೇಳೆ ನಮ್ಮನ್ನು ಉಳಿಸಿಕೊಳ್ಳಲು ನಾವು ಹೋರಾಟ ಮಾಡಿದ್ವಿ.

ಓಂಪ್ರಕಾಶ್ ಮೇಲೆ ಖಾರದ ಪುಡಿ ಹಾಗು ಅಡುಗೆ ಆಯಿಲ್ ಸುರಿದು, ಕೈಕಾಲು ಕಟ್ಟಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಚುಚ್ಚಿದೆ ಎಂದು ಪಲ್ಲವಿ ಹೇಳಿಕೆ ನೀಡಿದ್ದಾರೆ. ಆ ನಂತರ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದರು. ಸಂಜೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದು ಓಂಪ್ರಕಾಶ್ ಪತ್ನಿ ಪಲ್ಲವಿ ತಿಳಿಸಿದ್ದಾರೆ. ಕೊಲೆ ಪ್ರಕರಣದಲ್ಲಿ A-1 ಆರೋಪಿ ಆಗಲಿದ್ದು, ಪ್ರಕರಣದಲ್ಲಿ ಓಂಪ್ರಕಾಶ್ ಮಗಳ ಪಾತ್ರದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ಡಿಸಿಪಿ ಸಾ.ರಾ ಫಾತೀಮಾ ನೇತೃತ್ವದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.