ರಾಷ್ಟ್ರ ರಾಜಕಾರಣದಲ್ಲಿ ಮತ್ತ ಮುನ್ನೆಲೆಗೆ ಬಂದಿರುವ ಆಪರೇಷನ್ ಕಮಲ ಭಾರೀ ಸದ್ದು ಮಾಡಿದ್ದು ಈ ಭಾರೀ ಮಹಾರಾಷ್ಟ್ರದ ಸರಣಿ. ಈಗಾಗಲೇ ಮೈತ್ರಿ ಪಕ್ಷದ ಸಚಿವ ಸೇರಿದಂತೆ ಅಸಮಾಧಾನಿತ ಶಾಸಕರನ್ನು ಹೈಜಾಕ್ ಮಾಡಿಉವ ಬಿಜೆಪಿ ಕುದುರೆ ವ್ಯಾಪಾರ ಶುರು ಮಾಡಿದೆ.
ಈಗಾಗಲೇ ಅಸಮಾಧಾನಿತರನ್ನು ಸೂರತ್‌ನ ಪ್ರತಿಷ್ಠಿತ ರೆಸಾರ್ಟ್ ಒಂದರಲ್ಲಿ ಇರಿಸಿದ್ದು ತನ್ನ ಪಕ್ಷದ ಶಾಸಕರು ಕೈ ತಪ್ಪಿ ಹೋಗದಂತೆ ಬಿಜೆಪಿ ಯೋಜನೆ ರೂಪಿಸಿದ್ದು ದೆಹಲಿಯಿಂದ ಗುಜರಾತ್‌ಗೆ 106 ಶಾಸಕರನ್ನು ಶಿಫ್ಟ್ ಮಾಡಿದೆ.
ಮೂಲಗಳು ಹೇಳುವ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಶಾಸಕರನ್ನು ಭೇಟಿ ಮಾಡಿ ಭಿನ್ನಮತೀಯ ಗುಂಪಿನ ನಾಯಕ ಏಕನಾಥ್ ಶಿಂಧೆ ಜೊತೆ ಮಾತುಕತೆ ನಡೆಸಲಿದ್ದಾರೆ ನಂತರ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಎಂವಿಎ ನಾಯಕರು ಬಿಜೆಪಿ ಶಾಸಕರಿಗೆ ಗಾಳ ಹಾಕಿದ್ದು ಒಂದು ವೇಳೆ ಬಹುಮತ ಸಾಬೀತು ಮಾಡನೇಕಾದ ಅನಿವಾರ್ಯತೆ ಎದುರಾದರೆ ತಮ್ಮಗೆ ಬೆಂಬಲ ನೀಡುವಂತೆ ಕೇಳಿಕೊಂಡಿರುವುದಾಗಿ ವರದಿಯಾಗಿದೆ.
ಪರಿಸ್ಥಿತಿಯನ್ನು ತುಂಬಾ ನಾಜೂಕಾಗಿ ನಿಭಾಯಿಸುತ್ತಿರುವ ಬಿಜೆಪಿ ಹೈಕಮಾಂಡ್ ತಮ್ಮ ಪಕ್ಷದ ಶಾಸಕರು ಬೇರೆಡೆ ವಾಲದಂತೆ ನೋಡಿಕೊಳ್ಳತ್ತಿದೆ.
ಆಪರೇಷನ್ ಕಮಲ ಸಂಪೂರ್ಣವಾಗಿ ವಿಧಾನಪರಿಷತ್ ಚುನಾವಣೆ ವೇಳೆ ನಡೆದಿದ್ದು ಅಸಮಾಧಾನಿತ 25 ಶಿವಸೇನೆ ಶಾಸಕರು ಮೊದಲು ಅಹಮದವಾದ್‌ಗೆ ಆಗಮಿಸಿದ್ದಾರೆ ಮತ್ತು ಇನ್ನಷ್ಟು ನಾಯಕರು ಆಗಮನವಾಗಬೇಕಿದೆ ಎಂದು ತಿಳಿದು ಬಂದಿದೆ.