ಪಿಎಸ್ಐ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ಗಳ ನೇಮಕಾತಿ ಅಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಪುತ್ರನ ಕೈವಾಡವಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಕೀಲ ಎ.ಪಿ.ರಂಗನಾಥ್ ಸಿಐಡಿ ಮತ್ತು ಎಡಿಜಿಪಿಗೆ ದೂರು ನೀಡಿದ್ದಾರೆ.
ಮಾಜಿ ಸಿಎಂ ಪುತ್ರ ಹಾಗೂ ಸಚಿವ ಡಾ.ಅಶ್ವತ್ಥನಾರಾಯಣ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕೆಂದು ವಕೀಲ ಎ.ಪಿ.ರಂಗನಾಥ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ದೂರಿನ ನಂತರ ಮಾತನಾಡಿದ ಅವರು, ಪಿ.ಎಸ್.ಐ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಹಗರಣ ಕೇಳಿಬಂದಿದ್ದು, ಎಡಿಜಿಪಿ ಅಮೃತ್ ಪೌಲ್, ಮಂತ್ರಿ ಅಶ್ಚಥ್ ನಾರಾಯಣ್ ಹೆಸರು ಕೇಳಿ ಬಂದಿದೆ . OMR ಶೀಟ್ ಚೇಂಜ್ ಮಾಡಿ ದುಡ್ಡು ಕಲೆಕ್ಟ್ ಮಾಡ್ತಿದ್ದಾರೆ ಅನ್ನೊ ಚರ್ಚೆ ಆಗ್ತಿದೆ . ಅಶ್ವಥ್ ನಾರಾಯಣ್ ರನ್ನ ಸಂಪುಟದಿಂದ ಕೈ ಬಿಡಬೇಕು ಅಮೃತ್ ಪೌಲ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಗಳ ಮಗ 63 ಜನರಿಂದ ಮಾಜಿ ಮುಖ್ಯಮಂತ್ರಿ ಮಗ ಹಣ ಪಡೆದು ಕೆಲಸ ಕೊಡಿಸಿಲ್ಲ ಈ ಕುರಿತು ತನಿಖೆಯಾಗಬೇಕು ಎಂದು ಹೇಳಿದ್ದಾರೆ.