ಕರ್ನಾಟಕ ಸರ್ಕಾರವು ಬಹಳ ವರ್ಷಗಳಿಂದ ರಾಜ್ಯದ ವಿಧನಸಭೆಗೆ ಅಯ್ಕೆಯಾಗುವ ಜನಪ್ರತಿನಿಧಿಗಳಿಗೆ ಮತ್ತು ಅವರ ಕುಟುಂಬ ವರ್ಗದ ಎಲ್ಲಾ ಸದಸ್ಯರುಗಳಿಗೆ ಅನಾರೋಗ್ಯದ ಸಂದರ್ಭದಲ್ಲಿ ಅವರ ಚಿಕಿತ್ಸಾ ವೆಚ್ಚವನ್ನು ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿಕೊಳ್ಳುತ್ತಿರುವುದು ಈಗ ಪ್ರಶ್ನಾರ್ಹವಾಗಿದೆ.
ಕಳೆದ ಐದಾರು ವರ್ಷಗಳಿಂದ ಈ ಬಗ್ಗೆ ಮಾಹಿತಿಗಳನ್ನು ಪಡೆದು ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ,ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ನಾನು ಪ್ರಶ್ನಿಸುತ್ತಾ ಹೋಗುತ್ತಿದ್ದೆ. ಯಾವಾಗ ಮಾಧ್ಯಮ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ವಿಧಾನಸಭಾ ಸದಸ್ಯರ ಹೆಸರುಗಳು ಜೊತೆ ಅವರು ಪಡೆದುಕೊಳ್ಳುತ್ತಿದ್ದ ಬಿಲ್ಲಿನ ಹಣ ನೋಡಿದ ಸಾರ್ವಜನಿಕರು ಹುಬ್ಬೇರಿಸಿ ತಮ್ಮ ತಮ್ಮಲ್ಲಿಯೇ ಇದು ಸರಿ ತಪ್ಪು ಎಂಬ ಬಗ್ಗೆ ವ್ಯಾಪಕ ಚರ್ಚೆ ಮಾಡಿಕೊಳ್ಳುತ್ತಿದ್ದರು.
ಪ್ರತಿ ಚುನಾವಣೆಯಲ್ಲೂ ಕೋಟಿಗಟ್ಟಲೆ ರೂಪಾಯಿಗಳನ್ನು ವೆಚ್ಚ ಮಾಡಿ ಮತದಾರರಿಗೆ ಹಲವಾರು ಅಮಿಷಗಳನ್ನು ಒಡ್ಡಿ ಹಣ ವಿತರಿಸಿ ಗೆದ್ದುಬಂದ ವ್ಯಕ್ತಿಗಳು ಅವರ ಮತ್ತು ಅವರ ಕುಟುಂಬದ ಆರೋಗ್ಯಕ್ಕೆ ಸಾರ್ವಜನಿಕರ ತೆರಿಗೆಯ ಖಜಾನೆ ಹಣ ಬೇಕಾಗಿತ್ತಾ? ಹೀಗೆ ಸಾರ್ವಜನಿಕರ ಬಾಯಿಗೆ ಎಲೆ ಅಡಿಕೆಯಂತೆ ಆಹಾರವಾಗಿತ್ತು. ಈ ಎಲ್ಲಾ ಸದಸ್ಯರಿಗೆ ಆರೋಗ್ಯ ವಿಮೆ ಮಾಡಿಸುವಂತೆ ಸ್ಪೀಕರ್ ಅವರಿಗೆ ನಾನು ಹೋದವರ್ಷ ಒಂದು ಪತ್ರವನ್ನು ಬರೆದಿದ್ದು ಅದಕ್ಕೆ ಇಲ್ಲಿಯವರೆಗೂ ಅವರಿಂದ ಯಾವುದೇ ಉತ್ತರ ಬರಲಿಲ್ಲ. ಈ ಕಾರಣಕ್ಕಾಗಿಯೇ ಸಾಕಷ್ಟು ಜನ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರು ಅನಾರೋಗ್ಯಕ್ಕೆ ಒಳಗಾಗಿದ್ದರು ಸಹಿತ ಆಸ್ಪತ್ರೆಯ ಬಿಲ್ಲುಗಳನ್ನು ಸಾರ್ವಜನಿಕರ ತೆರಿಗೆ ಹಣದ ಖಜಾನೆಯಿಂದ ಪಡೆದುಕೊಳ್ಳುವುದನ್ನು ನಿಲ್ಲಿಸಿಬಿಟ್ಟರು.
ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಕೆ ಮಾಡಿದರೆ ಕೆಲವೇ ಕೆಲವು ಸದಸ್ಯರು ಮಾತ್ರ ಈಗ ಆಸ್ಪತ್ರೆಯ ಬಿಲ್ಲುಗಳನ್ನು ಪಡೆಯುತ್ತಿದ್ದಾರೆ. ಹೀಗೆ ಹೋರಾಟವನ್ನು ಮುಂದುವರಿಸಿ 224 ಸದಸ್ಯರು ಸಹಿತ ಅವರ ಕುಟುಂಬ ವರ್ಗದ ಮತ್ತು ಅವರ ಅನಾರೋಗ್ಯದ ನಿಮಿತ್ತ ಆಗುವ ಆಸ್ಪತ್ರೆಯ ಬಿಲ್ಲುಗಳನ್ನು ಸಾರ್ವಜನಿಕರ ತೆರಿಗೆ ಹಣದ ಖಜಾನೆಯಿಂದ ಪಡೆಯದಂತೆ ಮಾಡಬೇಕಾಗಿದೆ.
ಅದುದರಿಂದ ವಿಧಾನಸಭಾ ಅಧ್ಯಕ್ಷರಾದ ತಾವುಗಳು ವಿಧಾನಸಭಾ ಸದಸ್ಯರುಗಳಿಗೆ ಅರೋಗ್ಯ ವಿಮೆಯನ್ನು ಮಾಡಿಸುವ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ಆನಾವಶ್ಯಕವಾಗಿ ಬಳಿಕೆ ಮಾಡುವುದನ್ನು ತಡೆಹಿಡಿಯಬಹುದಾಗಿದೆ ಮತ್ತು ವಿಧಾನಸಭಾ ಸದಸ್ಯರುಗಳು ಆರೋಗ್ಯದ ಕಡೆ ಸರ್ಕಾರವು ಹೆಚ್ಚಿನ ಗಮನಹರಿಸಿದಂತಾಗುತ್ತದೆ.
ರಾಜ್ಯದಲ್ಲಿ ಈ ವರ್ಷ ಕೊರೋನಾ ಸಾಂಕ್ರಾಮಿಕ ರೋಗದಿಂದ ಸಾವಿರಾರು ಜನ ಮೃತಪಟ್ಟು ಚಿಕಿತ್ಸೆ ಸಿಗದೆ ಬಳಲುತ್ತಿರುವ ಹಂತದಲ್ಲಿಯೇ ಕಲ್ಯಾಣ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಪ್ರವಾಹದಿಂದಾಗಿ ಜನರು ಮನೆಮಠಗಳನ್ನು ಕಳೆದುಕೊಂಡು ಅಹಾರಕ್ಕಾಗಿ ಹಾಹಾಕಾರ ಹಾಕುತ್ತಿರುವಂತಹ ಸಂದರ್ಭದಲ್ಲಿ ವಿಧಾನಸಭಾ ಸದಸ್ಯರು ಮತ್ತು ಅವರ ಕುಡುಂಬ ವರ್ಗದವರು ಸಾರ್ವಜನಿಕರ ತೆರಿಗೆ ಹಣದಿಂದ ಚಿಕಿತ್ಸೆ ಪಡೆಯುತ್ತಿರುವ ವಿಷಯವು ಸಾರ್ವಜನಿಕರ ಬಾಯಿಗೆ ಆಹಾರವಾಗಿದೆ.
ಈ ಹಿಂದೆ ವಿಧಾನಸಭಾ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಸನ್ಮಾನ ಶ್ರೀ ರಮೇಶ್ ಕುಮಾರ್ ಅವರು ಜನಪ್ರತಿನಿಧಗಳು ಮತ್ತು ಸರ್ಕಾರಿ ನೌಕರರು ಅನಾರೋಗ್ಯದಲ್ಲಿ ಚಿಕಿತ್ಸೆ ಪಡೆಯುವಂತೆ ಬಗ್ಗೆ ಒಂದು ಸುತ್ತೋಲೆಯನ್ನು ಹೊರಡಿಸಿದ್ದರು. 9964127890
ʼಜನಪ್ರತಿನಿಧಿಗಳು ಸೇರಿದಂತೆ ಸರ್ಕಾರಿ ನೌಕರರು ಅನಾರೋಗ್ಯವಾದಲ್ಲಿ ಸಾರ್ಕಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಅಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸೌಲಭ್ಯಗಳು ದೊರೆಯದಿದ್ದ ಪಕ್ಷದಲ್ಲಿ ವೈದ್ಯಾಧಿಕಾರಿಗಳು ಖಾಸಗಿ ಅಸ್ಪತ್ರೆಗೆ ದಾಖಲಾಗುವಂತೆ ಶಿಫಾರಸ್ಸು ಮಾಡಿದ್ದಲ್ಲಿ ಖಾಸಗಿ ಅಸ್ಪತೆಯ ಚಿಕಿತ್ಸೆ ವೆಚ್ಚವನ್ನು ನಿಯಮಾನುಸಾರ ನೀಡಲಾಗುವುದುʼ ಎಂದು ಆದೇಶ ಹೊರಡಿಸಿದ ಸುತ್ತೋಲೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾರಿಯಾಗಬೇಕಿತ್ತು. ಆದರೆ ಅದು ನೆನೆಗುದಿಗೆ ಬಿದ್ದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಗೌರವಾನ್ವಿತ ವಿಧಾನಸಭಾ ಅಧ್ಯಕ್ಷರಾದ ತಾವುಗಳು ಈ ನನ್ನ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ವಿಧಾನಸಭಾ ಸದಸ್ಯರುಗಳು ಮತ್ತು ಅವರ ಕುಟುಂಬದ ಆರೋಗ್ಯದ ಚಿಕಿತ್ಸೆಗಾಗಿ ಸಾರ್ವಜನಿಕರ ತೆರಿಗೆ ಹಣವನ್ನು ಬಳಿಸದಂತೆ ಮುತುವರ್ಜಿ ವಹಿಸುತ್ತೀರಿ ಎಂಬ ಆಶಯದೊಂದಿಗೆ “ಆರೋಗ್ಯ ವಿಮೆ” ಸೌಲಭ್ಯವನ್ನು ವಿಧಾನಸಭಾ ಸದಸ್ಯರಿಗೆ ಒದಗಿಸಿಕೊಡಬೇಕಾಗಿ ನನ್ನ ವಿನಮ್ರ ಪ್ರಾಥನೆ ಎಂದು ಹೆಚ್.ಎಂ. ವೆಂಕಟೇಶ್ ಅವರು ಪ್ರತದಲ್ಲಿ ಹೇಳಿದ್ದಾರೆ.
ಹೆಚ್.ಎಂ. ವೆಂಕಟೇಶ್ ಪತ್ರ ಇಲ್ಲಿದೆ: