ದರ್ಶನ್ & ಗ್ಯಾಂಗ್ (Darshan & gang) ಅಂದರ್ ಆಗಿರುವ ರೇಣುಕಾಸ್ವಾಮಿ ಕೊಲೆ ಕೇಸ್ ಗೆ (Renukaswamy murder case) ಸಂಬಂಧಪಟ್ಟಂತೆ ಮತ್ತೊಂದು ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಪವಿತ್ರಗೌಡ (Pavitra gowda) ಸ್ನೇಹಿತೆ ಸಮತಾಗೆ (Samatha) ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ನೋಟಿಸ್ ನೀಡಿದ್ರು. ವಿಚಾರಣೆ ವೇಳೆ ಪೊಲೀಸರಿಗೆ ಶಾಕ್ ಆಗೋ ಸಂಗತಿ ಹೊರ ಬಂದಿದೆ.

ರೇಣುಕಾಸ್ವಾಮಿಯ ಶವ ಫೋಸ್ಟ್ ಮಾರ್ಟಮ್ ಮಾಡುವ ವೇಳೆ ಸಮತಾ ಪತಿ ಡಾ. ಸುರೇಶ್ (Dr. Suresh) ಇನ್ಸಾರ್ಜ್ ವೈದ್ಯರು ಆಗಿದ್ರು. ರೇಣುಕಾಸ್ವಾಮಿ ಶವದ ಮರಣೋತ್ತರ ಪರೀಕ್ಷೆ ವರದಿ ಪೊಲೀಸ್ರ ಕೈ ಸೇರೋ ಮುನ್ನ ಪವಿತ್ರ ಹಾಗೂ ದರ್ಶನ್ ಭೇಟಿ ಮಾಡಿದ್ರು ಎಂಬ ಮಾಹಿತಿ ಲಭ್ಯವಾಗಿದ್ದು ಅನುಮಾನಗಳಿಗೆ ಕಾರಣವಾಗಿದೆ.
ಹೀಗಾಗಿ ಈ ಪೋಸ್ಟ್ ಮಾರ್ಟಮ್ ರಿಪೋರ್ಟ್‌ನಲ್ಲಿ ಗೋಲ್‌ಮಾಲ್ ಆಗಿದ್ಯಾ ಎನ್ನುವ ಅನುಮಾನ ಶುರುವಾಗಿದೆ. ಇದರ ಜೊತೆಗೆ ಸಮತಾ ಆಕೆಯ ಪತಿ ಡಾ. ಸುರೇಶ್ ಕಾಲ್ ಡಿಟೇಲ್ಸ್ (call details), ಚಾಟಿಂಗ್ಸ್ (chatting) ಪರಿಶೀಲನೆಗೆ ತನಿಖಾಧಿಕಾರಿಗಳು ಮುಂದಾಗಿದ್ದಾರೆ.