• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ತಮಿಳುನಾಡಿಗೆ ಕಾವೇರಿ ನೀರು.. ಕರ್ನಾಟಕ ಕಂಗಾಲು.. ಹೊಸ ದಾರಿ ಹುಡುಕಿದ ಸರ್ಕಾರ..

ಕೃಷ್ಣ ಮಣಿ by ಕೃಷ್ಣ ಮಣಿ
September 13, 2023
in ಕರ್ನಾಟಕ, ರಾಜಕೀಯ
0
ಕೆ.ಆರ್‌.ಎಸ್‌ ಭರ್ತಿಗೆ 3 ಅಡಿ ಬಾಕಿ
Share on WhatsAppShare on FacebookShare on Telegram

ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕುಸಿತಗೊಂಡಿದೆ. ಕಾವೇರಿ ನದಿ ಪ್ರದೇಶದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಮಂಡ್ಯದ ಕೆ.ಆರ್​.ಎಸ್​ ಡ್ಯಾಂ ಕೂಡ ಭರ್ತಿ ಆಗಿಲ್ಲ. ಆದರೂ ತಮಿಳುನಾಡು ನಿಗದಿಯಂತೆ ನೀರು ಹರಿಸುವಂತೆ ಒತ್ತಾಯ ಮಾಡುತ್ತಲೇ ಇದೆ. ಜೊತೆಗೆ ಕಾವೇರಿ ನೀರು ನಿಯಂತ್ರಣಾ ಸಮಿತಿಯ ಮೇಲೆ ಒತ್ತಡ ಹೇರುತ್ತ ಕರ್ನಾಟಕಕ್ಕೆ ನೀರು ಬಿಡುವಂತೆ ಸೂಚನೆ ಕೊಡಿಸುತ್ತಲೇ ಇದೆ. ಇದೀಗ ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಸೂಚನೆ ನೀಡಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಾವೇರಿ ನೀರು ಬಳಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಅನ್ಯಾಯದ ಪೆಟ್ಟು ಬೀಳುತ್ತಲೇ ಇದೆ.

ADVERTISEMENT

ಕಾವೇರಿ ನೀರು ಬಿಡಲ್ಲ ಎನ್ನುತ್ತಲೇ ನೀರು ಬಿಡುವ ಸರ್ಕಾರ..!

ಉತ್ತಮ ಮಳೆ, ರಾಜ್ಯದಲ್ಲಿ ಭರ್ತಿಯಾಗುತ್ತಿರುವ ಜಲಾಶಯಗಳು

ಕಾವೇರಿ ನೀರು ಬಿಡುವುದಕ್ಕೆ ಸದ್ಯಕ್ಕೆ ನಮ್ಮ ಬಳಿ ನೀರು ಇಲ್ಲ ಎಂದು ಡಿಸಿಎಂ ಹಾಗು ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ, ಬುಧವಾರ ಮತ್ತೊಂದು ಮೇಲ್ಮಟ್ಟದ ಸಭೆ ಇದೆ. ಅಲ್ಲಿ ನಮ್ಮ ಅಧಿಕಾರಿಗಳು ಇರುತ್ತಾರೆ. ನಾನು ಹಾಗು ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ನೀರು ಬಿಡಲು ಆಗಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ ಅವರು 12,500 ಕ್ಯೂಸೆಕ್ ನೀರು ಕೇಳಿದ್ದಾರೆ, 5000 ಬಿಡಬೇಕು ಅಂತ ಪ್ರಾಧಿಕಾರ ಹೇಳಿದೆ. ನೀರು ಬಿಡೋಕೆ ಸದ್ಯಕ್ಕೆ ನಮ್ಮಲ್ಲಿ ನೀರಿಲ್ಲ. ದೆಹಲಿಯ ಕಾನೂನು ತಜ್ಞರ ಜೊತೆ ಮಾತನಾಡುತ್ತಿದ್ದೇವೆ. ರೈತರ ಬೆಳೆಗೆ ನೀರು ಕೊಡುವುದಕ್ಕಿಂತ, ಕುಡಿಯುವ ನೀರಿಗಾಗಿ ನೀರು ಬೇಕಿದೆ. ಸುಪ್ರಿಂಕೋರ್ಟ್​ ಕೂಡ ನಾವು ನಿರ್ಧಾರ ಮಾಡಲು ಆಗಲ್ಲ ಅಂತ ಕೈ ಚೆಲ್ಲಿದೆ. ಆದರೆ ನಾವು ನೀರು ಬಿಡುವುದು ಬಹಳ ಕಷ್ಟ ಎಂದಿದ್ದಾರೆ.

ತುರ್ತು ಸಭೆ ನಡೆಸಿದ ಸಿಎಂ, ಸರ್ವಪಕ್ಷ ಸಭೆಗೆ ನಿರ್ಧಾರ..!

ಕರ್ನಾಟಕ ನೀರು ಬಿಡುವುದಿಲ್ಲ ಎಂದು ಕೇಂದ್ರಕ್ಕೆ ಸೆಟೆದು ನಿಲ್ಲುವುದನ್ನು ನಿಟ್ಟು ಬೇರೆ ಆಯ್ಕೆಗಳಿಲ್ಲ. ಆದರೆ ಆ ರೀತಿ ಆದಾಗ ಕಾನೂನು ಸಂಘರ್ಷ ಏರ್ಪಡುತ್ತದೆ. ಒಂದು ವೇಳೆ ಕರ್ನಾಟಕದಿಂದ ನೀರು ಬಿಟ್ಟಿದ್ದೇ ಆದರೆ ತಮಿಲುನಾಡಿಗೆ ಕಾಂಗ್ರೆಸ್​ ಸರ್ಕಾರ ಉದ್ದೇಶಪೂರ್ವಕವಾಗಿಯೇ ನೀರು ಬಿಡುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತದೆ. ಈಗಾಗಲೇ ರೈತರು ಹಾಗು ವಿರೋಧ ಪಕ್ಷಗಳು ಕಾಂಗ್ರೆಸ್​ ಹಾಗು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಪಕ್ಷ ಮೈತ್ರಿ ಪಕ್ಷಗಳಾಗಿರುವ ಕಾರಣಕ್ಕೆ ನೀರು ಬಿಡಲಾಗ್ತಿದೆ ಎಂದು ಆರೋಪ ಮಾಡಿವೆ. ಇದೀಗ ಯಾವುದೇ ಆರೋಪ ಹೊತ್ತು ಕೊಳ್ಳುವುದಕ್ಕೆ ತಯಾರಿಲ್ಲದ ರಾಜ್ಯ ಸರ್ಕಾರ, ವಿರೋಧ ಪಕ್ಷಗಳ ನಾಯಕರ ಸಭೆ ಕರೆದು ನೀರು ಬಿಡುವ ಅಥವಾ ಕೇಂದ್ರದ ವಿರುದ್ಧ ಕಾನೂನು ಸಂಘರ್ಷಕ್ಕೆ ಇಳಿಯುವ ನಿರ್ಧಾರ ಮಾಡಲು ತೀರ್ಮಾನ ಮಾಡಿದೆ.

ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಈಗಾಗಲೇ ಹೋರಾಟಕ್ಕೆ ಕಿಚ್ಚು ಹಚ್ಚಿರುವ ಅನ್ನದಾತರು..!

ಕರ್ನಾಟಕದ ರೈತರಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಾಗ್ತಿಲ್ಲ. ಆದರೂ ತಮಿಳುನಾಡಿನ ರೈತರ ಬೆಳೆಗಾಗಿ ನೀರು ಹರಿಸಲಾಗ್ತಿದೆ. ಬೆಂಗಳೂರು ಸೇರಿದಂತೆ ಕಾವೇರಿ ನದಿ ತೀರದ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸಲು ಕಷ್ಟ ಸಾಧ್ಯವಾಗಿದೆ. ಯಾವುದೇ ಕಾರಣಕ್ಕೂ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ರೈತನಾಯಕ ಹಾಗು ಶಾಸಕ ದರ್ಶನ್​ ಪುಟ್ಟಣ್ಣಯ್ಯ ಮಾಧ್ಯಮಗಳ ಎದುರು ಆಕ್ರೋಶ ಹೊರ ಹಾಕಿದ್ದಾರೆ. ನಾವು ರೈತರ ಬೆಳೆಗಳಿಗೆ ನೀರು ಕೇಳ್ತಿಲ್ಲ. ಕುಡಿಯುವ ನೀರಿಗೂ ಸಂಕಷ್ಟ ಎದುರಾಗಲಿದೆ. ಒಂದು ವೇಳೆ ತಮಿಳುನಾಡಿ ನೀರು ಬಿಟ್ಟರೆ ಹೋರಾಟದ ರೂಪ ಬದಲಾಗಲಿದೆ ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡುವ ನಿರ್ಧಾರ ಮಾಡಬಾರದು. ಎಲ್ಲಾ ರೈತ ಸಂಘಟನೆಗಳು, ರಾಜಕೀಯ ಪಕ್ಷಗಳು ಈ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ಇಂದಿನ ಸರ್ವಪಕ್ಷ ಸಭೆಯ ನಿರ್ಧಾರ ಏನು ಹೊರಬೀಳಲಿದೆ ಅನ್ನೋದು ಕುತೂಹಲ ಮೂಡಿಸಿದೆ.

ಕೃಷ್ಣಮಣಿ

Tags: Congress Partyಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ

Next Post

ಸಿದ್ದರಾಮಯ್ಯನನ್ನು ಕೆಣಕಿ ಬೆಪ್ಪಾದ ಎಂಎಲ್​ಸಿ ಹರಿಪ್ರಸಾದ್​..! ರಾಹುಲ್​ ಗಾಂಧಿ ಗರಂ..

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
ರಾಜಕೀಯ

ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಮೌನ: ಸಮಯ ಬಂದಾಗ ತಾನಾಗಿಯೇ ಸ್ಪಷ್ಟವಾಗುತ್ತದೆ – ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
April 26, 2026
0

ಬೆಂಗಳೂರು, ಏ.26: ರಾಜಕೀಯ ವಿಚಾರಗಳನ್ನು ಇನ್ನು ಮುಂದೆ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. “ಯಾವಾಗ ಏನು ಆಗಬೇಕೋ ಅದು ಆಗುತ್ತದೆ....

Read moreDetails
ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

April 26, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

April 25, 2026
Next Post
ಬಿಜೆಪಿ 100 ಕೋಟಿ ಡೋಸ್ ಕೊಟ್ಟಿದ್ದೇವೆ ಎಂದು ಸಂಭ್ರವಿಸುವ ಬದಲು, ದೇಶದ ಜನರಲ್ಲಿ ಕ್ಷಮೆ ಕೋರಲಿ: ಬಿ.ಕೆ ಹರಿಪ್ರಸಾದ್

ಸಿದ್ದರಾಮಯ್ಯನನ್ನು ಕೆಣಕಿ ಬೆಪ್ಪಾದ ಎಂಎಲ್​ಸಿ ಹರಿಪ್ರಸಾದ್​..! ರಾಹುಲ್​ ಗಾಂಧಿ ಗರಂ..

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada