ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳು ಬಡವರಿಗೆ ಉಪಯೋಗವಾಗಲಿ ಜಾರಿಗೆ ತರಲಾಗಿದೆ. ಆರ್ಥಿಕವಾಗಿ ಸಾಮರ್ಥ್ಯವುಳ್ಳವರು ಗ್ಯಾರಂಟಿ ಯೋಜನೆಗಳನ್ನ ತ್ಯಜಿಸಿ, ಇಲ್ಲದವರಿಗೆ ತಲುಪುವಂತೆ ಮಾಡಿ ಅಂತ ಸಿಎಂ ಸಿದ್ದರಾಮಯ್ಯ, ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

‘ಉಳ್ಳವರು’ ದೊಡ್ಡ ಮನಸ್ಸಿನಿಂದ ಗ್ಯಾರಂಟಿಗಳನ್ನ ಬಿಟ್ಟುಕೊಟ್ಟು ‘ಇಲ್ಲದವರಿಗೆ’ ನೆರವಾಗಬೇಕು, ಉಳ್ಳವರು ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಬಿಟ್ಟುಕೊಟ್ಟರೆ ಅದು ರಾಜ್ಯ ಸರ್ಕಾರದ ಮೇಲಿರುವ ಆರ್ಥಿಕ ಹೊರೆಯನ್ನ ಕಡಿಮೆ ಮಾಡುತ್ತದೆ. ಇದರಿಂದ ಆ ಹಣವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಉಪಯೋಗಿಸಬಹುದು ಅಂತ ಸಿಎಂ ಉಲ್ಲೇಖಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳು, ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರು ಹಾಗು ಕೆಲ ಮಾಧ್ಯಮಗಳ ಮುಖ್ಯಸ್ಥರು ಗೃಹ ಜ್ಯೋತಿ ಯೋಜನೆಯನ್ನ ಬಿಟ್ಟುಕೊಡುವುದಾಗಿ ನನಗೆ ಪತ್ರ ಬರೆದಿದ್ದಾರೆ. ಈ ಯೋಜನೆಯ ಲಾಭದಿಂದ ಹೊರಗುಳಿಯಲು ಬಯಸುವವರಿಗೆ ಅವಕಾಶ ಮಾಡಿಕೊಡಲಾಗುವುದು ಅಂತ ಹೇಳಿಕೊಂಡಿದ್ದಾರೆ.

ಈ ಹಿಂದೆ ಕೇಂದ್ರ ಸರ್ಕಾರವು ಅಡುಗೆ ಅನಿಲ ಸಬ್ಸಿಡಿಯನ್ನು ತ್ಯಜಿಸುವಂತೆ ಜನರಲ್ಲಿ ಅಭಿಯಾನ ಮಾಡಿತ್ತು. ಅನೇಕರು ಈ ಅಭಿಯಾನಕ್ಕೆ ಪೂರಕವಾದ ಬೆಂಬಲವನ್ನ ನೀಡಿದ್ದರು, ಅದೇ ರೀತಿಯಲ್ಲಿ ನಮ್ಮ ಗ್ಯಾರಂಟಿಗಳನ್ನು ಕೂಡ ತ್ಯಜಿಸಬಹುದು ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅಂತ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಮನವಿಗೆ ಜನ ಯಾವ ರೀತಿಯಾಗಿ ಸ್ಪಂದಿಸಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.