ರೈತ ಫಕೀರಪ್ಪ (Farmer Phakeerappa) ಪಂಚೆ ಧರಿಸಿ ಬಂದಿದ್ದಕ್ಕೆ ಸಿಬ್ಬಂದಿ ಜಿಟಿ ಮಾಲ್ (GT mall) ಪ್ರವೇಶಕ್ಕೆ ನಿರಾಕರಿಸಿದ ಹಿನ್ನಲೆ ಜಿಟಿ ಮಾಲ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ರೈತ ಫಪಕೀರಪ್ಪಗೆ ಅವಮಾನ ಮಾಡಿದ ಜಿಟಿ ಮಾಲ್ ಮಾಲೀಕ, ಸಿಬ್ಬಂದಿ ಅರುಣ್ ಹಾಗೂ ಆಡಳಿತ ಮಂಡಳಿ ವಿರುದ್ಧ ಕ್ರಮ ಜರಗಿಸುವಂತೆ ಎಫ್‌ಐಆರ್ ದಾಖಲು ಮಾಡಲಾಗಿದೆ.
ದೂರುದಾರ ಧರ್ಮರಾಜಗೌಡ ಕೊಟ್ಟ ದೂರಿನ ಮೇರೆಗೆ ಬಿಎನ್ಎಸ್ 126(2) ಅಡಿಯಲ್ಲಿ ಕೆ.ಪಿ.ಅಗ್ರಹಾರ (KP agrahara) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಪಂಚೆ ಧರಿಸಿ ಬಂದ ರೈತ ಫಕೀರಪ್ಪನನ್ನು ಮಲ್ ಒಳಗೆ ಸೇರಿಸದ ಸಿಬ್ಬಂದಿ ಮೇಲೆ ನಿನ್ನೆ ಕನ್ನಡ ಪರ ಹೋರಾಟಗಾರರ ಸಿಡಿದೆದ್ದಿದ್ರು.
ಕನ್ನಡ ಸೇನೆ ವತಿಯಿಂದ ಪ್ರತಿಭಟನಾಕಾರರು ಮಾಲ್ ಒಳಗೆ ನುಗ್ಗಿ ಹೋರಾಟ ನಡೆಸಿದ್ರು. ಅರೆ ಬಟ್ಟೆ ಹಾಕೋರನ್ನ ಒಳಗೆ ಬಿಡ್ತೀರಾ ರೈತರನ್ನ ಯಾಕೆ ಒಳಗೆ ಬಿಡಲ್ಲ.ರೈತರಿಗೆ ನ್ಯಾಯ ಸಿಗೋಕು.ಜಿ.ಟಿ ಮಾಲ್ ಬಂದ್ ಆಗೇಕು ಅಂತಾ ಪ್ರತಿಭಟನಾಕಾರರು ಗುಡುಗಿದ್ರು.