ರಾಜ್ಯದಲ್ಲಿ ಹೆಸರು ಬದಲಾವಣೆ ಪಾಲಿಟಿಕ್ಸ್ ಜೋರಾಗಿದ್ದು, ಸದ್ಯ ರಾಮನಗರ ಜಿಲ್ಲೆಯ (Ramnagar district) ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರದ (central government) ಬ್ರೇಕ್ ಹಾಕಿದೆ. ರಾಮನಗರ ಜಿಲ್ಲೆಯ ಹೆಸರು ಬದಲಾವಣೆಯ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿ ಡಿಸಿಎಂಡಿಕೆ ಶಿವಕುಮಾರ್ ಗೆ (Dk Shivakumar)ಶಾಕ್ ಕೊಟ್ಟಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಕೆಲ ಕಾಲ ಜಿಲ್ಲೆಯ ಹೆಸರು ಬದಲಾವಣೆಯ ಪ್ರಸ್ತಾವವನ್ನು ಮುಂದುವರಿಸಬೇಡಿ ಎಂದು ಹೇಳಿದೆ. ಈ ರೀತಿ ಪ್ರಸ್ತಾವನೆ ತಿರಸ್ಕರಿಸಲು ಕೇಂದ್ರ ಸರ್ಕಾರ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ.
ಈ ಬಗ್ಗೆ ತೀವ್ರ ಆಸಕ್ತಿ ತೋರಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಜಿಲ್ಲೆಯ ಹೆಸರು ಬದಲಾವಣೆಗೆ ನಿರ್ಧರಿಸಿದ್ದರು. ರಾಮನಗರ ಜಿಲ್ಲೆಯ ಬದಲಿಗೆ ದಕ್ಷಿಣ ಬೆಂಗಳೂರು ಎಂಬ ಹೆಸರಿಡಲು ಮುಂದಾಗಿದ್ದರು.

ಈ ಬಗ್ಗೆ ಈಗಾಗಲೇ ರಾಜ್ಯದ ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿತ್ತು. ಆದರೇ, ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ. ಈ ಹಿಂದೆ ಬಿಜಾಪುರ ಜಿಲ್ಲೆಯ ಹೆಸರು ಅನ್ನು ವಿಜಯಪುರ ಎಂದು ಬದಲಾಯಿಸಲು ಒಪ್ಪಿಗೆ ನೀಡಿತ್ತು.

ಇನ್ನು ಗುಲ್ಬರ್ಗಾ ಜಿಲ್ಲೆಯ ಹೆಸರು ಅನ್ನು ಕಲ್ಬುರ್ಗಿ ಎಂದು ಬದಲಾಯಿಸಲು ಕೂಡ ಕೇಂದ್ರ ಒಪ್ಪಿಗೆ ನೀಡಿತ್ತು.ಕೇಂದ್ರದ ಗೃಹ ಇಲಾಖೆಯಿಂದ ಜಿಲ್ಲೆ, ನಗರಗಳ ಹೆಸರು ಬದಲಾವಣೆಗೆ ಈ ಹಿಂದೆ ಒಪ್ಪಿಗೆ ಸಿಕ್ಕಿತ್ತು.ಆದ್ರೆ ಈಗ ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ರೆಡ್ ಸಿಗ್ನಲ್ ತೋರಿದೆ