ದಾವಣಗೆರೆ(Davangere)ಯಲ್ಲಿ ತೀವ್ರ ಸ್ವರೂಪ ಪಡೆದಿದೆ ಬಿಜೆಪಿ(BJP) ಭಿನ್ನಮತ. ದಾವಣಗೆರೆ ಬಿಜೆಪಿ ಅಭ್ಯರ್ಥಿ(candidate) ಬದಲಾಯಿಸುವಂತೆ ಪಟ್ಟು ಹಿಡಿದಿರುವ ರೇಣುಕಾಚಾರ್ಯ(Renukacharya) ಅಂಡ್ ಟೀಮ್, ಎರಡು ಬಾರಿ ಸಭೆ ನಡೆಸಿದ್ದಾರೆ. ಮಾಜಿ ಸಚಿವ ರವೀಂದ್ರನಾಥ್(Ravindranath), ಮಾಜಿ ಸಚಿವ ಕರುಣಾಕರ ರೆಡ್ಡಿ(KarunakaraReddy), ಮಾಜಿ ಶಾಸಕ ಬಸವರಾಜ್ ನಾಯ್ಕ್(BasavarajNaik), ಮಾಜಿ ಶಾಸಕ ಗುರುಸಿದ್ದನಗೌಡ(Gurusiddegowda), ಮಾಜಿ ಮಹಾಪೌರ ಅಜಯ್ ಕುಮಾರ್(AjayKumar), ಲೋಕಿಕೆರೆ ನಾಗರಾಜ್(Lokikere Nagaraj) ಸೇರಿ ಹಲವು ನಾಯಕರು ಸಭೆ ನಡೆಸಿ, ಬಿಜೆಪಿ ಹೈಕಮಾಂಡ್ ನಾಯಕರಿಗೆ ಕೊನೆಯ ಸಭೆಯಲ್ಲಿ ಮೂರು ದಿನಗಳ ಗಡುವು ನೀಡಲು ನಿರ್ಧಾರ ಮಾಡಲಾಗಿದೆ. ರೆಬಲ್ ನಾಯಕರ ಮನವೊಲಿಕೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಮುಂದಾದರೂ ಯಾವುದೇ ಪ್ರಯೋಜನ ಆಗಿಲ್ಲ.

ಮಾಜಿ ಸಚಿವ ಎಸ್ ಎ ರವೀಂದ್ರನಾಥ್, ಮಾಜಿ ಸಚಿವ ರೇಣುಕಾಚಾರ್ಯ ಮನೆಗೆ ಭೇಟಿ ನೀಡಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮನವೂಲಿಸಲು ವಿಫಲ ಯತ್ನ ನಡೆಸಿದ್ದಾರೆ. ಯಾವುದಕ್ಕೂ ಬಗ್ಗದ ರೆಬಲ್ಸ್ ನಾಯಕರು, ನಮ್ಮ ಒಬ್ಬರ ನಿರ್ಧಾರ ಅಲ್ಲ. ನಮ್ಮ ಟೀಮ್ನ ಎಲ್ಲಾ ಸದಸ್ಯರು ಸೇರಿ ತೆಗೆದುಕೊಂಡ ನಿರ್ಧಾರ ಆಗಿದೆ ಎಂದಿದ್ದಾರೆ ರೆಬಲ್ಸ್ ನಾಯಕರು. ಮತ್ತೊಮ್ಮೆ ಸಭೆ ಸೇರಿ ನಿಮಗೆ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದು ಹೇಳಿ ಕಳಿಸಿದೆ ರೆಬಲ್ಸ್ ಟೀಮ್.
ಇನ್ನು ಕೊಪ್ಪಳದಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಗರಂ ಆಗಿರುವ ಹಾಲಿ ಸಂಸದ ಸಂಗಣ್ಣ ಕರಡಿ ಬಿಜೆಪಿ ವಿರುದ್ಧ ಗರಂ ಆಗಿದ್ದಾರೆ. ಸಂಗಣ್ಣ ಕರಡಿ ಇಂದು ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ತನ್ನ ಮುಂದಿನ ನಿರ್ಧಾರ ಏನು ಅನ್ನೋದನ್ನು ಬಹಿರಂಗ ಮಾಡಲಿದ್ದಾರೆ ಎನ್ನಲಾಗಿದೆ. ಅದೇ ರೀತಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ ಸದಾನಂದಗೌಡ ಕೂಡ ಇಂದು ಮಾಧ್ಯಮಗೋಷ್ಠಿ ನಡೆಸಲಿದ್ದು, ಪಕ್ಷ ಟಿಕೆಟ್ ಕೊಡದೆ ನಡೆಸಿಕೊಂಡ ರೀತಿಯ ಬಗ್ಗೆ ಬಹಿರಂಗ ಅಸಮಾಧಾನ ಹೊರ ಹಾಕುವ ಸಾಧ್ಯತೆಗಳಿವೆ.

ಅತ್ತ ಶಿವಮೊಗ್ಗದಲ್ಲಿ ಯಡಿಯೂರಪ್ಪ(Yediyurappa) ಪುತ್ರ ರಾಘವೇಂದ್ರ(Ragavendra) ಚುನಾವಣಾ ಗೆಲುವಿಗೆ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ(Eshwarappa) ಅಡ್ಡಿಯಾಗುವ ಬಹುತೇಕ ಸಾಧ್ಯತೆಗಳಿದ್ದು, ಕೆ.ಎಸ್ ಈಶ್ವರಪ್ಪ ಮೋದಿ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ಅಸಮಾಧಾನ ಬಹಿರಂಗವಾಗಿ ಬಿಜೆಪಿ ಹೈಕಮಾಂಡ್ಗೆ ಮುಟ್ಟುವಂತೆ ಮಾಡಿದ್ದಾರೆ. ಯಾರ ಸಂಧಾನಕ್ಕೂ ಬಗ್ಗದ ಈಶ್ವರಪ್ಪ ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದಿದ್ದಾರೆ. ಇತ್ತ ತುಮಕೂರಿನಲ್ಲಿ ಸೋಮಣ್ಣ ವಿರುದ್ಧ ಮಾಧುಸ್ವಾಮಿ ಬೆಂಬಲ ನಿರಾಕರಿಸಿದ್ದಾರೆ. ಬೆಂಗಳೂರು ಉತ್ತರದಲ್ಲೂ ಗೋಬ್ಯಾಕ್ ಶೋಭಕ್ಕ ಸ್ಲೋಗನ್ ಶುರುವಾಗಿದೆ.
ಬಂಡಾಯ ಶಮನ ಕಡಿಮೆ ಆಗುವ ಲಕ್ಷಣ ಕಾಣಿಸ್ತಿಲ್ಲ. ಇದೇ ರೀರಿ ಆದರೆ ವಿಧಾನಸಭೆಯಲ್ಲಿ ಆದಂತಹ ಪರಿಣಾಮ ಲೋಕಸಭಾ ಚುನಾವಣೆಯ ಮೇಲೂ ಆಗುವಂತ ಸಾಧ್ಯತೆಗಳು ದಟ್ಟವಾಗಿವೆ. ಇದೇ ಕಾರಣಕ್ಕಾಗಿ ಸಂಧಾನ ಸಭೆಗಳು ಚಾಲ್ತಿಗೆ ಬಂದಿದ್ದು, ಯಾರೆಲ್ಲಾ ಸಂಧಾನಕ್ಕೆ ಸೊಪ್ಪು ಹಾಕ್ತಾರೆ..? ಯಾರೆಲ್ಲಾ ಸಂಧಾನಕ್ಕೆ ಸಡ್ಡು ಹೊಡೆದು ನಿಲ್ತಾರೆ ಅನ್ನೋದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ನಾಮಪತ್ರ ಸಲ್ಲಿಕೆಗೆ ಇನ್ನೂ ಕಾಲಾವಕಾಶ ಇರುವ ಕಾರಣಕ್ಕೆ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಪಕ್ಷಕ್ಕೆ ಆಗುವ ಮುಜುಗರ ಹಾನಿ ಮಾಡಬಲ್ಲದು ಎನ್ನಲಾಗ್ತಿದೆ.
#bjpkarnataka #Lokasaba #Election #BSYediyurappa #BYVijayendra #Davngere