ಮುಖದಲ್ಲಿ ಚಿಕ್ಕ ಕಲೆಯಾದ್ರೂ ಕೂಡ ತುಂಬಾನೇ ತಲೆ ಕೆಡಿಸ್ಕೊಳ್ತಿವಿ.ಅಂತದ್ರಲ್ಲಿ ಸಾಕಷ್ಟು ಜನಕ್ಕೆ ಪಿಗ್ಮೆಂಟೇಷನ್ ಸಮಸ್ಯೆ ಕಾಡ್ತಾ ಇದೆ. ಪಿಗ್ಮೆಂಟೇಶನ್ ಬಂದಾಗ ಚರ್ಮದ ಬಣ್ಣವೂ ಕಪ್ಪಾಗಿ ಬದಲಾಗುತ್ತೆ. ಇದರ ಜೊತೆಗೆ ಕೆಲವೊಂದು ಕಡೆ ತ್ವಚೆಯ ಬಣ್ಣ ನಾರ್ಮಲ್ ಇದ್ರೆ ಇನ್ನು ಕೆಲವೊಂದು ಕಡೆ ಕಪ್ಪಾಗಿ ಗಾಢವಾಗಿ ಕಾಣಿಸುತ್ತದೆ . ಈ ಕಲೆ ಇದು ಮುಖದ ಅಂದವನ್ನು ಮಂದಗೊಳಿಸುತ್ತದೆ.
ಪಿಗ್ಮೆಂಟೇಶನ್ ಗೆ ಪ್ರಮುಖ ಕಾರಣಗಳು
- ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ಹೌದು ಹೆಚ್ಚು ಜನ ಫೀಲ್ಡ್ ವರ್ಕ್ ಮಾಡುತ್ತಾರೆ ಅಲ್ಲಿ ಬಿಸಿಲಿನ ಶಾಕ ಹೆಚ್ಚಿರುತ್ತದೆ ಹಾಗೂ ಚಿಕ್ಕ ವಯಸ್ಸಿನವರಲ್ಲಿ ಮೆಲನಿನ್ ಉದ್ಪಾದನೆ ಹೆಚ್ಚಿರುತ್ತದೆ..ಇದರಿಂದಾಗ ಪಿಗ್ಮೆಂಟೇಶನ್ ಜಾಸ್ತಿ ಆಗುತ್ತದೆ .
- ದೇಹದಲ್ಲಿ ಆಗಾಗ ಹಾರ್ಮೋನ್ ಬದಲಾವಣೆ ಆಗ್ತಾನೆ ಇರುತ್ತದೆ..ಅದರಲ್ಲಿ ಗರ್ಭಾವಸ್ಥೆ ಸಮಯದಲ್ಲಿ ,ಋತುಬಂಧ ಅಥವಾ ಜನನ ನಿಯಂತ್ರಣ ಸಮಯದಲ್ಲಿ ಹಾರ್ಮೋನುಗಳ ಏರಿಳಿತಗಳು ಆಗುತ್ತದೆ ಇದರಿಂದಾಗಿ ಪಿಗ್ಮೆಂಟೇಶನ್ ಶುರುವಾಗುತ್ತದೆ.
- ಕೆಲವರು ತಾವು ಬಳಸುವಂತಹ ಮೇಕಪ್ ಪ್ರಾಡಕ್ಟ್ ಗಳಿಂದಲೂ ಕೂಡ ತ್ವಚೆಯಲ್ಲಿ ಹೆಚ್ಚಾಗುವಂತ ಚಾನ್ಸಸ್ ಇರುತ್ತದೆ.
ನಮ್ಮ ಕೆಲವು ಲೈಫ್ ಸ್ಟೈಲ್ ಬದಲಾವಣೆಗಳಿಂದ ಪಿಗ್ಮೆಂಟೇಶನ್ ಕಡಿಮೆ ಮಾಡಬಹುದು.
- ದೇಹದಲ್ಲಿ ನೀರಿನ ಅಂಶ ಹೆಚ್ಚಿದ್ದಾಗ ಇದು ವಿಷಕಾರಿ ಅಂಶಗಳನ್ನು ಹೊರಹಾಕಲು ಮತ್ತು ನಿಮ್ಮ ಚರ್ಮವನ್ನು ತೇವಾಂಶದಿಂದ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ದಿನಕ್ಕೆ ಸಾಕಷ್ಟು ನೀರು ಕುಡಿಯಿರಿ.
- ನಿಮ್ಮ ತ್ವಚೆಗೆ ಉತ್ತಮ ಎಣಿಸುವ ಅದರಲ್ಲೂ ಕೂಡ ನ್ಯೂಟ್ರಿಷನ್ ಹೆಚ್ಚಿರುವಂತ ಹಣ್ಣು ತರಕಾರಿಗಳನ್ನ ತಪ್ಪದೇ ಸೇವಿಸಿ ಇದರಿಂದ ತ್ವಚೆಯಲ್ಲಿ ಇರುವಂತಹ ಕಲೆಗಳು ನಿವಾರಣೆಯಾಗುತ್ತದೆ.
- ಪ್ರೆಸ್ ಹೆಚ್ಚಾದಗಳು ಕೂಡ ಪಿಗ್ಮೆಂಟೇಷನ್ ಬರುವಂತ ಚಾನ್ಸಸ್ ಇರುತ್ತದೆ ಹಾಗಾಗಿ ನಿಮ್ಮ ಸ್ಟ್ರೆಸ್ ಮ್ಯಾನೇಜ್ ಮಾಡಬೇಕು ಯೋಗ ಹಾಗೂ ಮೆಡಿಟೇಶನ್ ಇಂದ ಕೂಡ ಸ್ಟ್ರೆಸ್ ಮ್ಯಾನೇಜಾಗುತ್ತದೆ ಹಾಗೂ ಪಿಗ್ಮೆಂಟೇಶನ್ ಕಡಿಮೆಯಾಗುತ್ತದೆ.