ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಬಂಧಿಯಾಗಿ ನಂತರ ಬಿಡುಗಡೆಯಾಗಿದ್ದ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(NCB) ಪ್ರಕರಣದಿಂದ ಮುಕ್ತಗೊಳಿಸಿದೆ.
ಇಲ್ಲಿದೆ ಪ್ರಮುಖ 5 ಅಂಶಗಳು
1) ಕಾರ್ಯಾಚರಣೆಯ ವೇಳೆ ಯಾವುದೇ ವಿಡಿಯೋ ಮಾಡದಿರುವುದು
2) ಆರ್ಯನ್ ಖಾನ್ ಫೋನ್ ವಶಪಡಿಸಿಕೊಳ್ಳುವ ವೇಳೆ ಲೋಪವಾಗಿದ್ದು ಪ್ರಕರಣಕ್ಕು ವಾಟ್ಸ್ಅಪ್ ಚಾಟ್ ಸಂಬಂಧವಿಲ್ಲದಿರುವುದು ಕಂಡು ಬಂದಿದೆ.

3) ಬಂಧನದ ನಂತರ ವೈದ್ಯಕೀಯ ಪರೀಕ್ಷೆ ನಡೆಸದಿರುವುದು
4) ಘಟನೆಯ ಪ್ರಮುಖ ಸಾಕ್ಷಿ ತನ್ನನ್ನು ಬಲವಂತ ಮಾಡಿ ಖಾಲಿ ಪೇಪರಿನ ಮೇಲೆ ಸಹಿ ಹಾಕುವಂತೆ ಹೇಳಿದ್ದರು. ಮತೆರಡು ಸಾಕ್ಷಿಗಳು ತಾವು ಘಟನೆ ನಡೆದ ಸ್ಥಳದಲ್ಲಿರಲಿಲ್ಲ ಎಂದು ವಿಶೇಷ ತನಿಖಾ ತಂಡಕ್ಕೆ ತಿಳಿಸಿದ್ದರು.
5) ಆರ್ಯನ್ ಖಾನ್ ಬಳಿ ಯಾವುದೇ ಡ್ರಗ್ಸ್ ಪತ್ತೆಯಾಗಿರಲಿಲ್ಲ ಮತ್ತು ಎಲ್ಲರ ಮೇಲು ಒಂದೇ ರೀತಿಯ ಆರೋಪಗಳನ್ನು ಹೊರಿಸಲಾಗಿತ್ತು.