• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನೈಜ, ವಸ್ತುಸ್ಥಿತಿ ಆಧಾರಿತ ಪ್ರಣಾಳಿಕೆ ಬಿಜೆಪಿ ಗುರಿ: ಸಚಿವ ಡಾ. ಕೆ. ಸುಧಾಕರ್‌

ಪ್ರತಿಧ್ವನಿ by ಪ್ರತಿಧ್ವನಿ
February 13, 2023
in ಕರ್ನಾಟಕ, ರಾಜಕೀಯ
0
ನೈಜ, ವಸ್ತುಸ್ಥಿತಿ ಆಧಾರಿತ ಪ್ರಣಾಳಿಕೆ ಬಿಜೆಪಿ ಗುರಿ: ಸಚಿವ ಡಾ. ಕೆ. ಸುಧಾಕರ್‌
Share on WhatsAppShare on FacebookShare on Telegram

ಬೆಂಗಳೂರು: ಭಾರತೀಯ ಜನತಾ ಪಕ್ಷಕ್ಕೆ ಪ್ರಣಾಳಿಕೆ ಕೇವಲ ಘೋಷಣೆಗೆ ಸೀಮಿತವಾದ ಕಾರ್ಯಕ್ರಮಗಳಲ್ಲ. ಬದಲಾಗಿ ಇದು ಅಭಿವೃದ್ಧಿಗೆ ಪೂರಕ ಹಾಗೂ ಜನರ ಆಶೋತ್ತರಗಳಿಗೆ ಸ್ಪಂದಿಸುವ ಭಗವದ್ಗೀತೆಗೆ ಸಮನಾಗಿರುವ ಯೋಜನೆಗಳು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ನಡೆದ ಪ್ರಣಾಳಿಕೆ  ಸಲಹಾ ಸಂಗ್ರಹ ಅಭಿಯಾನದ ಸಮಿತಿಯ ಜಿಲ್ಲಾ ಸಂಚಾಲಕರು ಮತ್ತು ಸಹ ಸಂಚಾಲಕರ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದ ಜನರ ಸದಾಶಯಗಳನ್ನು ಪೂರೈಸುವ ಪ್ರಣಾಳಿಕೆ ಹೊರತರಲು ಯೋಜನೆ ಸಿದ್ಧವಾಗಿದೆ.  31 ಜಿಲ್ಲೆಗಳ ಸಂಚಾಲಕರು, ಸಹ ಸಂಚಾಲಕರು, ಪ್ರಣಾಳಿಕೆ ಸಮಿತಿ ಸದ್ಯರು ಸೇರಿದಂತೆ ಎಲ್ಲರೂ ಮುಂದಿನ ಬಿಜೆಪಿ ಸರ್ಕಾರದ ಗುರಿ ಯಾವುದಿರಬೇಕು ಅನ್ನುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎಂದರು.

ಬಿಜೆಪಿಗೆ ಪ್ರಣಾಳಿಕೆ ಭಗವದ್ಗೀತೆಯಷ್ಟೇ ಪವಿತ್ರವಾಗಿದೆ.  ಪಕ್ಷ ಘೋಷಿಸುವ ಪ್ರತಿಯೊಂದು ಕಾರ್ಯಕ್ರಮಗಳು ಕೂಡ ವಿಭಿನ್ನವಾಗಿರಲಿದ್ದು, ನೈಜವಾಗಿರಲಿದೆ.  ರಾಜ್ಯದ ವಸ್ತುಸ್ಥಿತಿ, ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಯ ನೀಲನಕಾಶೆ ಸಿದ್ಧಪಡಿಸಲಾಗುವುದು. ರಾಜ್ಯದ ಜನರ ಸದಾಶಯಗಳು ಪ್ರಣಾಳಿಕೆಯಲ್ಲಿ ಇರಲಿದ್ದು, ಪ್ರತಿಯೊಂದು ಯೋಜನೆಗಳ ಅನುಷ್ಠಾನಕ್ಕೆ ನಿಗದಿತ ಸಮಯವನ್ನು ಕೂಡ ಫಿಕ್ಸ್‌ ಮಾಡಲಾಗುವುದು ಎಂದು ಹೇಳಿದರು.

ಪ್ರಣಾಳಿಕೆ ಜನರ ಧ್ವನಿಯಾಗಿರಲಿದೆ. ಹಳ್ಳಿಯಿಂದ ಹಿಡಿದು ರಾಜಧಾನಿ ತನಕ ಎಲ್ಲಾ ಧರ್ಮದ, ಜಾತಿಯ  ಸಂಘಟನೆಗಳು, ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು, ವೃತ್ತಿಪರರು ಹೀಗೆ ಸಾಮಾನ್ಯರಿಂದ ಹಿಡಿದು  ಎಲ್ಲರನ್ನೂ ಭೇಟಿ ಮಾಡಿ, ಸಂವಾದ ಮಾಡಿ ಅವರ ಅಭಿಪ್ರಾಯ ಶೇಖರಣೆ ಮಾಡಿ ನಿಗದಿತ ಕಾರ್ಯಕ್ರಮವನ್ನು ಸರ್ಕಾರ ಯಾವ ರೀತಿ ಕೊಡ್ಬೇಕು ಅನ್ನುವ ಬಗ್ಗೆ ಯೋಜನೆ ರೂಪಿಸಲಾಗಿದೆ. ವಾಟ್ಸ್‌’ಆಪ್‌, ಇ-ಮೇಲ್‌, ಚಾಟ್‌ಬೋಟ್‌ ಸೇರಿದಂತೆ ತಂತ್ರಜ್ಞಾನದ  ಸಹಕಾರ ಪಡೆದುಕೊಳ್ಳಲಾಗುವುದ ಎಂದರು.

ಪ್ರತಿಯೊಂದು  ಮಂಡಲದಲ್ಲಿ 25 ಸಲಹಾ ಬಾಕ್ಸ್‌ಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಇಡಲಾಗಿದೆ. ಜನರು ಪತ್ರದ ಮೂಲಕ ಸಲಹೆ ಬರೆದು, ಅದರಲ್ಲಿ ಹಾಕಿದರೆ, ಅದನ್ನು ವಿಶ್ಲೇಷಣೆ ಮಾಡಿ ಪ್ರಣಾಳಿಕೆಯಲ್ಲಿ ಹೇಗೆ ತರಬೇಕು ಅನ್ನುವುದನ್ನು ಚರ್ಚೆ ಮಾಡಲಾಗುವುದು. ರಾಜ್ಯದ ಜನರ ಭವಿಷ್ಯ ರೂಪಿಸಲು ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ಮಾಡಲಾಗುವುದು ಎಂದರು.

ಪ್ರಣಾಳಿಕೆಯಲ್ಲಿ ಕಟ್ಟಕಡೆಯ ವ್ಯಕ್ತಿಗೆ ಸಮಾನತೆ, ಸಾಮಾಜಿಕ ನ್ಯಾಯ ಸಿಗುವ ಹಾಗೇ ಕೆಲಸ ಮಾಡಿ ಸಮೃದ್ಧಿ, ಸುಂದರ ಕರ್ನಾಟಕ್ಕೆ ಭದ್ರ ಬುನಾಧಿ ಹಾಕಲಾಗುವುದು. ನವ ಭಾರತದ ನವ ಕರ್ನಾಟಕಕ್ಕೆ ಇದು ನೀಲನಕಾಶೆಯಾಗಿದೆ.  2030ಕ್ಕೆ ಟ್ರಿಲಿಯನ್‌ ಡಾಲರ್‌ ಆರ್ಥಿಕ ಪ್ರಧಾನಿ ನರೇಂದ್ರ ಮೋದಿ ಕನಸಿಗೆ  20% ಅಧಿಕ ರಾಜ್ಯದ ಕೊಡುಗೆ ಇರಬೇಕು ಅನ್ನುವ ನಿಟ್ಟಿನಲ್ಲಿ ಪ್ರಣಾಳಿಕೆ ಸಿದ್ಧವಾಗಲಿದೆ ಎಂದು ತಿಳಿಸಿದರು.

ಪಾಪದ ಕೆಲಸ ಮಾಡಲ್ಲ

ಬಿಜೆಪಿ ಮತ ಕಸಿಯಲು, ಸುಳ್ಳು ಆಶ್ವಾಸನೆಗಳನ್ನು ನೀಡುವಂತಹ ಪಾಪದ ಕೆಲಸ ಮಾಡುವುದಿಲ್ಲ. ಬದಲಾಗಿ ಜನ ಸಾಮಾನ್ಯರ ಬದುಕು ಹಸನಾಗಲು, ಇವತ್ತಿನ ಸ್ಥಿತಿಯಲ್ಲಿ ಯಾವೆಲ್ಲಾ ಸಾಧ್ಯತೆ ಇದೆ, ಅದನ್ನು ಯಾವ ರೀತಿಯಲ್ಲಿ ಪೂರೈಸಬಹುದು ಮತ್ತು ಸಮಯ ನಿಗದಿ ಮಾಡಿ ಕಾರ್ಯಕ್ರಮವನ್ನು ಪೂರ್ಣಮಾಡುವುದನ್ನೇ ಗುರಿಯಾಗಿರಿಸಿಕೊಂಡಿದೆ.  ಬೆಂಗಳೂರು ಅಭಿವೃದ್ಧಿಯ ಎಂಜಿನ್‌ ಆಗಿರುವುದರಿಂದ ರಾಜಧಾನಿಗೆ ವಿಶೇಷ ಒತ್ತು ಹಾಗೂ ಕಾಳಜಿ ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು.  

Tags: ಬಿಜೆಪಿಬಿಜೆಪಿ ಪ್ರಣಾಳಿಕೆಸಚಿವ ಡಾ. ಕೆ. ಸುಧಾಕರ್‌
Previous Post

Nalin Kumar Kateel: ಸಿದ್ದು ಡಿಕೆ ಕುಮಾರಣ್ಣಂಗೆ ಹೇಗೆ ವ್ಯಂಗ್ಯ ಮಾಡಿದ್ರು ನೋಡಿ ಕಟೀಲ್..! | #pratidhvaninews

Next Post

Pratap Simha: ಬೆಂ-ಮೈ ಎಕ್ಸ್‌ಪ್ರೆಸ್‌ವೇ ಚಾಲನೆಗೆ ಮುಹೂರ್ತ | #pratidhvaninews

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
ರಾಜಕೀಯ

ರಾಜಕೀಯದ ಬಗ್ಗೆ ಮುಂದಿನ ದಿನಗಳಲ್ಲಿ ಮೌನ: ಸಮಯ ಬಂದಾಗ ತಾನಾಗಿಯೇ ಸ್ಪಷ್ಟವಾಗುತ್ತದೆ – ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
April 26, 2026
0

ಬೆಂಗಳೂರು, ಏ.26: ರಾಜಕೀಯ ವಿಚಾರಗಳನ್ನು ಇನ್ನು ಮುಂದೆ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. “ಯಾವಾಗ ಏನು ಆಗಬೇಕೋ ಅದು ಆಗುತ್ತದೆ....

Read moreDetails
ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

ಎಎಪಿ ತೊರೆದು ಬಿಜೆಪಿಗೆ ರಾಘವ್ ಚಡ್ಡಾ: ಆಸ್ತಿ ವಿವರ ಇಲ್ಲಿದೆ!

April 26, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

April 25, 2026
Next Post
Pratap Simha: ಬೆಂ-ಮೈ ಎಕ್ಸ್‌ಪ್ರೆಸ್‌ವೇ ಚಾಲನೆಗೆ ಮುಹೂರ್ತ | #pratidhvaninews

Pratap Simha: ಬೆಂ-ಮೈ ಎಕ್ಸ್‌ಪ್ರೆಸ್‌ವೇ ಚಾಲನೆಗೆ ಮುಹೂರ್ತ | #pratidhvaninews

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada