ಕಲಬುರಗಿ: ಅಫಜಲಪುರ ವಿಧಾನ ಸಭಾ ಕ್ಷೇತ್ರಕ್ಕೆ ಆರ್.ಡಿ.ಪಾಟೀಲ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ ಎಂದು ಆರ್.ಡಿ.ಪಾಟೀಲ ಸಹೋದರ ಮಹಾಂತೇಶ ಪಾಟೀಲ ಸ್ಪಷ್ಟ ಪಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸಹೋದರ ಆರ್.ಡಿ.ಪಾಟೀಲ ಬರುವ 2023 ರ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದ್ದು, ನಾವು ಮೊದಲು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿದ್ದೆವೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ಅನಿವಾರ್ಯ ಕಾರಣದಿಂದ ನಾವು ಅರ್ಜಿ ಹಾಕಲು ಆಗಿಲ್ಲ.ಈಗಲೂ ಕಾಂಗ್ರೆಸ್ ವರಿಷ್ಠರ ಜೊತೆಗೆ ಮಾತಾಡುತ್ತೆವೆ. ಒಂದು ವೇಳೆ ನಮಗೆ ಟಿಕೆಟ್ ಸಿಗದಿದ್ದರೆ,ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಆರ್.ಡಿ.ಪಾಟೀಲ ಚುನಾವಣೆಗೆ ನಿಲ್ಲುವುದು ಖಚಿತ ಎಂದು ತಿಳಿಸಿದ್ದಾರೆ.
ಈಗಾಗಲೇ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಎಲ್ಲಾ ಜನರ ಅಭಿಪ್ರಾಯ ಪಡೆದು ಈ ನಿರ್ಣಯಕ್ಕೆ ಬಂದಿದ್ದೆವೆ. ಜನಪರ ಕೆಲಸಗಳಿಂದ ವಂಚಿತವಾದ ಅಫಜಲಪುರ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡುವ ಗುರಿಯನಿಟ್ಟುಕೊಂಡು, ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೆವೆ. ನಾವು ಬೇರೆ ಪಕ್ಷದವರ ಬಗ್ಗೆ ಟೀಕೆಗಳು ಮಾಡುವುದಿಲ್ಲ. ನಮ್ಮ ಗುರಿ ಒಂದೆ ಇದೆ ಅಫಜಲಪುರ ಸಮಗ್ರ ಅಭಿವೃದ್ಧಿ ಮಾಡುವುದಾಗಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೆವೆ ಎಂದು ಹೇಳಿದರು.
ನನ್ನ ಸಹೋದರ ಆರ್.ಡಿ.ಪಾಟೀಲ ರಾಜಕೀಯವಾಗಿ ಉತ್ತುಂಗಕ್ಕೆರುತ್ತಾರೆ ಎನ್ನುವ ಅಸೂಯೆ ಭಾವನೆಯಿಂದ ಅವರನ್ನು ರಾಜಕೀಯವಾಗಿ ಮುಗಿಸಲು ಕಾಣದ ಕೈಗಳು ಕೆಲಸ ಮಾಡಿವೆ. ಈಗಲೂ ಮಾಡುತ್ತಿವೆ. ಆದರೆ ನಾವು ಯಾವುದಕ್ಕೂ ಎದೆಗುಂದದೆ, ರಾಜಕೀಯಕ್ಕೆ ಬಂದಿದ್ದೆವೆ. ಕ್ಷೇತ್ರದ ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸವನ್ನು ನಾವು ಕಳೆದುಕೊಳ್ಳದೆ ಅವರ ವಿಶ್ವಾಸಕ್ಕೆ ನಾವು ಋಣಿಯಾಗಿರುತ್ತೆವೆ ಎಂದರು.
ನಂತರ ಮಾತನಾಡಿದ ಬಸುಗೌಡ ಪಾಟೀಲ, ಅಫಜಲಪುರ ವಿಧಾನ ಸಭಾ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ನಡುತ್ತಾ ಬಂದಿದೆ.ಇನ್ನೂ ಕೂಡಾ ಮುಂದುವರೆದಿದೆ. ಆದರೆ ಅದಕ್ಕೆ ಬೇಸತ್ತ ಕ್ಷೇತ್ರದ ಜನರು ಹೊಸ ಮುಖಕ್ಕೆ ಮಣೆ ಹಾಕುತ್ತಿದ್ದಾರೆ. ಕ್ಷೇತ್ರದ ಜನತೆಗೆ ಸೂಕ್ತ ಅಭ್ಯರ್ಥಿಯಾಗಿ ಆರ್.ಡಿ.ಪಾಟೀಲ ಅವರು ಬಂದಿದ್ದಾರೆ. ಎಲ್ಲಾ ಸಮುದಾಯವು ಅವರನ್ನು ಬೆಂಬಲಿಸಿದೆ ಮುಂದೆಯೂ ಅವರನ್ನ ಸಂಪೂರ್ಣವಾಗಿ ಬೆಂಬಲಿಸಿ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಆರ್.ಡಿ.ಪಾಟೀಲ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಕಿಣಗಿ, ಗುಂಡುರಾವ ಅಂಕಲಗಿ, ಅಂಬಣ್ಣ ನರಗೋಧಿ, ಗುಡುಸಾಬ್ ಮುಲ್ಲಾ,ಅನ್ವರ ತಾಂಬೋಳಿ, ರಮೇಶ ಸುಲೇಕಾರ, ಕರೇಪ್ಪ ಪೂಜಾರಿ, ಸೈಪಾನ್ ಜಮಾದಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.