ಬೆಂಗಳೂರಿನಲ್ಲಿ ಆರ್‌ಸಿಬಿ ಅನ್ ಬಾಕ್ಸಿಂಗ್ ಕಾರ್ಯಕ್ರಮ ಯಶಸ್ವಿಯಾಗಿ ನಡೀತು. WPL ವಿನ್ನರ್ ಟೀಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕುಣಿದು ಕುಪ್ಪಳಿಸಿತು. ಚೊಚ್ಚಲ ಟ್ರೋಫಿ ಗೆದ್ದ ಖುಷಿಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಟೀಂ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಅಭಿಮಾನಿಗಳು ಕೂಡ ಮಹಿಳಾ ಟೀಂಗೆ ಭಾರೀ ಬೆಂಬಲ ಸೂಚಿಸಿದ್ರು..
ಇನ್ನು IPL 2024 ಆರಂಭಕ್ಕೂ ಮುನ್ನ ನಡೆದ ಅನ್ ಬಾಕ್ಸಿಂಗ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಎಲ್ಲಾ ಆಟಗಾರರು ಭಾಗಿಯಾಗಿದ್ದರು. ಅನ್ ಬಾಕ್ಸಿಂಗ್ ಕಾರ್ಯಕ್ರಮ ಬೆಂಗಳೂರಲ್ಲಿ 2ನೇ ಬಾರಿ ನಡೆದಿದ್ದು, ಕ್ರಿಸ್ ಗೇಲ್, ಎಬಿ ಡೆವಿಲಿಯರ್ಸ್ ಕೂಡ ಭಾಗಿಯಾಗಿದ್ದರು. ಈ ವೇಳೆ ಕಿಂಗ್ ಕಿಂಗ್ ಅಂತಾ ಕೂಗುತ್ತಿದ್ದ ಅಭಿಮಾನಿಗಳ ಕಡೆಗೆ ಪ್ರೀತಿಯ ಕೋಪ ತೋರಿಸಿದ ಕೊಹ್ಲಿ ಕಿಂಗ್ ಅಂತಾ ಅನ್ಬೇಡಿ.. ಕಿರಿಕಿರಿ ಆಗುತ್ತೆ ಎಂದಿದ್ದಾರೆ.

ಇನ್ಮುಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರ್ ಅನ್ನೋ ಹೆಸರನ್ನು RCB ಬದಲಾವಣೆ ಮಾಡಿಕೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಾವಣೆ ಮಾಡಿದೆ. RCB ತಂಡಕ್ಕೆ ಹೊಸ ಜೆರ್ಸಿ ಬಿಡುಗಡೆ ಮಾಡಿದ್ದು, ಬ್ಲ್ಯೂ ಅಂಡ್ ರೆಡ್‌ನಲ್ಲಿ ಮಿಂಚುತ್ತಿದೆ ಪಾಪ್ ಡೂಪ್ಲೆಸ್ ನಾಯಕತ್ವದ ತಂಡ.

ಇನ್ನು ಎರಡು ದಿನಗಳ ಹಿಂದಷ್ಟೇ ವುಮೆನ್ ಪ್ರೀಮಿಯರ್ ಲೀಗ್‌ನಲ್ಲಿ ಕಪ್ ಗೆದ್ದು ಬಂದ ಸ್ಮೃತಿ ಮಂದಾನ ತನ್ನ ಇಡೀ ಟೀಂ ಜೊತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಿಸಿದ್ರು. IPL ಟೀಂ ಜೊತೆಗೆ ಜೆರ್ಸಿ ಬಿಡುಗಡೆ ಮಾಡಿದ್ರು. ಮಾರ್ಚ್ 22ರಿಂದ ಪುರುಷರ IPL ಆರಂಭ ಆಗ್ತಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ.
ಇಲ್ಲೀವರೆಗೂ ಕಪ್ ನಮ್ದೇ ಎನ್ನುತ್ತಿದ್ದ ಅಭಿಮಾನಿಗಳು WPL ಗೆದ್ದ ಬಳಿಕ ಕಪ್ ನಮ್ದು ಎನ್ನುವುದಕ್ಕೆ ಶುರು ಮಾಡಿದ್ದಾರೆ. ಮಹಿಳಾ RCB ಟೀಂ ಕಪ್ ಗೆದ್ದು ಬೀಗಿದೆ. ಇದೀಗ ಪುರುಷರ ಟೀಂ ಮೇಲೆ ಒತ್ತಡ ಹೆಚ್ಚಾಗಿದೆ ಎನ್ನುವುದು ಸತ್ಯ. ಆದರೆ ಇನ್ಮುಂದೆ ಹೊಸ ಅಧ್ಯಾಯ ಶುರುವಾಗಲಿದೆ ಎಂದಿರುವ ವಿರಾಟ್ ಕೊಹ್ಲಿ, ಈ ಬಾರಿ ನಾವೂ ಕೂಡ ಕಪ್ ಗೆದ್ದೇ ಗೆಲ್ತೀವಿ ಅನ್ನೋ ಸುಳಿವು ನೀಡಿದ್ದಾರೆ.
