RCB ಅನ್ ಬಾಕ್ಸ್ ಇವೆಂಟ್ ಯಶಸ್ವಿಯಾಗಿ ಮುಗಿದಿದೆ. ಈ ಬಾರಿಯ ಐಪಿಎಲ್ ಆವೃತ್ತಿಗೆ ಬೆಂಗಳೂರು ಟೀಮ್ ಸರ್ವರೀತಿಯಲ್ಲೂ ಸಜ್ಜಾಗಿದೆ.
ಆರ್ಸಿಬಿ ಬಾಯ್ಸ್ ಜರ್ಸಿ ಯಲ್ಲಿ ಬದಲಾವಣೆ ಆಗಿದ್ದು ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಫಾಫ್ ಪಡೆ ಹೊಸ ಅವತಾರದಲ್ಲಿ ಕಣಕ್ಕಿಳಿಯಲಿದೆ.
ಕೆಂಪು ಬಣ್ಣದ ಜೊತೆ ಈ ಬಾರಿ ನೀಲಿ ಬಣ್ಣ ಇರುವ ಜೆರ್ಸಿಯನ್ನು ಆರ್ಸಿಬಿ ಪ್ಲೇಯರ್ಸ್ ಧರಿಸಲಿದ್ದಾರೆ. ರೆಡ್ ಕಲರ್ ಜೊತೆಯಿದ್ದ ಕಪ್ಪು ಬಣ್ಣಕ್ಕೆ ಗುಡ್ ಬಾಯ್ ಹೇಳಿ, ಬ್ಲೂ ಕಲರ್ಗೆ ಬಳಸಿ ಹೊಸ ಬಟ್ಟೆ ವಿನ್ಯಾಸ ಗೊಳಿಸಲಾಗಿದೆ . ಅನ್ಬಾಕ್ಸ್ ಈವೆಂಟ್ನಲ್ಲಿ ಹೊಸ ಜೆರ್ಸಿಯನ್ನು ಅನಾವರಣ ಮಾಡಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನ್ಬಾಕ್ಸ್ ಈವೆಂಟ್ ಜೋರಾಗಿ ನಡೆದಿದ್ದು ಫ್ರಾಂಚೈಸಿಯು ಕೆಲವೊಂದು ಮಹತ್ವದ ಅನೌನ್ಸ್ ಮಾಡಿದ್ದಾರೆ. ಅದರಲ್ಲಿ ಜೆರ್ಸಿ ಬಣ್ಣಗಳನ್ನು ಬದಲಾವಣೆ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರತಿ ವರ್ಷ ಕೆಂಪು ಬಣ್ಣದ ಜೊತೆ ಕಪ್ಪು ಬಣ್ಣ ಇರುವ ಜೆರ್ಸಿ ಇರುತ್ತಿತ್ತು. ಆದರೆ ಈ ಬಾರಿ ಕೊಂಚ ಬದಲಾವಣೆ ಮಾಡಲಾಗಿದ್ದು ಕೆಂಪು ಬಣ್ಣದ ಜೊತೆ ಬ್ಲೂ ಇರುವ ಜೆರ್ಸಿಯನ್ನು ಫಾಫ್ ಬಾಯ್ಸ್ ಧರಿಸಿ ಮೈದಾನಕ್ಕೆ ಹೊಸ ಹುರುಪಿನಿಂದ ಇಳಿಯಲಿದ್ದಾರೆ.
