ಲೋಕಸಮರದ (parliment election) ಪ್ರಚಾರದ ನಿಮಿತ್ತ ಶಿವಮೊಗ್ಗಕ್ಕೆ (shivamogga)ಭೇಟಿ ಕೊಟ್ಟು ಅದ್ಧೂರಿ ಸಮಾವೇಶ ನಡೆಸಿದ್ದ ಮೋದಿ(modi ) ರಾಜ್ಯದಲ್ಲಿ 4 ಜನ ಮುಂಖ್ಯಮಂತ್ರಿಗಳು ಇದ್ದಾರೆ. ವೀಕ್ ಸಿಎಂ(weak cm), ಸೂಪರ್ ಸಿಎಂ(super cm), ಶ್ಯಾಡೋ ಸಿಎಂ (shadow cm) ಎಂದೆಲ್ಲಾ ಹೇಳೋದ್ರ ಮೂಲಕ ಸಿಎಂ ಸಿದ್ದರಾಮಯ್ಯ (cm siddaramiaha) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (Dcm Dk shivakumar) ರನ್ನ ಲೇವಡಿ ಮಾಡಿದ್ದರು. ಇದಕ್ಕೆ X ನಲ್ಲಿ ಟ್ವೀಟ್ ಮಾಡುವ ಮೂಲಕ ನಮೋ ಗೆ ಟಕ್ಕರ್ ಕೊಟ್ಟಿರುವ ಸಿದ್ದು , ನಾನೊಬ್ಬ ಸ್ಟ್ರಾಂಗ್ ಸಿಎಂ(Strong cm) , ಆದ್ರೆ ನೀವು ವೀಕ್ ಪಿಎಂ (Weak pm) ಅಂತ ಕುಟುಕಿದ್ದಾರೆ.

ಸಿದ್ದು ಟ್ವೀಟ್ ನಲ್ಲಿ ಏನಿದೆ ಅಂತ ನೋಡೋದಾದ್ರೆ !
ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರೇ(Pm narendra modi) , ಕಾಂಗ್ರೆಸ್ (congress) ಪಕ್ಷದಲ್ಲಿ ಸೂಪರ್ ಸಿಎಂ, ಶ್ಯಾಡೋ ಸಿಎಂ ಗಳಿದ್ದಾರೆ ಎಂದು ಶಿವಮೊಗ್ಗದ ನಿಮ್ಮ ಪಕ್ಷದ ಸಭೆಯಲ್ಲಿ ನೀವು ಗೇಲಿ ಮಾಡಿದ್ದೀರಿ! ನಮ್ಮಲ್ಲಿ ಸೂಪರ್ರೂ ಇಲ್ಲ, ಶ್ಯಾಡೋನೂ ಇಲ್ಲ, ಇರುವುದು ಒಬ್ಬರೇ ಸಿಎಂ ಅದು ‘‘ಸ್ಟ್ರಾಂಗ್ ಸಿಎಂ’’, ನಿಮ್ಮ ಹಾಗೆ ನಾನು ‘‘ವೀಕ್ ಪಿಎಂ’’ ಅಲ್ಲ.
ಮೋದಿಯವರೇ ನಿಮ್ಮನ್ನು ನೀವು 56 ಇಂಚಿನ ಎದೆಯುಳ್ಳವನು ಎಂದು ಬಣ್ಣಿಸಿಕೊಳ್ಳುತ್ತೀರಿ, ನಿಮ್ಮ ಅಭಿಮಾನಿಗಳು ನಿಮ್ಮನ್ನು ವಿಶ್ವಗುರು ಎಂದು ಕೊಂಡಾಡುತ್ತಾರೆ. ಆದರೆ ನೀವೊಬ್ಬ ‘‘ವೀಕ್ ಪಿಎಂ’’ ಎಂದು ಮತ್ತೆ ಮತ್ತೆ ತೋರಿಸಿಕೊಡುತ್ತಿದ್ದೀರಿ.
ಬಿ.ಎಸ್ ಯಡಿಯೂರಪ್ಪನವರು ಒಂದು ಕಾಲದಲ್ಲಿ ನಿಮ್ಮ ನಾಯಕತ್ವದ ವಿರುದ್ಧವೇ ಬಂಡಾಯ ಎದ್ದವರು, ನಿಮ್ಮನ್ನು ಹೀನಾಯವಾಗಿ ನಿಂದಿಸಿದವರು. ಅಂತಹವರ ಕಾಲಿಗೆ ಬಿದ್ದು ಮತ್ತೆ ಪಕ್ಷಕ್ಕೆ ಕರೆತಂದು ಮೆರವಣಿಗೆ ಮಾಡುವ ಮೂಲಕ ನೀವೊಬ್ಬ ‘‘ವೀಕ್ ಪಿಎಂ’’ ಎಂದು ನೀವೇ ತೋರಿಸಿಕೊಟ್ಟಂತಾಗಲಿಲ್ಲವೇ?

ಎಂದು ಇತಿಹಾಸವನ್ನು ಕೆಣಕಿ ಮೋದಿಯನ್ನು (modi) ಟೀಕಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಈ ಮಾತಿನ ಪ್ರಹಾರಗಳು ಇನ್ನಷ್ಟು ಹೆಚ್ಚಾಗಲಿದ್ದು ಲೋಕಸಮರ (Parliment election) ಕದನ ಕುತೂಹಲಕ್ಕೆ ಕಾರಣವಾಗಿದೆ.






