ಅಬ್ಬಾ ! ಸತತ 16 ವರ್ಷಗಳ (16 years) ಕನಸು ಈ ಸೀಸನ್‌ನಲ್ಲಿ ನನಸಾಗುತ್ತಾ..ಈ ಬಾರಿಯ IPL ಸೀಸನ್ ಆರಂಭಕ್ಕೆ ಇನ್ನೊಂದು ವಾರ ಬಾಕಿಯಿದೆ. ಟ್ರೋಫಿ (Trophy) ಗೆಲುವಿಗಾಗಿ ಫ್ರಾಂಚೈಸಿಗಳ (Franchise) ಸರ್ಕಸ್ ಜೋರಾಗಿದೆ. ಭರ್ಜರಿ ತಯಾರಿಯನ್ನ ಆರಂಭಿಸಿರೋ ತಂಡಗಳೆಲ್ಲಾ ಚಾಂಪಿಯನ್ (champion) ಪಟ್ಟಕ್ಕೇರೋ ಉತ್ಸಾಹದಲ್ಲಿವೆ. ಸೋ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers bangalore) ದೊಡ್ಡ ಬದಲಾವಣೆಗೆ ಕೈ ಹಾಕಿದೆ !

ರಾಯಲ್ ಚಾಲೆಂಜರ್ಸ್ ಬೆಂಗಳೂರ್ (Royal challengers bangalore) ಬಿಡುಗಡೆ ಮಾಡಿರೋ ಅನ್‌ಬಾಕ್ಸ್ ಈವೆಂಟ್ ಪ್ರೋಮೊ (unbox event) ದೊಡ್ಡದೊಂದು ಸುಳಿವು ನೀಡಿದೆ. ರಿಷಭ್ ಶೆಟ್ಟಿ (Rishab Shetty) ಇರುವ ಅನ್ ಬಾಕ್ಸ್ ಇವೆಂಟ್ ಪ್ರೋಮೋವನ್ನ ಈಗಾಗಲೇ ನೀವೆಲ್ಲ ನೋಡಿರ್ತೀರಾ. ಇದೇ ಇದೇ ಪ್ರೋಮೋದಲ್ಲಿ (Promo)ಆ ದೊಡ್ಡ ಬದಲಾವಣೆಯ ಸುಳಿವು ಸಿಕ್ಕಿರೋದು.

ಮಾರ್ಚ್ 19ಕ್ಕೆ (march 19th) ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ (chinnaswamy stadium) ಆರ್‌ಸಿಬಿಯ (Rcb) ಅನ್‌ಬಾಕ್ಸ್ ಇವೆಂಟ್ ನಡೆಯಲಿದೆ. ಈಗಾಗಲೇ ಅಭಿಮಾನಿಗಳಿಗೆ (rcb fans) ಅಚ್ಚರಿ ಕಾದಿದೆ ಅಂತಾ ಕೂಡ ಫ್ರಾಂಚೈಸಿ ಹೇಳಿತ್ತು. ಇದ್ರ ಬೆನ್ನಲ್ಲೇ ಆರ್‌ಸಿಬಿ ರಿಲೀಸ್ ಮಾಡಿರುವ ಪ್ರೋಮೋ (promo) ತಂಡದ ಹೆಸರು ಬದಲಾವಣೆ ಮಾಡುವ ಸೂಚನೆ ನೀಡಿದೆ.

ಈ ಪ್ರೋಮೋದಲ್ಲಿ ರಿಷಭ್ ಶೆಟ್ಟಿ “ಬೆಂಗಳೂರ್” ಎಂದು ಬರೆದಿದ್ದ ಕೋಣವನ್ನ ಓಡಿಸಿರೋದು ಬದಲಾವಣೆಯ ಸುಳಿವು ಅನ್ನೋದು ಫ್ಯಾನ್ಸ್ ಅಭಿಪ್ರಾಯ. ಬೆಂಗಳೂರು ಹೆಸರು ಬದಲಾವಣೆ, ಆರ್‌ಸಿಬಿ ಅಭಿಮಾನಿಗಳ 16 (16 years) ವರ್ಷಗಳ ಬೇಡಿಕೆಯಾಗಿತ್ತು.

“Bangalore” ಬದಲಿಗೆ “ಬೆಂಗಳೂರು” ಆಗಲಿದೆ ಅನ್ನೋದು ಅಭಿಮಾನಿಗಳ ನಿರೀಕ್ಷೆಯಾಗಿದ್ದು ಆರ್ಸಿಬಿ (Rcb)ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಅಷ್ಟೇ ಅಲ್ಲ ಹೆಸರು ಬದಲಾಗಿದ್ದರಿಂದ ಈ ಬಾರಿ ಲಕ್ (luck) ಕೂಡ ಬದಲಾಗುತ್ತೆ ಅಂತ ಹೇಳ್ತಿರುವ ಫ್ಯಾನ್ಸ್ .. ಈ ಸಲ ಕಪ್ ನಮ್ದೇ ಅಂತಿದ್ದಾರೆ(e sala cup namde) .













