
ಬೆಂಗಳೂರಲ್ಲಿ ನಡೆದ IPL ಸೀಸನ್ 17ರ ರೋಚಕ ಪಂದ್ಯದಲ್ಲಿ RCB ವಿರೋಚಿತ ಸೋಲು ಕಂಡಿದೆ. SRH ನೀಡಿದ ಬೃಹತ್ ಟೋಟಲ್ ಬೆನ್ನತ್ತಿದ RCB ಕೇವಲ 25 ರನ್ ಗಳಿಂದ ಸೋತಿದೆ.ವಿರಾಟ್ ಕೊಹ್ಲಿ ಅಂತೂ ಹೈದರಬಾದ್ ಬೌಲರ್ಗಳ ಬೆಂಡೆತ್ತಿದ್ರು. ತಾನು ಎದುರಿಸಿದ ಕೇವಲ 20 ಬಾಲ್ನಲ್ಲಿ 2 ಸಿಕ್ಸರ್, 4 ಫೋರ್ ಸಮೇತ 42 ರನ್ ಚಚ್ಚಿ ವಿಕೆಟ್ ಒಪ್ಪಿಸಿದ್ರು. ಇನ್ನೊಂದೆಡೆ ಬ್ಯಾಟಿಂಗ್ ಮಾಡುತ್ತಿರೋ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಕೇವಲ 23 ಬಾಲ್ನಲ್ಲಿ 51 ರನ್ ಸಿಡಿಸಿದ್ರು. ಬರೋಬ್ಬರಿ 3 ಸಿಕ್ಸರ್, 6 ಫೋರ್ ಚಚ್ಚಿದ್ರು.ಆರ್ಸಿಬಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ ಆರ್ಸಿಬಿಯನ್ನು ಗೆಲ್ಲಿಸಲು ಯತ್ನಿಸಿದ್ರು. ತಾನು ಆಡಿದ ಕೇವಲ 35 ಬಾಲ್ನಲ್ಲಿ ಬರೋಬ್ಬರಿ 7 ಸಿಕ್ಸರ್, 3 ಫೋರ್ ಸಮೇತ 83 ರನ್ ಸಿಡಿಸಿದ್ರು. ಇವರ ಸ್ಟ್ರೈಕ್ ರೇಟ್ ಬರೋಬ್ಬರಿ 240 ಇತ್ತು. ಮಹಿಪಾಲ್ ಲೋಮ್ರೋರ್ 19, ಅನೂಜ್ ರಾವತ್ 25 ರನ್ ಗಳಿಸಿದ್ರೂ ಆರ್ಸಿಬಿ 262 ರನ್ ಪೇರಿಸಲು ಸಹಾಯವಾಯ್ತು.