RCB ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ IPL ಸೀಸನ್ 17ರ ಪಂದ್ಯದಲ್ಲಿ GT ತಂಡವನ್ನು ಮಣಿಸಿ ಪಂದ್ಯ ಗೆದ್ದಿದೆ. ಈ ಸೀಸನ್ ನಲ್ಲಿ RCB ಗೆ ಇದು 3 ನೆ ಗೆಲುವಾಗಿದೆ. ವಿಲ್ ಜ್ಯಾಕ್ಸ್ (100) ಅವರ ಶತಕ ಮತ್ತು ವಿರಾಟ್ ಕೊಹ್ಲಿಯ(70) ಅರ್ಧಶತಕದ ಸೊಗಸಾದ ಬ್ಯಾಟಿಂಗ್ ನೆರವಿನಿಂದ ರಾಯಲ್ ಜಾಲೆಂಜರ್ಸ್ ಬೆಂಗಳೂರು(RCB vs GT) ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ 9 ವಿಕೆಟ್ಗಳ ಗೆಲುವು ಸಾಧಿಸಿದೆ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಗುಜರಾತ್ ಟೈಟಾನ್ಸ್ ಸಾಯಿ ಸುದರ್ಶನ್(84*) ಮತ್ತು ಶಾರೂಖ್ ಖಾನ್(58) ಅರ್ಧಶತಕದ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 20 ಓವರ್ಗೆ 3 ವಿಕೆಟ್ ಕಳೆದುಕೊಂಡು ಭರ್ತಿ 200 ರನ್ ಪೇರಿಸಿತು. ಇದಕ್ಕೆ ಪ್ರತಿಯಾಗಿ ಆರ್ಸಿಬಿ ಬ್ಯಾಟಿಂಗ್ ಜೋಶ್ನೊಂದಿಗೆ ಕೇವಲ 16 ಓವರ್ಗಳಲ್ಲಿ 1 ವಿಕೆಟ್ನಷ್ಟಕ್ಕೆ 206 ರನ್ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.
ವಿರಾಟ್ ಕೊಹ್ಲಿ 44 ಎಸೆತಗಳಿಂದ 70(6 ಬೌಂಡರಿ ಮತ್ತು 3 ಸಿಕ್ಸರ್) ರನ್ ಬಾರಿಸಿದರು. ವಿಲ್ ಜಾಕ್ಸ್ 41 ಎಸೆತಗಳಿಂದ ಬರೋಬ್ಬರಿ 10 ಸಿಕ್ಸರ್ ಮತ್ತು 5 ಬೌಂಡರಿ ಬಾರಿಸಿ ಭರ್ತಿ 100 ರನ್ ಪೇರಿಸಿದರು. ಇದು ಅವರ ಚೊಚ್ಚಲ ಐಪಿಎಲ್ ಶತಕವಾಗಿದೆ.