ಈಗಾಗಲೇ ಐಪಿಎಲ್ 2025 ರ (IPL 2025) ಫೀವರ್ ದೇಶಾದ್ಯಂತ ಆರಂಭವಾಗಿದ್ದು ದೇಶದ ಬೇರೆ ಬೇರೆ ಕಡೆಗಳಲ್ಲಿ ಪಂದ್ಯಗಳು ನಡೆದಿವೆ. ಇದೀಗ ರಾಜಧಾನಿ ಬೆಂಗಳೂರಲ್ಲೂ (Bengaluru) ಪಂದ್ಯಗಳು ಇಂದಿನಿಂದ ಆರಂಭವಾಗಲಿದ್ದು ಕಾತುರತೆ ಮತ್ತು ಸಿದ್ಧತೆ ಜೋರಾಗಿದೆ.

ಹೀಗಾಗಿ ಐಪಿಎಲ್ ಪಂದ್ಯಗಳಿಗೆ ಬೆಂಗಳೂರು ನಗರ ಸಜ್ಜಾಗುತ್ತಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ಐಪಿಎಲ್ ಪಂದ್ಯದ ಹಿನ್ನಲೆ ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚುವರಿ ಬಸ್ ಹಾಗೂ ಮೆಟ್ರೋ ವ್ಯವಸ್ಥೆ ಕಲ್ಪಿಸಲಾಗಿದೆ.
ಇಂದು ಆರ್.ಸಿ.ಬಿ ಮತ್ತು ಜಿ ಟಿ ತಂಡಗಳು ಮುಖಾಮುಖಿಯಾಗಲಿದ್ದು, 7:30 ಕ್ಕೆ ಪಂದ್ಯ ಆರಂಭವಾಗಲಿದೆ.ಈ ಹಿನ್ನಲೆ ರಾತ್ರಿ 12.30ರವರೆಗೆ ಮೆಟ್ರೋ ಸೇವೆ ವಿಸ್ತರಣೆ ಆಗಲಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಮತ್ತು ಏಪ್ರೀಲ್ 10, 18 ಹಾಗೂ 24ರಂದು ಐಪಿಎಲ್ ಮ್ಯಾಚ್ ನಡೆಯಲಿದೆ.ಹೀಗಾಗಿ ಮೆಜೆಸ್ಟಿಕ್‌ನಿಂದ ನಾಲ್ಕು ದಿಕ್ಕುಗಳಿಗೂ ಹೊರಡುವ ಪ್ರಯಾಣಿಕರಿಗೆ ಮಧ್ಯರಾತ್ರಿ 1.15ರ ತನಕ ಮೆಟ್ರೋ ಸೇವೆ ಇರಲಿದೆ.
ಇನ್ನು ವೈಟ್ ಫೀಲ್ಡ್, ಚಲ್ಲಘಟ್ಟ,ರೇಷ್ಮೆ ಸಂಸ್ಥೆ, ಮಾದಾವರ 4 ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರಾತ್ರಿ 12.30ಕ್ಕೆ ಹೊರಡಲಿದೆ.ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಕೊನೆಯ ರೈಲು 1.15ಕ್ಕೆ ಹೊರಡಲಿದೆ ಎಂದು BMRCL ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.