ಇಂದು ರಾಜಧಾನಿ ಬೆಂಗಳೂರು ಮತ್ತೊಂದು ಐಪಿಎಲ್‌ನಲ್ಲಿ ಪಂದ್ಯಕ್ಕೆ ಸಾಕ್ಷೆಯಾಗಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಕಾಳಗ ನಡೆಯಲಿದೆ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಬರೋಬ್ಬರಿ 7 ಗೆಲುವು ದಾಖಲಿಸಿದ್ದು ತನ್ನ ಪ್ಲೇ ಆಫ್ ಎಂಟ್ರಿ ಯನ್ನು ಈಗಾಗಲೇ ಬಹುತೇಕ ಖಚಿತಪಡಿಸಿಕೊಂಡಿದೆ.ಈ ಪಂದ್ಯದಗೆಲುವಿನ ಮೂಲಕ ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ.
ಇನ್ನು ಚಿನ್ನಸ್ವಾಮುಯಲ್ಲಿ ಸತತ 3 ಪಂದ್ಯಗಳ ಸೋಲಿನ ಸರಣಿಯನ್ನು ಕಳೆದ ಪಂದ್ಯದಲ್ಲಿ ಮುರಿದಿದ್ದ RCB, ಇದೀಗ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದ್ದು, ಈ ಪಂದ್ಯ CSK ಪಾಲಿಗೆ ಕೇವಲ ಔಪಚಾರಿಕ ಪಂದ್ಯವಾಗಿರಲಿದೆ.