ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾಗಿರುವ ರಿಲಯನ್ಸ್ ಕ್ಯಾಪಿಟನ್ ಕಂಪನಿಯ ಆಡಳಿತ ಮಂಡಳಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೋಮವಾರ ಸೂಪರ್ಸೀಡ್ ಮಾಡಿದೆ.
ನಿರ್ದೇಶಕರ ಮಂಡಳಿ ಸಮರ್ಪಕವಾಗಿ ಆಡಳಿತ ನಿರ್ವಹಿಸುವಲ್ಲಿ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಮತ್ತು ಸಾಲ ಮರು ಪಾವತಿಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಸೂಪರ್ ಸೀಡ್ ಮಾಡಲಾಗಿದ್ದು, ಆಡಳಿತಾಧಿಕಾರಿಯಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರರಾವ್ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕ ಮಾಡಿದೆ.
ರಿಲಯನ್ಸ್ ಕ್ಯಾಪಿಟಲ್ ಕಂಪನಿ ವಿರುದ್ಧ ದಿವಾಳಿ ಕಾಯ್ದೆ ಅನ್ವಯ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರಕ್ಕೆ ದಿವಾಳಿ ನಿಯಮಗಳನ್ವಯ ರಿಲಯನ್ಸ್ ಆಸ್ತಿಯನ್ನು ವಿಲೇ ಮಾಡಲು RBI ನಿಂದ ಕೋರಲಾಗಿದೆ.
ಅಕ್ಟೋಬರ್ 31ರ ಮಾಹಿತಿ ಪ್ರಕಾರ ಎಚ್ಡಿಎಫ್ಗೆ ₹ 4.77 ಕೋಟಿ ಹಾಗೂ ಆಯಕ್ಸಿಸ್ ಬ್ಯಾಂಕ್ಗೆ ₹ 0.71 ಕೋಟಿ ಬಡ್ಡಿಕಟ್ಟುವುದುನ್ನು ರಿಲಯನ್ಸ್ ಕ್ಯಾಪಿಟಲ್ ಬಾಕಿ ಉಳಿಸಿಕೊಂಡಿದೆ. ಎಚ್ಡಿಎಫ್ಸಿಯಿಂದ 6 ತಿಂಗಳಿನಿಂದ 7 ವರ್ಷಗಳ ಅವಧಿಗೆ ಶೇ 10.6ರಿಂದ ಶೇ 13ರ ಬಡ್ಡಿದರದಲ್ಲಿ ಹಾಗೂ ಆಯಕ್ಸಿಸ್ ಬ್ಯಾಂಕ್ನಿಂದ 3ರಿಂದ 7 ವರ್ಷಗಳ ಅವಧಿಗೆ ಶೇ 8.25ರ ಬಡ್ಡಿದರದಲ್ಲಿ ರಿಲಯನ್ಸ್ ಕ್ಯಾಪಿಟಲ್ ಸಾಲ ಪಡೆದುಕೊಂಡಿತ್ತು. ನ್ಯಾಯಾಲಯದ ಆದೇಶಗಳ ನಿರ್ಬಂಧ ಇರುವುದರಿಂದ ಆಸ್ತಿಗಳ ನಗದೀಕರಣ ಸಾಧ್ಯವಾಗುತ್ತಿಲ್ಲ. ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಈ ವಿಷಯವನ್ನು ಕಂಪನಿಯು ತಿಳಿಸಿದೆ. ಹೀಗಾಗಿ ಸಾಲದ ತೀರುವಳಿ ಸಾಧ್ಯವಾಗುತ್ತಿಲ್ಲ ಎಂದರು.
ರಿಲಯನ್ಸ್ ಕ್ಯಾಪಿಟಲ್ HDFC ಮತ್ತು ಆಕ್ಸಿಸ್ ಬ್ಯಾಂಕುಗಳಿಂದ 624 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದು, ಇದನ್ನು ಮರುಪಾವತಿಸುವ ವಿಫಲವಾಗಿದೆ. ಈ ಕಾರಣದಿಂದ ಸೂಪರ್ ಸೀಡ್ ಮಾಡಲಾಗಿದೆ.
“ಇನ್ಸಾಲ್ವೆನ್ಸಿ ಎಂಡ್ ಬ್ಯಾಂಕ್ರಪ್ಟ್ಸಿ (ಇನ್ಸಾಲ್ವೆನ್ಸಿ ಎಂಡ್ ಲಿಕ್ವಿಡೇಶನ್ ಪ್ರೊಸೀಡಿಂಗ್ಸ್ ಆಫ್ ಫಿನಾನ್ಶಿಯಲ್ ಸರ್ವಿಸ್ ಪ್ರೊವೈಡರ್ಸ್ ಎಂಡ್ ಅಪ್ಲಿಕೇಶನ್ ಟು ಅಡ್ಜುಡಿಕೇಟಿಂಗ್ ಅಥಾರಿಟಿ) ರೂಲ್ಸ್ 2019 ಅನ್ವಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ ಸೂಕ್ತ ಕ್ರಮಕೈಗೊಳ್ಳಿದೆ,” ಎಂದು ಹೇಳಿಕೆ ತಿಳಿಸಿದೆ.
ಕಂಪೆನಿಯ ದಿವಾಳಿತನ ಘೋಷಣೆಗೆ ಸಂಬಂಧಿಸಿದ ಪ್ರಕ್ರಿಯೆಗಳಿಗಾಗಿ ಆಡಳಿತಾಧಿಕಾರಿಯನ್ನು ಇನ್ಸಾಲ್ವೆನ್ಸಿ ರಿಸೊಲ್ಯೂಶನ್ ಪ್ರೊಫೆಶನಲ್ ಆಗಿ ನೇಮಕಗೊಳಿಸುವಂತೆ ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯುನಲ್ನ ಮುಂಬೈ ಪೀಠಕ್ಕೆ ಆರ್ಬಿಐ ಅರ್ಜಿ ಸಲ್ಲಿಸಲಿದೆ ಎಂದು ಹೇಳಿಕೆ ತಿಳಿಸಿದೆ.