ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers bengaluru) ವಾಂಖೆಡೆ ಸ್ಟೇಡಿಯಂ ನಲ್ಲಿ ಮುಂಬೈ ಇಂಡಿಯನ್ಸ್ (Mumbai indians) ತಂಡದ ವಿರುದ್ಧ ಸೆಣೆಸಾಡಲಿದೆ. ಇವತ್ತಿನ ಪಂದ್ಯ RCB ಪಾಲಿಗೆ ಬಹುತೇಕ ನಿರ್ಣಾಯಕ ಪಂದ್ಯವಾಗಲಿದ್ದು ಅಭಿಮಾನಿಗಳ ಎದೆ ಬಡಿತ ಹೆಚ್ಚಾಗಿದೆ. Do or Die ಎಂಬ ಸನ್ನಿವೇಶದಲ್ಲಿ ಸದ್ಯ RCB ತಂಡ ಮೈದಾನಕ್ಕೆ ಇಳಿಯಲಿದೆ.
ಇಲ್ಲಿಯವರೆಗೆ ನಡೆದ ೪ ಪದ್ಯದಲ್ಲಿ ಕೇವಲ ಒಂದು ಪಂದ್ಯ ಗೆದ್ದಿರುವ ರಾಯಲ್ ಚಾಲೆಂಜರ್ಸ್(Royal challengers), ಪಾಯಿಂಟ್ಸ್ ಟೇಬಲ್ (points table) ನಲ್ಲಿ ಮೇಲೇರಬೇಕಿದೆ. ಪ್ಲೇ ಆಫ್ ರೇಸ್ನಲ್ಲಿ ಜೀವಂತ ಉಳಿಯಬೇಕಿದ್ದರೆ, ಇನ್ನು ಬಾಕಿ ಇರುವ 9 ಪಂದ್ಯಗಳ ಪೈಕಿ ಕನಿಷ್ಠ 7 ಪಂದ್ಯಗಳನ್ನ ಗೆಲ್ಲಲೆಬೇಕಾಗಿದೆ.
ಈ ಕಾರಣಕ್ಕಾಗಿ ಇಂದು ನಡೆಯುವ ಪಂದ್ಯ ಆರ್ಸಿಬಿ (RCB) ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮುಂಬೈ ಇಂಡಿಯನ್ಸ್ ಕೂಡ ಆರಂಭಿಕವಾಗಿ ಸೋಲಿನ ಸುಳಿಕೆ ಸಿಲುಕಿ ನಂತರ ಚೇತರಿಸಿಕೊಂಡಿದ್ದು ಇವತ್ತಿನ ಮ್ಯಾಚ್ ರೋಚಕತೆಗೆ ಸಾಕ್ಷಿಯಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.ಇನ್ನು ಆರ್ಸಿಬಿ (RCB) ಈ ಪಂದ್ಯವನ್ನು ಗೆಲ್ಲುವುದರ ಜೊತೆಗೆ ಸ್ಥಿರತೆ ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ