Bangalore on Date: 02/06/2025-ನಟ ಕಮಲ್ ಹಾಸನ್ (Kamal hasan) ವಿರುದ್ಧ ಕೆರಳಿ ಕೆಂಡವಾಗಿರುವ ಕನ್ನಡಿಗರ ಕಿಚ್ಚು ಇನ್ನೂ ತಣ್ಣಗಾಗಿಲ್ಲ. ತಮಿಳು (Tamil) ಕನ್ನಡದ (Kannada)ತಾಯಿ, ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂದು ನಟ ಕಮಲ್ ಹಾಸನ್ ನಾಲಗೆ ಹರಿಬಿಟ್ಟ ಕಾರಣ ಇಡೀ ಕರುನಾಡು ಧಗಧಗಿಸುತ್ತಿದೆ. ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳುವ ತನಕ ಕನ್ನಡಿಗರು ಕಮಾಲ್ ಹಾಸನ್ ರನ್ನ ಕ್ಷಮಿಸಲ್ಲ, ಅವರ ಸಿನಿಮಾಗಳನ್ನು ರಿಲೀಸ್ ಮಾಡಲು ಬಿಡಲ್ಲ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.

ಈ ಮಧ್ಯೆ ಕಿರುತೆರೆಯ ನಟಿ ಪುಟ ಗೌರಿ ಖ್ಯಾತಿಯ ರಂಜಿನಿ ರಾಘವನ್ (Ranjini raghavan) ನಟ ಕಮಲ್ ಹಾಸನ್ ರನ್ನು ಭೇಟಿಯಾಗಿದ್ದಾರೆ.ಇಷ್ಟೆಲ್ಲಾ ವಿವಾದದ ಮಧ್ಯೆ ನಟ ಕನಾಲ್ ಹಾಸನ್ ರನ್ನು ಭೇಟಿಯಾಗಿರುವ ರಂಜನಿ ರಾಘವನ್ ಕನಾಲ್ ಹಾಸನ್ ರಿಗೆ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಉಭಯ ರೀತಿಯ ಚರ್ಚೆಗೂ ದಾರಿ ಮಾಡಿಕೊಟ್ಟಿದೆ.
ಒಂದೆಡೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಮನಸ್ಸು ನೋಯಿಸಿದ್ದಲ್ಲದೆ ತಾವು ಕ್ಷಮೆ ಕೇಳಲ್ಲ ಎಂದು ಉದ್ಧಟತನ ತೋರಿರುವ ಕಮಲ್ ಹಾಸನ್ ಗೆ ಈ ರೀತಿ ಮೃದು ಧೋರಣೆ ತೋರುವುದು ಎಷ್ಟು ಸರಿ. ಈ ಸಂದರ್ಭದಲ್ಲಿ ಈ ರೀತಿಯ ನಡೆಯ ಅಗತ್ಯವೇನಿತ್ತು. ನಾನು ಕನ್ನಡಿಗರ ಕ್ಷಮೆ ಕೇಳಲ್ಲ ಎಂದಿರುವ ನಟ ಕಮಲ್ ಹಾಸನ್ ರನ್ನು ಈ ಕೆಲವು ನಟ ನಟಿಯರು ಸಮರ್ಥಿಸಿಕೊಳ್ಳುತ್ತಿರುವುದು ಏಕೆ ಎಂಬ ವ್ಯಾಪಕ ಚರ್ಚೆ ಶುರುವಾಗಿದ್ದು ಕೆಲ ನೆಟ್ಟಿಗರು ರಂಜಿನಿ ರಾಘವನ್ ವಿರುದ್ಧ ಕಿಡಿ ಕಾದಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಜೂನ್ 5 ರಂದು ತೆರೆ ಕಾಣಬೇಕಿರುವ ನಟ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗುವುದು ಬಹುತೇಕ ಡೌಟ್ ಎನ್ನಲಾಗಿದೆ.