• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕತ್ತಿ ಝಳಪಿಸಿ ಹತ್ಯೆಯ ಮಾತುಗಳನ್ನಾಡಿದವರ ಮೇಲೆ ಕ್ರಮ ಏಕಿಲ್ಲ ಬಿಜೆಪಿಯರ ಆಕ್ರೋಶ..!!

ಪ್ರತಿಧ್ವನಿ by ಪ್ರತಿಧ್ವನಿ
June 2, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ (V Sunil Kumar) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ಮುಖಂಡರ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಿರುವುದನ್ನು ಅವರು ಪ್ರಶ್ನಿಸಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ (FIR) ದಾಖಲಾಗಿರುವುದನ್ನು ಉಲ್ಲೇಖಿಸಿ, ಸರ್ಕಾರದ ಏಕಪಕ್ಷೀಯ ನಿಲುವನ್ನು ಅವರು ಖಂಡಿಸಿದರು.

ADVERTISEMENT

ಕಾಂಗ್ರೆಸ್ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಹಿಂದೂ ಸಂಘಟನೆಗಳ ಮುಖಂಡರ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಿದ್ದು, ಖುದ್ದು ರಾಜ್ಯ ಸರ್ಕಾರವೇ ‘‘ದ್ವೇಷ ಭಾಷೆ’’ಯ ಪ್ರಚಾರ ನಡೆಸುತ್ತಿದೆ ಎಂದು ಬಿಜೆಪಿ‌ (BJP) ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ (V Sunil Kumar) ಆರೋಪಿಸಿದ್ದಾರೆ. ಆರ್​ಎಸ್​​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್(RSS Leader Kalladka Prabhakar Bhat) ಸೇರಿದಂತೆ ಹಿಂದು ಸಂಘಟನೆಗಳ 15 ಮಂದಿ ವಿರುದ್ಧ ಮಂಗಳೂರಿನಲ್ಲಿ ಎಫ್​ಐಆರ್ ದಾಖಲಾದ ಬೆನ್ನಲ್ಲೇ, ಕಾಂಗ್ರೆಸ್ ಸರ್ಕಾರದ (Congress Govt) ವಿರುದ್ಧ ವಾಗ್ದಾಳಿ ನಡೆಸಿ ಅವರು ಸಂದೇಶ ಪ್ರಕಟಿಸಿದ್ದಾರೆ. ತಲವಾರು, ಕತ್ತಿ ಝಳಪಿಸಿ ಹತ್ಯೆಯ ಮಾತುಗಳನ್ನಾಡಿದವರ ಮೇಲೆ ಕ್ರಮ ಏಕಿಲ್ಲ? ಕೇವಲ ಹಿಂದೂಗಳ ವಿರುದ್ಧ ಮಾತ್ರ ಏಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಶ್ನಸಿರುವ ಅವರು, ಸರ್ಕಾರದ ಈ ಏಕಪಕ್ಷೀಯ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ‘ಪೊಲೀಸ್ ರಾಜ್’ (Police Raj) ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿದೆ. ದ್ವೇಷ ಭಾಷಣ ನಿಯಂತ್ರಣ ನೆಪದಲ್ಲಿ ಕಲಡ್ಕ ಪ್ರಭಾಕರ ಭಟ್ ಸೇರಿದಂತೆ ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡವರ ಮೇಲೆ ಅನಗತ್ಯವಾಗಿ ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಸುನೀಲ್ ಕುಮಾರ್ ಆರೋಪಿಸಿದರು.

ಹಿಂಸೆಗೆ ಪ್ರೇರೇಪಣೆ ನೀಡಿದವರ ವಿರುದ್ಧ ಕ್ರಮ ಯಾಕಿಲ್ಲ

ಖುದ್ದು ರಾಜ್ಯ ಸರ್ಕಾರವೇ ‘ದ್ವೇಷ ಭಾಷೆ’ಯ ಪ್ರಚಾರ ನಡೆಸುತ್ತಿದ್ದು, ನಿರ್ದಾಕ್ಷಿಣ್ಯ ಕ್ರಮವನ್ನು ಹಿಂದು ಸಂಘಟನೆಗೆ ಸೀಮಿತಗೊಳಿಸುತ್ತಿದೆ. ಅಷ್ಟಕ್ಕೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ಹಾಗೂ ಹಿಂಸೆಗೆ ಪ್ರೇರಣೆ ನೀಡಿದವರು ಯಾರು? ತಲವಾರು, ಕತ್ತಿ ಝಳಪಿಸಿ ಹತ್ಯೆಯ ಮಾತುಗಳನ್ನು ಆಡಿದವರನ್ನು ಪೊಲೀಸರು ಏಕೆ ಮುಟ್ಟುತ್ತಿಲ್ಲ ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದವರಿಗೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ರವಾನಿಸಿದವರ ಮೇಲೆ ಮಾತ್ರ ನಿಮ್ಮ ಕಾನೂನು‌ ಕ್ರಮವೇ ಎಂದು ಸುನೀಲ್ ಕುಮಾರ್ ಸರ್ಕಾರವನ್ನು ಪ್ರಶ್ನಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅರುಣ್ (SP Arun) ಭಾನುವಾರವೇ ಕಟ್ಟುನಿಟ್ಟಿನ ಕ್ರಮ ಆರಂಭಿಸಿದ್ದು, ಖುದ್ದು ಕಾರ್ಯಾಚರಣೆಗೆ ಇಳಿದಿದ್ದರು. ಅದರ ಬೆನ್ನಲ್ಲೇ, ಕಲ್ಲಡ್ಕ ಪ್ರಭಾಕರ ಭಟ್ ಸೇರಿ 15 ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಅತ್ತ ಪುತ್ತೂರಿನ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ (Arun Kumar Puttila) ಅವರಿಗೆ ಕಲಬುರಗಿಯ ಶಹಾಬಾದ್​ಗೆ (Kalburgi District Shahabad) ಗಡೀಪಾರು ಮಾಡಿ ನೋಟಿಸ್ ನೀಡಲಾಗಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಸುನೀಲ್ ಕುಮಾರ್ (V Sunil Kumar) ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags: BJPBJP Indiabjp karnatakaBSYBY VijayendraChakravarthi SUlibeleCongress PartyDakshina KannadaDK ShivakumarDr G ParameshwarKarnatakaLaw and ordermangalore city policePutturusiddaramaiahSulyasunil kumarಬಿಜೆಪಿ
Previous Post

ವಿವಾದದ ಬಿರುಗಾಳಿ ಮಧ್ಯೆ ಕಮಲ್ ಭೇಟಿಯಾದ ರಂಜಿನಿ ರಾಘವನ್ – ..?! 

Next Post

ಆರ್ ಸಿ ಬಿ ಕಪ್ ಗೆಲ್ತೀವಿ ಎಂದ ಡಿಸಿಎಂ ಡಿಕೆ ಶಿವಕುಮಾರ್..!

Related Posts

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..
Top Story

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..

by ಪ್ರತಿಧ್ವನಿ
May 17, 2026
0

ಬೆಂಗಳೂರು : ಪಂಜಾಬ್​ ಕಿಂಗ್ಸ್​ ವಿರುದ್ಧ ನಡೆದ ಐಪಿಎಲ್​ 2026ರ 61ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿದ್ದು ಗೆಲುವಿನ ರಣಕೇಕೆ ಹಾಕಿದೆ...

Read moreDetails
ಚಂಡ ಮಾರುತ ಬರುವ ಮುನ್ನ ಶಾಂತವಾಗಿರುತ್ತೆ : ಇರಾನ್‌ ಮೇಲೆ ಟ್ರಂಪ್ ಮತ್ತೆ ದಾಳಿಯ ಮುನ್ಸೂಚನೆ..!

ಚಂಡ ಮಾರುತ ಬರುವ ಮುನ್ನ ಶಾಂತವಾಗಿರುತ್ತೆ : ಇರಾನ್‌ ಮೇಲೆ ಟ್ರಂಪ್ ಮತ್ತೆ ದಾಳಿಯ ಮುನ್ಸೂಚನೆ..!

May 17, 2026
ಅಬ್ಬರಿಸಿದ ಆರ್‌ಸಿಬಿ ರನ್‌ ಮಷಿನ್‌ ಕೊಹ್ಲಿ : ಪಂಜಾಬ್‌ಗೆ ಬೃಹತ್‌ ಮೊತ್ತದ ಟಾರ್ಗೆಟ್‌..!

ಅಬ್ಬರಿಸಿದ ಆರ್‌ಸಿಬಿ ರನ್‌ ಮಷಿನ್‌ ಕೊಹ್ಲಿ : ಪಂಜಾಬ್‌ಗೆ ಬೃಹತ್‌ ಮೊತ್ತದ ಟಾರ್ಗೆಟ್‌..!

May 17, 2026
ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

May 17, 2026
KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

May 17, 2026
Next Post

ಆರ್ ಸಿ ಬಿ ಕಪ್ ಗೆಲ್ತೀವಿ ಎಂದ ಡಿಸಿಎಂ ಡಿಕೆ ಶಿವಕುಮಾರ್..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada