150 ಜನ ಫ್ಯಾಮಿಲಿಗಳು ಸೇರಿ ಮಿಸ್ಟರ್ ರಾಣಿಗೆ ಕೋಟಿಗಟ್ಟಲೆ ದುಡ್ಡು ಧೈರ್ಯವಾಗಿ ಸುರಿದಿರುವುದಕ್ಕೆ ಕಾರಣವೇನು ಗೊತ್ತಾ ??
ಈ ಚಿತ್ರದ ಕತೆಯನ್ನು ನಿರ್ದೇಶಕ ಮಧುಚಂದ್ರ ಸುಮಾರು 700 ಜನಕ್ಕೆ ಹೇಳಿದ್ದಾರೆ !!! ಅವರಿಂದ ಫೀಡ್ ಬ್ಯಾಕ್ ತೆಗೆದುಕೊಂಡರು. ಅದರ ವೀಡಿಯೋ ಕೂಡ ಮಾಡಿದರು !! ಈ ಕತೆಯನ್ನು ತುಂಬಾ ಜನರು ಇಷ್ಟಪಡುತ್ತಾರೆ ಎಂದು ಖಚಿತ ಪಡಿಸಿಕೊಂಡ ನಂತರ ಮುಂದಿನ ಹೆಜ್ಜೆ ಇಟ್ಟಿದ್ದಾರೆ.
ಅವರ ಈ ಪ್ರಾಮಾಣಿಕ ಮತ್ತು ವಿಭಿನ್ನ ಪ್ರಯತ್ನ ನೋಡಿ ಅವರಿಗೆ 150 ಜನ ಫ್ಯಾಮಿಲಿಗಳು ಸೇರಿ ಚಿತ್ರ ನಿರ್ಮಿಸಲು ಮುಂದೆ ಬಂದರು.
ಚಿತ್ರದ ರಿಲೀಸ್ ಮುಂಚೆಯೇ ಚಿತ್ರತಂಡದ 150 ಜನ ನಿರ್ಮಾಪಕರು ತಮ್ಮ ಫ್ಯಾಮಿಲಿ, ನೆಂಟರು, ಗೆಳೆಯರು ಎಲ್ಲರನ್ನೂ ಸೇರಿದಂತೆ ಸುಮಾರು 2 ಸಾವಿರ ಜನಕ್ಕೆ ಈಗಾಗಲೇ ಸಿನಿಮಾ ತೋರಿಸಿದ್ದಾರೆ. ಅವರೆಲ್ಲ ನೋಡಿ ಭೇಷ್ ಹೇಳಿದ ನಂತರವೇ ಸಿನಿಮಾ ಪ್ರಚಾರಕ್ಕೆ ಲಕ್ಷಗಟ್ಟಲೆ ಧೈರ್ಯವಾಗಿ ಸುರಿದಿದ್ದಾರೆ..ತಮ್ಮ ಚಿತ್ರವನ್ನು ಮೊದಲೇ ಪ್ರೇಕ್ಷಕರಿಗೆ ತೋರಿಸಿ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿ ನಂತರ ಇಡೀ ಕನ್ನಡ ಪ್ರೇಕ್ಷಕರ ಮುಂದೆ ಸಿನಿಮಾ ರಿಲೀಸ್ ಮಾಡುವ ವಿಧಾನವನ್ನು ನಿರ್ದೇಶಕ ಮಧುಚಂದ್ರ ಅವರಿಗೆಲ್ಲಾ ಹೇಳಿದಾಗ ಎಲ್ಲರಿಗೂ ಇದು ಸರಿ ಎನ್ನಿಸಿ ಹೀಗೆ ಮಾಡಿದ್ದಾರೆ..
ಸುಮಾರು 200 ಜನರಂತೆ 10 ಶೋಸ್ ಗಳನ್ನು ಸಣ್ಣ ಪ್ರಮಾಣದ ಥಿಯೇಟರ್ ನಲ್ಲಿ ಮಾಡಿ ಪರೀಕ್ಷೆ ಮಾಡಿದ್ದಾರೆ..
ಇದು ಇಡೀ ಕನ್ನಡ ಚಿತ್ರರಂಗಕ್ಕೆ ಒಂದು ರೀತಿಯಲ್ಲಿ ಹೊಸ ಮಾದರಿ ಮಾರ್ಗವನ್ನು ತೋರಿಸಿಕೊಟ್ಟಿದೆ.
ಸಕ್ಸಸ್ ಆಗಿರುವ ಮಿಸ್ಟರ್ ರಾಣಿ ತಂಡದ ಪ್ರಚಾರ ತಂತ್ರಗಳು :
- ಟೈಟಲ್ ರಿಲೀಸ್ ಮಾಡಲು ಕಮಲ್ ಹಾಸನ್ ಕರೆಸುತ್ತೇವೆ ಎಂದು ಹೇಳಿ ಹಾಸನ ದಿಂದ ಕಮಲ ಎನ್ನುವ ಹೆಸರಿನ ಮಹಿಳೆಯನ್ನು ಕರೆಸಿ ನಿರ್ದೇಶಕ ಮಧುಚಂದ್ರ ಎಲ್ಲರಿಗೂ ಶಾಕ್ ಕೊಟ್ಟಿದ್ದರು !!!
- ಮರ್ಲಿನ್ ಮನ್ರೋ ಗೆಟಪ್ ಹಾಕಿಕೊಂಡ ರಾಣಿ ಒಳಗೆ ಪಟಾಪಟಿ ಚಡ್ಡಿ ಹಾಕಿಕೊಂಡು ನಿಂತ ಪೋಸ್ಟರ್ ಎಲ್ಲಾ ಟ್ರೋಲ್ ಪೇಜುಗಳಲ್ಲೂ ವೈರಲ್ ಆಗಿ ಮೊದಲಿಂದಲೇ ಚಿತ್ರತಂಡದ ಕ್ರಿಯೆಟಿವಿಟಿ ಬಗ್ಗೆ ಜನ ಮೆಚ್ಚುಗೆ ಪಡೆಯಿತು.
- ಉಪೇಂದ್ರ ಅವರ ಯುಐ ಚಿತ್ರದ ರಿಲೀಸ್ ಮುನ್ನವೇ ಅದರ ರಿವ್ಯೂ ಬಗ್ಗೆ ಒಂದು ವೀಡಿಯೋ ರಿಲೀಸ್ ಆಯಿತು. ಅದನ್ನು ಓಪನ್ ಮಾಡಿದಾಗ ಅದರಲ್ಲಿ ಯುಐ ಬಗ್ಗೆ ಹೇಳಿದಂತೆ ಶುರುಮಾಡಿ ಮಿಸ್ಟರ್ ರಾಣಿ ಚಿತ್ರದ ಟ್ರೈಲರ್ ಲಾಂಚ್ ಬಗ್ಗೆ ಮಾಹಿತಿ ನೀಡಿದ್ದು ವೈರಲ್ ಆಗಿತ್ತು.
- ಮ್ಯಾಕ್ಸ್ ಚಿತ್ರದ ಹೀರೋಯಿನ್ ಯಾರು ಎಂದು ಇವರು ಬಿಡುಗಡೆ ಮಾಡಿದ ವೀಡಿಯೋ ಕೂಡ ಜನರಿಗೆ ತುಂಬಾ ಮಜ ಕೊಟ್ಟಿದೆ.
- KRG ಆಫೀಸ್ ಮೇಲೆ ಅಟ್ಯಾಕ್ ಮಾಡುವ ಏಲಿಯೆನ್ಸ್ ಕಾರ್ತಿಕ್ ಮತ್ತು ಯೋಗಿ ಅವರನ್ನು ಕಿಡ್ನಾಪ್ ಮಾಡಿ ಮಂಗಳ ಗ್ರಹಕ್ಕೆ ಕರೆದೊಯ್ದು ಅವರನ್ನು ರಿಲೀಸ್ ಮಾಡಲು ಮಿಸ್ಟರ್ ರಾಣಿ ಚಿತ್ರವನ್ನು ಮೊದಲು ಮಂಗಳ ಗ್ರಹದಲ್ಲಿ ರಿಲೀಸ್ ಮಾಡಬೇಕೆಂಬ ಕಂಡೀಷನ್ ಹಾಕುತ್ತಾರೆ. ಈ ವೀಡಿಯೋ ಕೂಡ ವೈರಲ್ ಆಗಿ ಚಿತ್ರತಂಡದ ಕ್ರಿಯೆಟಿವಿಟಿಯನ್ನು ಎತ್ತಿ ತೋರಿಸುತ್ತದೆ.
6 . ಹೀರೋ ಸೈಕೋ ಜಯಂತ್ ಆಲಿಯಾಸ್ ದೀಪಕ್ ಸುಬ್ರಹ್ಮಣ್ಯ ಈಗಾಗಲೇ ಕರ್ನಾಟಕದ ಎಲ್ಲಾ ಪ್ರಮುಖ ಜಿಲ್ಲೆಗಳಿಗೂ ಭೇಟಿ ನೀಡಿ ಚಿತ್ರದ ಪ್ರಚಾರ ಮಾಡಿದ್ದಾರೆ. ಈ ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಬೆಸ್ಟ್ ಹೀರೋ ಮತ್ತು ಹೀರೋಯಿನ್ ಅವಾರ್ಡ್ ದೀಪಕ್ ಸುಬ್ರಹ್ಮಣ್ಯ ಅವರಿಗೆ ಬರಬಹುದು ಎಂದು ಚಿತ್ರ ನೋಡಿದ ತುಂಬಾ ಜನ ಹೇಳಿದ್ದಾರೆ !!! ಇದು ಒಬ್ಬ ನಟನ ಆಕ್ಟಿಂಗ್ ಬಗ್ಗೆ ಸಿಕ್ಕ ಅತೀ ದೊಡ್ಡ ಪ್ರಶಸ್ತಿ ಎನ್ನ ಬಹುದು !!!
ಹೀಗಾಗಿ ಈ ಚಿತ್ರದ ಬಗ್ಗೆ ಈಗಾಗಲೇ ಸಿನಿಪ್ರಿಯರಲ್ಲಿ ದೊಡ್ಡ ಮಟ್ಟದ ಕ್ರೇಜ್ ಕ್ರಿಯೇಟ್ ಮಾಡಿದೆ!!
ಫೆಬ್ರವರಿ 7ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.