ಮಹಾರಾಷ್ಟ್ರ ರಾಜಕಾರಣದಲ್ಲಿ ತೀವ್ರ ಗದ್ದಲ ಎಬ್ಬಿಸಿದ ಹನುಮಾನ್ ಚಾಲೀಸಾ ಪಠಣೆಯನ್ನು ರವಿ ರಾಣಾ ಹಾಗೂ ನವನೀತ್ ಕೌರ್ ರಾಣಾ ಕೈ ಬಿಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ರಾಣಾ ದಂಪತಿಗಳು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಮುಂಬೈಗೆ ಭೇಟಿ ನೀಡುತ್ತಿದ್ದು ಆ ಕಾರಣಕ್ಕಾಗಿ ಕಾರ್ಯಕ್ರವನ್ನು ರದ್ದುಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೊಂದು ಮೂಲಗಳು ತಿಳಿಸುವುದೇನೆಂದರೆ ಶಿವಸೇನಾ ಕಾರ್ಯಾಕರ್ತರು ರಾಣಾ ನಿವಾಸದೆದುರು ಜಮಾಯಿಸಿದ್ದ ಕಾರಣ ದಂಪತಿಗಳು ಮನೆಯಿಂದ ಹೊರಬರಲಾಗದೆ ಕಾರ್ಯಕ್ರಮವನ್ನು ಕೈ ಬಿಟ್ಟಿದ್ದಾಗಿ ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ಶಿವಸೇನಾ ವಕ್ತಾರ ರಾಜ್ಯಸಭಾ ಸಂಸದ ಸಂಜಯ್ ರಾವುತ್ ರಾಣಾ ದಂಪತಿಗಳನ್ನು ಬಂಟಿ-ಬಬ್ಲಿ ಎಂದು ಕರೆದಿದ್ದಾರೆ. ಇದರ ಹಿಂದೆ ಬಿಜೆಪಿಯ ಕೈವಾಡವಿದೆ. ನವನೀತ್ ಕೌರ್ರವರ ಜಾತಿ ಪ್ರಮಾಣಪತ್ರದ ಮೊಕದ್ದಮೆಯ ವಿಚಾರಣೆ ಇನ್ನು ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವುದನ್ನು ಮರೆಯಬಾರದು ಎಂದು ಎಚ್ಚರಿಸಿದ್ದಾರೆ.