2022ರಲ್ಲಿ ಲಿವ್-ಇನ್-ರಿಲೇಷನ್‌ಶಿಪ್ ಮೂಲಕ ಸಾಕಷ್ಟು ಸದ್ದು ಮಾಡಿದ ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಹೊಸ ಜೀವನಕ್ಕೆ ನಾಂದಿ ಹಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನರೇಶ್ ಕೇಕ್ ಕತ್ತರಿಸಿ ಚುಂಬಿಸುವ ಮೂಲಕ ಹೊಸ ದಾಂಪತ್ಯಕ್ಕೆ ಅಡಿಯಿಡುವುದಾಗಿ ಮತ್ತು ಎಲ್ಲರೂ ಶುಭ ಹಾರೈಸುವಂತೆ ಕೋರಿದ್ದಾರೆ.
2022ರ ಜುಲೈ ತಿಂಗಳಲ್ಲಿ ನರೇಶ್ ಪತ್ನಿ ರಮ್ಯಾ ರಘುಪತಿ ಪವಿತ್ರಾಲೋಕೇಶ್ ನನ್ನ ಪತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಮತ್ತು ಪವಿತ್ರಾ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಲು ರಮ್ಯಾ ಮುಂದಾಗಿದ್ದರು.