ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಬಂಧನವನ್ನು ಎನ್ಕ್ಯಾಶ್ ಮಾಡಿಕೊಳ್ಳಲು ಬಿಜೆಪಿ, ಜೆಡಿಎಸ್ ಮುಂದಾಗಿರುವುದಕ್ಕೆ ಕಾಂಗ್ರೆಸ್ ಡಿ.ಎಸ್ ವೀರಯ್ಯ (DS Veeriah arrest)ಬಂಧನದ ವಿಚಾರವನ್ನು ಪ್ರತ್ಯಾಸ್ತ್ರವನ್ನಾಗಿ ಮಾಡಿಕೊಂಡಿದೆ. ಕಾಂಗ್ರೆಸ್ ವಕ್ತಾರ ರಮೇಶ್ ಬಾಬು (Congress spokesperson Ramesh Babu)ಈ ಬಗ್ಗೆ ಮಾತನಾಡಿ ಡಿ.ಎಸ್ ವೀರಯ್ಯ ತಲೆಮರೆಸಿಕೊಂಡಿದ್ರು. ತಮಿಳುನಾಡಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ನೆರವಿನಲ್ಲಿ ಆಶ್ರಯ ಪಡೆದಿದ್ದರು. ಅವರ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್ನಲ್ಲಿ ವಜಾಗೊಂಡಿದೆ. ಈ ಸಂಬಂಧ ಪೊಲೀಸರು ಬಂಧಿಸಿದ್ದಾರೆ ಎಂದಿದ್ದಾರೆ. ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷರು ನೀವೇ ಅಲ್ವಾ ಅಂತ ತುಂಬಾ ಫೋನ್ ಕಾಲ್ಗಳು ಬರುತ್ತಿವೆ. ನಾನು ಟ್ರಕ್ ಟರ್ಮಿನಲ್ ಅಧ್ಯಕ್ಷ ಸ್ಥಾನ ಪಡೆದಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಗಮನಕ್ಕೆ ತಂದು ಆ ಹುದ್ದೆಯನ್ನ ನಿರಾಕರಿಸಿದ್ದೇನೆ. ಟ್ರಕ್ ಟರ್ಮಿನಲ್ನಲ್ಲಿ ಅಕ್ರಮವಾಗಿ ಮೂರು ಸಂಸ್ಥೆಗಳಿಗೆ 50 ಕೋಟಿ ಕೊಟ್ಟಿದ್ದಾರೆ. ಈ ಸಂಬಂಧ ವೀರಯ್ಯರನ್ನ ಬಂಧಿಸಿದ್ದಾರೆ. ಈ ಹಗರಣದಲ್ಲಿ ಬಿ.ಶ್ರೀರಾಮುಲು ಕೂಡ ಭಾಗಿಯಾಗಿದ್ದಾರೆ. ಅವರ ಅವಧಿಯಲ್ಲಿ 200 ಕೋಟಿಗೂ ಹೆಚ್ಚು ಅವ್ಯವಹಾರ ಆಗಿದೆ ಎಂದಿದ್ದಾರೆ ರಮೇಶ್ ಬಾಬು.ಡಿ.ಎಸ್ ವೀರಯ್ಯ ಅಧ್ಯಕ್ಷರಾಗಿದ್ದಾಗ ಅಂದು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಶ್ರೀರಾಮುಲು ಅಂದು ಸಾರಿಗೆ ಸಚಿವರಾಗಿದ್ದರು. ಇದೇ ವೇಳೆ ಈ ಅಕ್ರಮದ ಆರೋಪ ಬಂದಿದೆ. ಅವ್ಯವಹಾರದ ಬಗ್ಗೆ ಎಂಡಿ ಪತ್ರ ಬರೆಯುತ್ತಾರೆ. ಆ ಪತ್ರದ ಬಗ್ಗೆ ಶ್ರೀರಾಮುಲು ಗಮನಹರಿಸಲ್ಲ. ಬಸವರಾಜ ಬೊಮ್ಮಾಯಿ ಮೌಖಿಕ ಆದೇಶ ನೀಡ್ತಾರೆ. ಹೀಗಾಗಿ ಅಕ್ರಮದ ಬಗ್ಗೆ ಯಾವುದೇ ಕ್ರಮ ಆಗಿಲ್ಲ. ನಮ್ಮ ಸರ್ಕಾರ ಬಂದ ನಂತರ ಪ್ರಕರಣ ದಾಖಲಾಗಿದೆ. ಸರ್ಕಾರ ಸಿಐಡಿಗೆ ಕೇಸ್ ಕೊಟ್ಟಿದೆ. ಸಿಐಡಿಗೆ ಕೊಟ್ಟ ನಂತರ ಎಂಡಿ ಬಂಧಿಸಲಾಗಿದೆ. ಡಿ.ಎಸ್.ವೀರಯ್ಯ ಅವರನ್ನೂ ಬಂಧಿಸಲಾಗಿದೆ. ವೀರಯ್ಯ ಮೂರು ತಿಂಗಳು ತಲೆಮರೆಸಿಕೊಂಡಿದ್ದರು. ವೀರಯ್ಯಗೆ ಅಣ್ಣಾಮಲೈ ರಕ್ಷಣೆ ಕೊಟ್ಟಿದ್ದರು. ಅಲ್ಲಿಂದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನ ಕೋರ್ಟ್ ಮಾನ್ಯ ಮಾಡಿಲ್ಲ ಎಂದಿದ್ದಾರೆ. ಅರಸು ಟ್ರಕ್ ಟರ್ಮಿನಲ್ ಪ್ರಕರಣದಲ್ಲಿ ಕೇವಲ 50 ಕೋಟಿ ಅಕ್ರಮವಲ್ಲ. ಅದಕ್ಕಿಂತ ಹೆಚ್ಚು ಹಣ ಅವ್ಯವಹಾರವಾಗಿದೆ. ಅಂದಿನ ಎಂಡಿ, ಅಧ್ಯಕ್ಷರು ಭಾಗಿ ಆಗಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ರಮೇಶ್ ಬಾಬು ಆರೋಪ ಮಾಡಿದ್ದಾರೆ. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಪರಿಣಗಣಿಸಬೇಕು. ಮಾಜಿ ಸಿಎಂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಶ್ರೀರಾಮುಲು ಮೇಲೂ ಕೇಸ್ ಹಾಕಬೇಕು ಎಂದು ರಾಜ್ಯ ಸರ್ಕಾರಕ್ಕೆ ರಮೇಶ್ ಬಾಬು ಒತ್ತಾಯ ಮಾಡಿದ್ದಾರೆ. ಒಟ್ಟಾರೆ ರಾಜ್ಯ ಸರ್ಕಾರ ವಾಲ್ಮೀಕಿ ಹಗರಣದಲ್ಲಿ ಸಿಲುಕಿರುವಾಗ ಕಾಂಗ್ರೆಸ್ಗೆ ಅರಸು ಟ್ರಕ್ ಟರ್ಮಿನಲ್ ಸಂಜೀವಿನಿ ಸಿಕ್ಕಂತಾಗಿದೆ. ರಮೇಶ್ ಬಾಬು ಕಂಪ್ಲೀಟ್ ಮಾಹಿತಿ ಕೊಟ್ಟು ಕೇಸರಿ ಪಾಳಯಕ್ಕೆ ಶಾಕ್ ಕೊಟ್ಟಿದ್ದಾರೆ.
ಅಂಬೇಡ್ಕರ್ ಬಗ್ಗೆ ಅಮಿತ್ ಷಾ ಮಾತು.. ದೇಶಾದ್ಯಂತ ಪ್ರತಿಭಟನೆ..
ರಾಜ್ಯಸಭೆ ಕಲಾಪದಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿದ ಮಾತುಗಳು ಜನರ ಆಕ್ರೋಶಕ್ಕೆ ಕಾರಣ ಆಗಿವೆ. ಅದರಲ್ಲು ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್...
Read moreDetails