ವಿಧಾನ ಪರಿಷತ್ತಿನ ನಾಲ್ಕು ನಾಮ ನಿರ್ದೇಶಿತ ಸ್ಥಾನಗಳ ಆಯ್ಕೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಪೂರ್ಣಗೊಳಿಸಿದ್ದು ರಮೇಶ್ ಬಾಬು,ಆರತಿಕೃಷ್ಣ,ಡಾ.ಕೆ.ಶಿವಕುಮಾರ್ ಮತ್ತು ಜಕ್ಕಪ್ಪನವರ್ ಅವರಿರುವ ಪಟ್ಟಿಯನ್ನು ಅಂತಿಮಗೊಳಿಸಿದೆ.

ಕಾಂಗ್ರೆಸ್ ವರಿಷ್ಟರು ಅಂತಿಮಗೊಳಿಸಿದ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದ್ದು ಇಂದು ಅಥವಾ ನಾಳೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ
ಈ ಹಿಂದೆ ದಲಿತ ನಾಯಕ ಡಿ.ಜಿ.ಸಾಗರ್,ದಿನೇಶ್ ಅಮೀನ್ ಮಟ್ಟು,ರಮೇಶ್ ಬಾಬು ಮತ್ತು ಆರತಿಕೃಷ್ಣ ಅವರಿದ್ದ ಪಟ್ಟಿಗೆ ಕಾಂಗ್ರೆಸ್ ವರಿಷ್ಟರು ಒಪ್ಪಿಗೆ ನೀಡಿದ್ದರು
ಆದರೆ ಪಟ್ಟಿಗೆ ಹಲವರ ಆಕ್ಷೇಪದ ಹಿನ್ನೆಲೆಯಲ್ಲಿ ಹೈಕಮಾಂಡ್ ತಡೆಯೊಡ್ಡಿತ್ತು
ಅದರೆ ಇದೀಗ ಮೈಸೂರಿನ ಪತ್ರಕರ್ತರಾದ ಡಾ.ಕೆ.ಸಿವಕುಮಾರ್,ಕಾರ್ಮಿಕ ನಾಯಕ ಜಕ್ಕಪ್ಪನವರ್,ಪಕ್ಷದ ವಕ್ತಾರ ರಮೇಶ್ ಬಾಬು ಮತ್ತು ಅರತಿಕೃಷ್ಣ ಅವರಿರುವ ಹೊಸ ಪಟ್ಟಿಯನ್ನು ಅಂತಿಮಗೊಳಿಸಿದೆ ಎಂದು ದಿಲ್ಲಿ ಮೂಲಗಳು ತಿಳಿಸಿವೆ











