ವರುಣ ಅಬ್ಬರಕ್ಕೆ ರಾಮನಗರ ಜಿಲ್ಲೆಯ ಹಲವು ಬಾಗಗಳಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ನೂತನ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ರಸ್ತೆಗಳು ಸಂಪೂರ್ಣ ನೀರಿನಿಂದ ತುಂಬಿದೆ. ಇನ್ನು ಮನೆಗಳಿಗೆ ನೀರು ನುಗ್ಗಿದೆ ಹಾಗೂ ಜಮೀನುಗಳು ನೀರಿನಲ್ಲಿ ಮುಳುಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಮನಗರದಲ್ಲಿ ಕಳೆದ ರಾತ್ರಿ ಶುರುವಾದ ಭಾರಿ ಮಳೆ ಇನ್ನೂ ನಿಂತಿಲ್ಲ ಹಲವು ರಸ್ತೆಗಳು ಜಲಾವೃತ ಸಂಪರ್ಕ ಕಡಿತವಾಗಿದ್ದಲ್ಲದೇ, ಮನೆಗಳಿಗೂ ನೀರು ನುಗ್ಗಿ ನಾಗರಿಕರ ಪರದಾಟ ನಡೆಸಿದ್ದಾರೆ. ಚನ್ನಪಟ್ಟಣ ನಗರದ ಸೇರೋ ಹೋಟೆಲ್ ಸರ್ಕಲ್ ಸಂಪೂರ್ಣ ಜಲಾವೃತವಾಗಿದ್ದು ವಾಹನಗಳು ತೆರಳಲು ಸಾಧ್ಯವಾಗುತ್ತಿಲ್ಲ. ರಾಮನಗರ ಸೀರಹಳ್ಳ ತುಂಬಿ ಪಕ್ಕದಲ್ಲಿದ್ದ ಮನೆಗಳಿಗೆ ಹಾಗೂ ರೇಷ್ಮೆ ಕಾರ್ಖಾನೆಗಳಿಗೆ ಹಳ್ಳದ ನೀರು ಮನೆಯಲ್ಲಿದ್ದ ಅಗತ್ಯ ವಸ್ತುಗಳು ಹಾಗೂ ಕಾರ್ಖಾನೆಯಲ್ಲಿದ್ದ ರೇಷ್ಮೆ ನೂಲು ಮಳೆನೀರಿನಿಂದ ಹಾಳಾಗಿವೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಸರ್ವಿಸ್ ರಸ್ತೆಯೂ ಜಲಾವೃತವಾಗಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು. ಚನ್ನಪಟ್ಟಣದಿಂದ ಹಿಡಿದು ಕುಂಬಳಗೂಡಿನವರೆಗೂ ಅಲ್ಲಲ್ಲಿ ಸಂಪೂರ್ಣ ರಸ್ತೆ ಮುಳುಕಡೆಯಾಗಿದ್ದು ಯಾವುದೆ ವಾಹನಗಳು ತೆರಳಲು ಸಾಧ್ಯವಾಗದೆ. ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದೆ. ಇನ್ನು ಕೆಲವು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿದೆ..
ರಾಮನಗರ ಮತ್ತು ಚನ್ನಪಟ್ಟಣ ರೈಲ್ವೆ ನಿಲ್ದಾಣ ಕೂಡ ಸಂಪೂರ್ಣ ಮುಳುಗಡೆಯಾಗಿದ್ದು ರೈಲು ಸಂಚಾರಕ್ಕು ದೊಡ್ಡ ತಲೆಬಿಸಿಯಾಗಿದೆ. ಸುಮಾರು ರೈಲುಗಳು ಕೂಡ ಸಂಚಾರ ಸ್ಥಗಿತಗೊಳಿಸಲಾಗಿದೆ.