ಕೆಜಿಎಫ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಪಡ್ಡೆ ಹುಡುಗರ ಹಾರ್ಟ್ ಫೇವರೆಟ್ ಆಗಿದ್ದಾರೆ ನಟಿ ಶ್ರೀನಿಧಿ ಶೆಟ್ಟಿ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರೋ ಶ್ರೀನಿಧಿ, ಬಿಡುವಿನ ಸಮಯದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಫೋಟೋ ಶೇರ್ ಮಾಡ್ತಿರ್ತಾರೆ.

ಇತ್ತೀಚೆಗೆ ಶ್ರೀನಿಧಿ ಶೆಟ್ಟಿ ತಮ್ಮ ಕ್ಯೂಟ್ ಫೋಟೋವೊಂದನ್ನ ಇನ್ಸ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ʻಹಾಗೆ ಸುಮ್ಮನೆʼ ಅಂತ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಶ್ರೀನಿಧಿ ಕ್ಯೂಟ್ ಫೋಟೋಗೆ ಫಿದಾ ಆಗಿದ್ದು, ಬಗೆ ಬಗೆಯ ಕಮೆಂಟ್ಸ್ ಮಾಡ್ತಿದ್ದಾರೆ. ಇಲ್ಲಿ ವಿಶೇಷ ಏನಪ್ಪಾ ಅಂತಂದ್ರೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಶ್ರೀನಿಧಿ ಫೋಟೋ ಮಾಡಿರೋದು.

ಹೌದು.. ಶ್ರೀನಿಧಿ ಶೆಟ್ಟಿ ಶೇರ್ ಮಾಡಿರುವ ಫೋಟೋಗೆ, ʻಆವ್ ಶೆಟ್ರೆ.. ಗೊತ್ತಾಂಡ್ ಅಂತ ರಕ್ಷಿತ್ ತುಳು ಭಾಷೆಯಲ್ಲಿ ಕಮೆಂಟ್ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂತಾನೇ ರಕ್ಷಿತ್ ಶೆಟ್ಟಿ ಫೇಮಸ್ಸು… ಸುಖಾ ಸುಮ್ಮನೆ ಯಾರ ಫೋಟೋಗೂ ಕಮೆಂಟ್ ಮಾಡದ ಆಸಾಮಿ. ಅದೂ ಅಲ್ದೇ ಶ್ರೀನಿಧಿ ಹಾಗೂ ರಕ್ಷಿತ್ ಶೆಟ್ಟಿ ಯಾವ ಸಿನಿಮಾದಲ್ಲೂ ಒಟ್ಟಾಗಿ ನಟಿಸಿಲ್ಲ.. ತಾನಾಯ್ತು.. ತನ್ನ ಸಿನಿಮಾ ಆಯ್ತು ಅಂತ ಸೈಲೆಂಟ್ ಆಗಿರೋ ರಕ್ಷಿತ್, ಶ್ರೀನಿಧಿ ಶೆಟ್ಟಿ ಫೋಟೋಗೆ ಯಾಕ್ ಕಮೆಂಟ್ ಮಾಡಿದ್ರು..?

ಶೆಟ್ರಿಗೆ ಶ್ರೀನಿಧಿ ಮೇಲೆ ಕ್ರಶ್ ಏನಾದ್ರೂ ಆಗಿದ್ಯಾ ಅಂತ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಾತ್ನಾಡಿಕೊಳ್ತಿದ್ದಾರೆ. ಒಟ್ನಲ್ಲಿ ರಶ್ಮಿಕಾ ಜೊತೆ ಬ್ರೇಕಪ್ ಆದ್ಮೇಲೆ ಮದುವೆ ಬಗ್ಗೆ ತಲೆನೇ ಕೆಡಿಸಿಕೊಳ್ಳದ ರಕ್ಷಿತ್ ಶೆಟ್ಟಿ ಮುಂದೇನ್ಮಾಡ್ತಾರೆ ಅಂತ ಕಾದುನೋಡ್ಬೇಕಿದೆ.






