ರಕ್ಷಾ ಬಂಧನ ಸಹೋದರ ಸಹೋದರಿಯರ ನಡುವಿನ ಭಾಂಧವ್ಯವನ್ನ ನೆನಪಿಸುವ ಒಂದು ಸಂಪ್ರದಾಯವಾಗಿದೆ. ಭಾರತದಲ್ಲಿ ವಿವಿಧ ಸಮುದಾಯದವರು ಈ ರಕ್ಷಾಬಂಧನವನ್ನು ಆಚರಿಸುತ್ತಾರೆ. ಅದರಲ್ಲೂ ದೇಶದ ವಿವಿಧ ಭಾಗಗಳಲ್ಲಿ ರಕ್ಷಾಬಂಧನವನ್ನು ತುಂಬಾನೇ ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ರೆ ಇನ್ನು ಕೆಲವರು ಬರಿ ರಾಕಿ ಕಟ್ಟಿ ಹಬ್ಬವನ್ನು ಆಚರಿಸುತ್ತಾರೆ. ಮನೆಗಳಲ್ಲಿ ಮಾತ್ರವಲ್ಲದೇ ಶಾಲಾ-ಕಾಲೇಜುಗಳಲ್ಲಿ ಆಫೀಸ್ ಗಳಲ್ಲಿ ಹೆಣ್ಣು ಮಕ್ಕಳು ರಾಕಿಗಳನ್ನ ಗಂಡು ಮಕ್ಕಳಿಗೆ ಕಟ್ಟಿ ಸೆಲೆಬ್ರೇಟ್ ಮಾಡ್ತಾರೆ.
ಅದರಲ್ಲೂ ರಕ್ಷಾಬಂಧನ ಬಂತು ಅಂದ್ರೆ ಪ್ರತಿ ವರ್ಷ ಕೂಡ ಯುದ್ಧವಿಧವಾದ ಡಿಸೈನ್ಗಳು ಮಾರ್ಕೆಟ್ನಲ್ಲಿ ಲಭ್ಯವಾಗುತ್ತದೆ. ಖಾಸಗಿ ತಕ್ಕಂತೆ ಸುಂದರವಾದ ರಾಕಿ ದೊರೆಯುತ್ತದೆ. ಈ ಬಾರಿ ಕೂಡ ವಿಭಿನ್ನವಾದ ವಿಶೇಷವಾದ ಸುಂದರವಾದ ರಾಕಿಗಳು ಮಾರ್ಕೆಟ್ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದು ಈಗಾಗಲೇ ಹೆಚ್ಚು ಜನ ವ್ಯಾಪಾರ ಆರಂಭಿಸಿದ್ದಾರೆ. ಈ ಬಾರಿ ಯಾವ ರೀತಿ ರಾಖಿ ಮಾರ್ಕೆಟ್ನಲ್ಲಿ ವೆ ಅನ್ನೋದರ ಮಾಹಿತಿ ಇಲ್ಲಿದೆ.
ಧಾರ್ಮಿಕ ರಾಖಿ
ಈ ಬಾರಿ ಹೊಸದಾಗಿ ಬಂದಿರುವ ರಾಖಿಗಳಲ್ಲಿ ಆಧ್ಯಾತ್ಮಿಕ ರಾಖಿ ಕೂಡ ಒಂದು. ಈ ರಾಖಿಯಲ್ಲಿ ನವಿಲು ,ಗಣೇಶ ,ಸ್ವಸ್ತಿಕ ,ಓಂ , ರುದ್ರಾಕ್ಷಿ ಎಲ್ಲವೂ ಇದ್ದು. ಬಣ್ಣ ಬಣ್ಣದ ದಾರಗಳನ್ನ ಇದಕ್ಕೆ ಫಿಕ್ಸ್ ಮಾಡಿದ್ದಾರೆ. ನೋಡಲು ತುಂಬಾನೇ ಸುಂದರವಾಗಿ ಹಾಗೂ ಸಾಂಪ್ರದಾಯಿಕವಾಗಿದ್ದು ಜನರ ಮನಸ್ಸನ್ನು ಸೆಳೆಯುತ್ತಿದೆ.
ಮಕ್ಕಳ ರಾಖಿ
ಅಬ್ಬಬ್ಬಾ ಮಕ್ಕಳಿಗಂತನೇ ವಿಶೇಷವಾಗಿ ಈ ರಾಖಿ ನಾ ತಯಾರಿಸಿದ್ದು, ಇದರಲ್ಲಿ ಪೋಕಿಮಾನ್ ,ಡೋರಮನ್, ಛೋಟಾ ಭೀಮ್, ಹೀಗೆ ಸಾಕಷ್ಟು ಕಾರ್ಟೂನ್ ಪಾತ್ರದ ಗೊಂಬೆಗಳನ್ನು ಬಳಸಿ ರಾಖಿ ತಯಾರಿಸಿದ್ದು ಮಕ್ಕಳನ್ನು ಅಟ್ರಾಕ್ಟ್ ಮಾಡುತಿದೆ. ಈ ಭಾರಿ ಬಂದ ಹೊಸ ಕಲೆಕ್ಷನ್ ಗಳಲ್ಲಿ ಇದು ಕೂಡ ಒಂದಾಗಿದೆ. ಕಾರ್ಟೂನ್ ನ ಪ್ರತಿಯೊಬ್ಬ ಮಗುವು ಇಷ್ಟಪಡುತ್ತದೆ..
ಫೋಟೋ ರಾಖಿ
ಬರ್ತಡೇ ಸಂದರ್ಭದಲ್ಲಿ ಮಗ್ ಮೇಲೆ ವ್ಯಕ್ತಿಯ ಚಿತ್ರವನ್ನು ಹಾಕಿ ಅದನ್ನು ಗಿಫ್ಟ್ ಆಗಿ ಕೊಡ್ತಾ ಇದ್ರು. ಕೇಕ್ ಮೇಲೆ ಫೋಟೋವನ್ನು ಹಾಕಿ ಕೇಕ್ ಕಟ್ ಮಾಡಿಸ್ತಾ ಇದ್ರು, ಆದರೆ ಈ ಬಾರಿ ಬಂದಂತಹ ರಾಕಿ ಟ್ರೆಂಡ್ ಅಲ್ಲಿ ನಿಮ್ಮ ಅಣ್ಣ ಅಥವಾ ತಮ್ಮ ನ ಫೋಟೋವನ್ನ ಕೊಟ್ರೆ ಸಾಕು ರಾಕಿಯನ್ನು ರಾಖಿಯನ್ನು ರೆಡಿ ಮಾಡಿ ಕೊಡ್ತಾರೆ. ಇದೊಂದು ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದೆ. ನೋಡಲು ಸುಂದರವಾಗಿದ್ದು ನೆನಪಿನಲ್ಲಿ ಉಳಿಯುವಂತಾಗಿದೆ ಆದರೆ ಸ್ವಲ್ಪ ದುಬಾರಿಯಾಗಿದೆ..
ಬ್ರೇಸ್ಲೆಟ್
ದಾರವನ್ನ ಬಳಸಿ ರಾಖಿ ತಯಾರಿಸಲಾಗುತ್ತದೆ, ಆದರೆ ಈ ಬಾರಿ ಮಾರ್ಕೆಟ್ಗೆ ಬಂದ ರಾಕಿಗಳು ಬ್ರೇಸ್ಲೆಟ್ ರೀತಿ ತಯಾರಿಸಿದ್ದು ನೋಡಲು ಅದ್ಭುತವಾಗಿದೆ.ಇದ್ರಲ್ಲಿ ಮಣಿಗಳು, ರುದ್ರಾಕ್ಷಿ, ಪೆಂಡೆಂಟ್ ಗಳನ್ನ ಬಳಸಿದ್ದಾರೆ ಹಾಗೂ ಫಿಕ್ಸ್ ಮಾಡಲು ಹುಕ್ ನೀಡಿದ್ದಾರೆ.
ಇಷ್ಟು ಮಾತ್ರವಲ್ಲದೇ ಹ್ಯಾಂಡ್ ಮೇಡ್ ರಾಕಿ, ಕುಂದನ್ ರಾಖಿ, ನವರತ್ನ, ಚಿನ್ನ ಹಾಗೂ ಬೆಳ್ಳಿಯಿಂದ ತಯಾರಿಸಿದ ರಾಖಿ ಹೀಗೆ ಸಾಕಷ್ಟಿವೆ. ಇನ್ನೂ ವಿಭಿನ್ನವಾದ ಕಲೆಕ್ಷನ್ ಗಳು ಮಾರ್ಕೆಟ್ನಲ್ಲಿ ಲಭ್ಯವಿದ್ದು ಯಾವುದೇ ಯೋಚನೆ ಇಲ್ಲದೆ ರಾಕಿಯನ್ನು ಪರ್ಚೇಸ್ ಮಾಡಿ ಹಬ್ಬವನ್ನು ಸೆಲೆಬ್ರೇಟ್ ಮಾಡಿ.